ಶಿರಸಿ ಬಿಜೆಪಿ ಸಭೆಯಲ್ಲಿ ಒಟ್ಟಾದ ಕಾಗೇರಿ ,ಅನಂತಕುಮಾರ್ ಹೆಗಡೆ! ಕೈಕೊಟ್ಟ ಜಿಲ್ಲಾ ನಾಯಕರು-ಚರ್ಚೆಯಾಗಿದ್ದೇನು?

TextMaster 01 23 10.16.12 TextMaster 01 23 10.16.12

ಶಿರಸಿ :- ಲೋಕಸಭಾ ಬಿಜೆಪಿ ಟಿಕೇಟ್ ಆಕಾಂಕ್ಷಿಗಳಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಶಿರಸಿಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಒಟ್ಟಿಗೆ ಸೇರಿ ಸಭೆ ನಡೆಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಹೌದು ಜಿಲ್ಲಾ ಬಿಜೆಪಿ ಅಧ್ಯಕ್ಷರ ಬದಲಾವಣೆ ನಂತರ ತಾಲೂಕು ಮಟ್ಟದಲ್ಲಿ ಬಿಜೆಪಿ(Bjp) ತಾಲೂಕು ಅಧ್ಯಕ್ಷರನ್ನು ನೇಮಿಸುವ ಕುರಿತು ಸಭೆ ಕರೆಯಲಾಗಿತ್ತು. ಈ ಸಭೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಮಾಜಿ ಶಾಸಕ ಸುನಿಲ್ ನಾಯ್ಕ, ಮುಂತಾದ ಪ್ರಮುಖ ನಾಯಕರು ಗೈರಾದರೇ ,ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ, ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ,ಭಟ್ಕಳದ ಗೋವಿಂದನಾಯ್ಕ, ಸಿದ್ದಾಪುರದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜಿ ನಾಯ್ಕ,ಮಾಜಿ ಶಾಸಕ ಸುನೀಲ್ ಹೆಗಡೆ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಉಷಾ ಹೆಗಡೆ ಸೇರಿದಂತೆ ಮುಂತಾದವರು ಸಭೆಗೆ ಹಾಜುರಾಗಿದ್ದರು.

ಇದನ್ನೂ ಓದಿ:-Uttrakannada|ಲೋಕಸಭೆ ಚುನಾವಣೆ ಸ್ಪರ್ದೆ ಮಾಡುವ ಆಕಾಂಕ್ಷೆ ವ್ಯಕ್ತಪಡಿಸಿದ ಕಾಗೇರಿ!

Advertisement


ಸಭೆಯಲ್ಲಿ ತಾಲೂಕು ಮಟ್ಟದ ಅಧ್ಯಕ್ಷರು ಸೇರಿದಂತೆ ಪ್ರಮುಖ ಸ್ಥಾನಗಳಿಗೆ ನೇಮಕ ಕುರಿತು ಚರ್ಚೆಯಾಗಿದೆ. ಆದ್ರೆ ಬಿಜೆಪಿಯ ಜಿಲ್ಲಾ ಕೋರ್ ಕಮಿಟಿ ಸಭೆಗೆ ಕರೆದ ಹಲವರು ಗೈರಾಗಿದ್ದರಿಂದ ಸಭೆ 20 ನಿಮಿಷದೊಳಗೆ ಮುಗಿಯುಂತಾಯಿತು.

ದೀಡೀರ್ ಎಂದು ಬಂದ ಸಂಸದ!

ಇನ್ನು ಔಪಚಾರಿಕವಾಗಿ ಸಂಸದ ಅನಂತಕುಮಾರ್ ಹೆಗಡೆಗೂ ಸಹ ಸಭೆಗೆ ಆಹ್ವಾನ ನೀಡಲಾಗಿತ್ತು. ಆದರೇ ಸಂಸದರು ಈ ಸಭೆಗೆ ಬರುವುದು ಅನುಮಾನವಿತ್ತು. ಇದಲ್ಲದೇ ಪಕ್ಷದ ಕಾರ್ಯಚಟುವಟಿಕೆಯಿಂದ ದೂರವಿದ್ದ ಸಂಸದರು ಇದೀಗ ಮೊದಲ ಬಾರಿ ಜಿಲ್ಲಾ ಮಟ್ಟದ ಸಭೆಗೆ ಆಗಮಿಸಿದ್ದು ಎಲ್ಲರಿಗೂ ಆಶ್ಚರ್ಯವುಂಟುಮಾಡಿತ್ತು. ಇನ್ನು ಕಾಗೇರಿ ಬಹುತೇಕ ಸಭೆಗಳಿಗೆ ಹಾಜುರಾಗುತ್ತಾರೆ.ಈ ಬಾರಿ ಸಹ ಸಭೆಗೆ ಹಾಜುರಾಗಿದ್ದರು.

IMG 20240120 223326

ಇನ್ನು ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ (election )ಅಸಮದಾನ ಗೊಂಡ ನಾಯಕರ ಉಪಸ್ಥಿತಿ ಬಿಜೆಪಿ ಗರಡಿಗೆ ಬಲದ ಜೊತೆ ಆತಂಕ ತಂದೊಡ್ಡಿದೆ. ಇದೀಗ ಯಾರ ಬೆಂಬಲಿಗರಿಗೆ ಎಲ್ಲಿ ಯಾವ ಸ್ಥಾನ ನೀಡಬೇಕು ಎಂಬ ಚರ್ಚೆ ಸಹ ಹುಟ್ಟು ಹಾಕಿದ್ದು, ಮುಂದೆ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಲಿದೆ.

ಎದುರುಬದರಾದ ನಾಯಕರು!
ಈ ಸಭೆಯಲ್ಲಿ ಅನಿರೀಕ್ಷಿತವಾಗಿ ಕಾಗೇರಿ,ಹೆಗಡೆ ಎದುರುಬದರಾಗಿದ್ದಾರೆ. ಆದ್ರೆ ಲೋಕಸಭೆ ಚುನಾವಣೆ ಸಂಬಂಧ ಯಾವುದೇ ಚರ್ಚೆಗಳಾಗಿಲ್ಲ ಎನ್ನುತ್ತದೆ ಮೂಲಗಳು.

ಹೀಗಾಗಿ ಕಾಗೇರಿಯವರು ಈ ಬಾರಿ ಲೋಕಸಭೆಗೆ ಸ್ಪರ್ದೆ ಮಾಡುವ ಯೋಚನೆಯಿಂದ ಹಿಂದೆಸರಿದಿಲ್ಲ,ಹಾಗೇಯೇ ಅನಂತಕುಮಾರ್ ಹೆಗಡೆ ಸಹ ಪಟ್ಟು ಬಿಡುತ್ತಿಲ್ಲ. ಇನ್ನು ಸಭೆಯಲ್ಲಿ ಸಹ ಅನಂತಕುಮಾರ್ ಹೆಗಡೆ, ಕಾಗೇರಿ ಬಣದ ಬಲಪ್ರದರ್ಶನ ಎನ್ನುವಂತೆ ತೋರುತಿದ್ದು ಇಬ್ಬರು ನಾಯಕರ ಉಪಸ್ಥಿತಿ ಕೆಲವೇ ಸಮಯದಲ್ಲಿ ಸಭೆ ಮುಕ್ತಾಯ ಕಾಣುವಂತಾಯಿತು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement