BREAKING NEWS
Search

Uttrakannada|ಲೋಕಸಭೆ ಚುನಾವಣೆ ಸ್ಪರ್ದೆ ಮಾಡುವ ಆಕಾಂಕ್ಷೆ ವ್ಯಕ್ತಪಡಿಸಿದ ಕಾಗೇರಿ!

98

ಬೆಂಗಳೂರು :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಯಾರು ಬಿಜೆಪಿ ಅಭ್ಯರ್ಥಿ ಆಗಬೇಕು ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿರುಬಾಗಲೇ ಚುನಾವಣೆಗೆ ಸ್ಪರ್ದೆ ಮಾಡೋಲ್ಲ ಎಂದಿದ್ದ ಸಂಸದ ಅನಂತಕುಮಾರ್ ಹೆಗಡೆ ಸ್ಪರ್ದಿಸುವ ಇಂಗಿತವನ್ನು ತಮ್ಮ ಬೆಂಬಲಿಗರಲ್ಲಿ ಹೇಳಿಕೊಂಡಿದ್ದರು.ಇದರ ಜೊತೆ ಉತ್ತರ ಕನ್ನಡ ಜಿಲ್ಲೆಯಿಂದ ಪಕ್ಷದಿಂದ ಸ್ಪರ್ಧಿಸಲು ಮಾಜಿ ಸ್ಪೀಕರ್ ಕಾಗೇರಿಯವರು ಸಹ ಆಸಕ್ತರಾಗಿದ್ರು.
ಆದ್ರೆ ಇಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ಚುನಾವಣಾ ಪೂರ್ವ ಸಿದ್ದತಾ ಸಭೆಯಲ್ಲಿ ತಾನೂ ಕೂಡ ಉತ್ತರ ಕನ್ನಡ ಜಿಲ್ಲೆಯಿಂದ ಸ್ಪರ್ದೆ ಮಾಡುವ ಇಂಗಿತವನ್ನು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವ್ಯಕ್ತಪಡಿಸಿದ್ದು ರಾಜ್ಯ ನಾಯಕರ ಮುಂದೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:-Uttrakannada| ಲೋಕಸಭಾಗೆ ಸ್ಪರ್ಧೆ- ಅಂತರಾಳದ ಮಾತು ಬಹಿರಂಗ ಮಾಡಿದ ಕಾಗೇರಿ ಹೇಳಿದ್ದೇನು ಗೊತ್ತಾ?

ಸದ್ಯ ಸಂಸದ ಅನಂತಕುಮಾರ್ ಹೆಗಡೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಸಹ ಪ್ರಚಾರ ಮಾಡದೇ ತಟಸ್ಥ ವಾಗಿದ್ದು ಪಕ್ಷದ ಸೋಲಿಗೆ ಕಾರಣರಾಗಿದ್ದರು ಎಂಬ ಆರೋಪ ಇದ್ದರೇ ಪ್ರಧಾನಿ ಮೋದಿಯವರು ಜಿಲ್ಲೆಗೆ ಆಗಮಿಸಿದ್ದರೂ ಕಾರ್ಯಕ್ರಮ ಕ್ಕೆ ಗೈರಾಗಿದ್ದರು. ಇನ್ನು ಪಕ್ಷ ಹಾಗೂ ಜನರೊಂದಿಗೆ ಸಕ್ರಿಯರಾಗಿರದೇ ಕ್ಷೇತ್ರ ಸಹ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಹೆಗಡೆ ಮೇಲಿದೆ.

ಇದನ್ನೂ ಓದಿ:-Ankola:ಹಣದ ಆಸೆಗೆ ದೊಡ್ಡಪ್ಪನನ್ನೇ ಕೊಂದ ದುರಳನಿಗೆ ಜೀವಾವಧಿ ಶಿಕ್ಷೆ
ಹೀಗಾಗಿ ಪಕ್ಷದಲ್ಲೇ ಇವರ ಮೇಲೆ ಅಸಮದಾನ ಈಗಲೂ ಇದೆ . ಇನ್ನು ತನ್ನ ಅಭಿಮಾನಿ ಕಾರ್ಯಕರ್ತರ ಮೂಲಕ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ಹೊಸ ಟ್ರಂಡ್ ಸೃಷ್ಟಿಸಲು ಪ್ರಯತ್ನಿಸುತಿದ್ದಾರೆ. ಇನ್ನು ಕಾಗೇರಿ ಸಹ ತಮ್ಮ ಆತ್ಮೀಯ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ಸಹ ನಡೆಸಿದ್ದು ಬಿರುಸಿನ ರಾಜಕೀಯ ತಂತ್ರ ಹೆಣೆಯುತಿದ್ದಾರೆ.

ಸದ್ಯ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ ಇಲ್ಲಿ ಯಾರೇ ನಿಂತರು ಗೆಲ್ಲುತ್ತಾರೆ ಎಂಬ ಅಭಿಪ್ರಾಯವಿದೆ. ಇನ್ನು ಹೊಸಬರಿಗೆ ಅವಕಾಶ ನೋಡಿದರೇ ತಮಗೂ ಅವಕಾಶ ನೀಡಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ರವರ ಒತ್ತಾಯವಾದ್ರೆ ,ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ , ಬಿಜೆಪಿ ಮಾಧ್ಯಮ ವಕ್ತಾರ ವಕೀಲ ನಾಗರಾಜ್ ನಾಯ್ಕರವರು ಸಹ ಹೊಸಬರಿಗೆ ಅವಕಾಶ ಸಿಕ್ಕರೆ ತಮಗೂ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ:- ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ ಮಾಡಿದ ಸಂಸದ ಅನಂತಕುಮಾರ್ ಹೆಗಡೆ ಲೋಕಸಭೆಗೆ ಸ್ಪರ್ಧೆ!?

ಇನ್ನು ಇವರೆಲ್ಲರೂ ಬಿಜೆಪಿ ಯ ನಿಷ್ಟಾವಂತ ಕಾರ್ಯಕರ್ತರೇ.ಪಕ್ಷಕ್ಕಾಗಿ ದುಡಿಯುತ್ತಿರುವವರು.
ಇನ್ನು ಸದ್ಯ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿದ್ದು ನಿರ್ಧಾರ ಕೇಂದ್ರ ನಾಯಕರಿಗೆ ಬಿಡಲಾಗಿದೆ. ಇನ್ನು ಯಾರಿಗೆ ಕೆನರಾ ಕ್ಷೇತ್ರದ ಟಿಕೆಟ್ ಎಂಬ ಘೋಷಣೆ ಬಹುತೇಕ ಪೆಬ್ರವರಿ ತಿಂಗಳಲ್ಲಿ ಅಂತಿಮ ಆಗಲಿದೆ.
ಆದ್ರೆ ಕಾಗೇರಿ ಅಥವಾ ಹೆಗಡೆ ಇಬ್ಬರಲ್ಲಿ ಒಬ್ಬರಿಗೆ ಪಕ್ಷ ಟಿಕೆಟ್ ನೀಡಿದ್ರೂ ಪಕ್ಷಕ್ಕೆ ಒಳ ಹೊಡೆತ ಗ್ಯಾರಂಟಿಯಾಗಿದ್ದು ಪಕ್ಷದ ಒಳ ಜಗಳ ಕಾಂಗ್ರೆಸ್ ಗೆ ಪ್ಲಸ್ ಆಗುವ ಸಾಧ್ಯತೆ ಇದೆ.ಅದ್ರೆ ಕಾಂಗ್ರೆಸ್ ಅದನ್ನು ಹೇಗೆ ಬಳಸಿಕೊಳ್ಳುತ್ತೆ ಎಂಬುದರ ಮೇಲೆ ನಿಂತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!