BREAKING NEWS
Search

ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ ಮಾಡಿದ ಸಂಸದ ಅನಂತಕುಮಾರ್ ಹೆಗಡೆ ಲೋಕಸಭೆಗೆ ಸ್ಪರ್ಧೆ!?

134

ಬೆಂಗಳೂರು:- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರವರನ್ನು ಸಂಸದ ಅನಂತಕುಮಾರ್ ಹೆಗಡೆ ಭೇಟಿಯಾಗಿ ಶುಭಕೋರಿದರು.

ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಸಂಸದ ಅನಂತಕುಮಾರ್ ಹೆಗಡೆ ದಿಡೀರನೆ ವಿಜಯೇಂದ್ರ ಭೇಟಿ ಸಾಕಷ್ಟು ಮಹತ್ವ ಪಡೆದಿದೆ.

ಲೋಕಸಭೆ ಚುನಾವಣೆಗೆ ಕಣಕ್ಕಿಳಿಯಲು ಸಜ್ಜಾಗಿರುವ ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ತನ್ನ ಹಿಂಬಾಲಕರನ್ನು ಬೇಟಿಯಾಗಿ ಅಭಿಪ್ರಾಯ ಸಂಗ್ರಹಣೆಗಿಳಿದಿದ್ದಾರೆ. ಈ ಹಿಂದೆ ರಾಜ್ಯ ನಾಯಕರ ಮೇಲೆ ಮುನಿಸಿಕೊಂಡಿದ್ದ ಸಂಸದ ಹೆಗಡೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರದಿಂದ ದೂರ ಉಳಿದಿದ್ದಲ್ಲದೇ ಅಂಕೋಲದಲ್ಲಿ ನಡೆದ ಮೋದಿ ಕಾರ್ಯಕ್ರಮಕ್ಕೆ ಸಹ ಗೈರಾಗಿದ್ದರು.

ಇನ್ನು ತಾನು ಚುನಾವಣೆ ಸ್ಪರ್ಧಿಸಲಾರೆ ಎಂದು ಹೇಳುವ ಮೂಲಕ ಕ್ಷೇತ್ರದ ಜನರಿಂದ ಅಂತರ ಕಾಯ್ದುಕೊಂಡಿದ್ದರು. ಆದ್ರೆ ಕೆಲವು ವಾರದ ಹಿಂದೆ ಸಕ್ರಿಯವಾಗಿರುವ ಹೆಗಡೆ ಈಬಾರಿ ಸ್ಪರ್ಧಿಸಲು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಆದರೇ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡದೇ ಕೆಲವರ ಸೋಲಿಗೆ ಕಾರಣವಾಗಿದ್ದ ಹೆಗಡೆ ವಿರುದ್ಧ ಅಸಮದಾನ ಕೇಂದ್ರದ ನಾಯಕರ ಬಳಿಗಗೂ ತೆರಳಿತ್ತು. ಹೀಗಾಗಿ ಅನಂತಕುಮಾರ್ ಹೆಗಡೆ ಅವರ ಬೆಂಬಲಿಗರನ್ನು ಪಕ್ಷದ ಪ್ರಮುಖ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಆದ್ರೆ ಅನಂತಕುಮಾರ್ ಹೆಗಡೆ ತಮ್ಮವರಿಗೆ ಮರಳಿ ಸ್ಥಾನ ಕೊಡಿಸುವುದರಲ್ಲಿ ಸಫಲರಾಗುವ ಜೊತೆ RSS ಮುಖಂಡರ ಮೂಲಕ ತಮ್ಮ ರಾಜಕೀಯ ದಾಳ ಉದುರಿಸುತಿದ್ದು ಚಾಣಾಕ್ಷ ಹೆಜ್ಜೆ ಹಾಕುತಿದ್ದಾರೆ.

ಇನ್ನು ಕ್ಷೇತ್ರದಲ್ಲಿ ಅನಂತಕುಮಾರ್ ಹೆಗಡೆಗೆ ಟಿಕೆಟ್ ನೀಡದಿದ್ರೆ ತಮಗೆ ನೀಡಬೇಕು ಎಂದು ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ,ಮಾಜಿ ಶಾಸಕ ಸುನೀಲ್ ಹೆಗಡೆ,ಮಾಜಿ ಶಾಸಕಿ ರೂಪಾಲಿ ನಾಯ್ಕ ಜೊತೆ ಪಕ್ಷ ಬೆಳಸಿದ ಈಗಿನ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ ,ನಾಗರಾಜ ನಾಯ್ಕ ರವರು ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದರು.ಆದ್ರೆ ಇದೀಗ ಅನಂತಕುಮಾರ್ ಹೆಗಡೆ ಕಣಕ್ಕಿಳಿಯುತಿದ್ದಂತೆ ರಾಜಕೀಯ ಚಿತ್ರಣ ಕ್ಷೇತ್ರದಲ್ಲಿ ಬದಲಾಗಿದೆ.

ಇದನ್ನೂ ಓದಿ:-ರಾಮ ಮಂದಿರದ ರಾಮ ವಿಗ್ರಹ ಶಿಲ್ಪಿಯ ಶ್ರಮದ ಕಥೆ ಓದಿ.

ಅನಂತಕುಮಾರ್ ಹೆಗಡೆ ಸ್ಪರ್ಧೆ ಪಕ್ಕಾ ಆಗಿದೆ ಆದ್ರೆ ಟಿಕೆಟ್ ಘೋಷಣೆ ಮಾತ್ರ ಆಗಬೇಕಿದೆ .ಪಕ್ಷದ ಮೂಲಗಳ ಪ್ರಕಾರ ಅಲ್ಪ ದಿನ ಕಾದು ನೋಡುವ ತಂತ್ರಕ್ಕೆ ಪಕ್ಷ ಮುಂದಾಗಿದೆ ಎನ್ನಲಾಗಿದ್ದು ಪಕ್ಷದಲ್ಲಿ ಮುನಿಸಿಕೊಂಡವರನ್ನು ಸರಿ ಮಾಡುವ ಕೆಲಸ ಪ್ರಾರಂಭವಾಗಿದೆ ಎನ್ನಲಾಗಿದೆ.
ಇನ್ನು ಸಂಸದ ಅನಂತಕುಮಾರ್ ಹೆಗಡೆ ದೆಹಲಿಯಲ್ಲಿ ಅಮಿತ್ ಶಾ,ಮೋದಿಯವರೊಂದಿಗೆ ಒಂದುಬಾರಿ ಮಾತನಾಡಿದ್ದು ತನ್ನ ಸಮಸ್ಯೆ ಯನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೇಂದ್ರ ನಾಯಕರು ಅನಂತ್ ಕುಮಾರ್ ಹೆಗಡೆ ಪರ ನಿಲ್ಲುವ ಸಾಧ್ಯತೆ ಹೆಚ್ಚಿದೆ.RSS ಹಿರಿಯ ನಾಯಕರು ಸಹ ಅನಂತ್ ಪರ ಇದ್ದು ಕ್ಷೇತ್ರದಲ್ಲಿ ಸಕ್ರಿಯರಾಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಇಂದು ಕುದ್ದು ಸಂಸದ ಅನಂತಕುಮಾರ್ ಹೆಗಡೆ ರಾಜ್ಯಾಧ್ಯಕ್ಷರನ್ನು ಭೇಟಿಮಾಡಿ ಮಾತೂಕತೆ ನಡೆಸಿದ್ದು ಹೆಗಡೆ ವಿರುದ್ಧ ಇರುವವರನ್ನು ಸರಿದಾರಿಗೆ ತರಲು ದಾಳ ಹಾಕಿದ್ದು ಪಕ್ಷ ಸಂಘಟನೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು ಮುಂದಿನ ದಿ‌ನ ಏನು ಬದಲಾವಣೆ ಆಗಬಹುದು ಎಂಬುದನ್ನು ಕಾದುನೋಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!