Karwar:ಮಾಧವ ನಾಯ್ಕನನ್ನು ಹಿಡಿದರೇ ಇಡೀ ಕಾರವಾರದಲ್ಲಿ ಇರುವ ಎಲ್ಲಾ ಬ್ರಷ್ಟಾಚಾರಗಳು ಹೊರಕ್ಕೆ ಬರುತ್ತದೆ:ರೂಪಾಲಿ ನಾಯ್ಕ

TextMaster 11 07 07.50.08 TextMaster 11 07 07.50.08

ಕಾರವಾರ :-ಜನಶಕ್ತಿ ವೇದಿಕೆ ಮತ್ತು ಗುತ್ತಿಗೆದಾರ ಸಂಘದ ಅಧ್ಯಕ್ಷ ಮಾಧವ ನಾಯ್ಕನನ್ನು ಹಿಡಿದರೇ ಇಡೀ ಕಾರವಾರದಲ್ಲಿ ಇರುವ ಎಲ್ಲಾ ಬ್ರಷ್ಟಾಚಾರಗಳು ಹೊರಕ್ಕೆ ಬರುತ್ತದೆ. ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪ ಮಾಡಿದ್ದಾರೆ. ಮಂಗಳವಾರ ಕಾರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು

ಬ್ರಷ್ಟಾಚಾರ ಹುಟ್ಟಿಸಿದವರೇ ಮಾಧವ ನಾಯ್ಕ. ಬ್ರಷ್ಟಾಚಾರ ಬ್ರಷ್ಟಾಚಾರ ಹೇಳಿ ಕಾಂಗ್ರೆಸ್ ನನ್ನು ಮೇಲೆ ಎತ್ತಿದವರು, ಬಿಜೆಪಿಯನ್ನು ಕೆಳಗೆ ಹಾಕಲಿಕ್ಕೆ ಗುಲ್ಲೆಬ್ಬಿಸಿದರು‌‌‌ .ನನ್ನ ಹೆದರುಸಲು ಒಬ್ಬ ಮಾಧ್ಯಮ ಇನ್ನೊಬ್ಬ ಸಮಾಜ ಸೇವಕರು ಇದ್ದಾರೆ ಇವರ ವಿರುದ್ಧ ಕೋರ್ಟ ಗೆ ಹೋಗಿ ಬಂದ ನಂತರ ಪುನಹಾ ನನ್ನ ಹೆದರಿಸಲು ಪ್ರಯತ್ನ ಮಾಡುತಿದ್ದಾರೆ. ನಮ್ಮನ್ನು ಸಂಜೋತ ಮಾಡಲು ಕರೆಯುತಿದ್ದಾರೆ.ಸೆಟ್ಲಮೆಂಟ್ ಮಾಡಲು ಬೇರೆಯವರ ಮೂಲಕ ಕರೆಯುತಿದ್ದಾರೆ.ಖಂಡಿತಾ ಇಲ್ಲ ಅವರ ಮೇಲೆ ಹಾಕಿರುವ ಹತ್ತು ಕೋಟಿ ಮಾನನಷ್ಟ ಮುಕದ್ದಮೆ ಮೊನ್ನೆಯವರೆಗೂ ನಡೆಸಿಕೊಂಡು ಬಂದುದ್ದೇನೆ ಮುಂದೆಯೂ ನಡೆಸಿಕೊಂಡು ಹೋಗುತ್ತೇನೆ ಯಾವತ್ತೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದರು.

Advertisement

ಇನ್ನು ಪ್ರತಿ ಕ್ಷಣ ನನ್ನ ಹೆರೇಸ್ಮೆಂಟ್ ಮಾಡಿಕೊಂಡು ಬಂದಿದ್ದಾರೆ. ಒಂದು ನಾಯಿ ಬಿದ್ದರೂ ಎತ್ತಿಕೊಂಡು ಹೋಗಿ ಸಮಾಜ ಸೇವೆ ಮಾಡುವ ಮಾಧವನಾಯ್ಕ ಶಾಸಕರು ಅಧಿಕಾರಿಗಳಿಗೆ ಹೆರಾಸ್ಮೆಂಟ್ ಮಾಡಬೇಕಾದರೇ ಎಲ್ಲಿ ಹೋಗಿದ್ದರು? ಈ ಇಲಿ ಬಿಲ ಸೇರಿಕೊಂಡಿತೇ ? ಮಾಧವ ನಾಯ್ಕರದ್ದು ಮರಳು ಮಾಫಿಯಾ ನಡೆಯುತ್ತಿದೆ, ಅಧಿಕಾರಿಗಳಿಗೆ ಹೇಳಿದರೇ ರೈಡ್ ಮಾಡಿದ ಹಾಗೆ ಮಾಡಿ ಕಾಂಗ್ರೆಸ್ ಏಜಂಟರಿಗೆ ಮರಳನ್ನು ಕೊಡುತಿದ್ದಾರೆ. ಕಾಂಗ್ರೆಸ್ ಸರ್ಕಾರ 80 % ಬ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ ,ವಕೀಲರು ,ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ್ ನಾಯ್ಕ ಮುಂತಾದವರು ಉಪಸ್ತಿತರಿದ್ದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement