ಶಿರಸಿ ಸೋಮೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ವಿರೂಪ ಗೊಳಿಸಿದ ಕಿಡಿಗೇಡಿಗಳು

177

ಕಾರವಾರ :- ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಇಂಗ್ಲೀಷ್ ಅಕ್ಷರ(English letter) ಬರೆದು ವಿರೂಪ ಗೊಳಿಸಿದ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi) ನರಬೈಲ್ ಗ್ರಾಮದ ಪ್ರಸಿದ್ದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.( someshwara Temple)

ಗರ್ಭಗುಡಿಯ ಶಿವಲಿಂಗದ ಮೇಲೆ ಜೆ.ಇ. ಎಸ್ 2024 ,2026 ಎಂಬ ಇಂಗ್ಲಿಷ್ ಅಕ್ಷರ ಬರೆಯಲಾಗಿದೆ.

ಇದನ್ನೂ ಓದಿ:-ಶಿರಸಿಯಲ್ಲಿ ಮತಾಂತರಕ್ಕೆ ಯತ್ನ -ಆರು ಜನರ ಬಂಧನ

ಪೂಜೆಗೆ ಬಂದ ಪುರೋಹಿತರು ಗರ್ಭಗುಡಿಯ ಬಾಗಿಲು ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ದೇವಸ್ಥಾನ ದಲ್ಲಿ ಯಾವುದೇ ಕಳ್ಳತನವಾಗಿಲ್ಲ,ಯಾರೂ ಇಲ್ಲದ ವೇಳೆ ಈ ರೀತಿ ವಿರೂಪ ಮಾಡಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!