Fact check |ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ರಾ!

276

ಕಾರವಾರ/ಹಳಿಯಾಳ:- ಮಾಜಿ ಸಚಿವ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆಯವರು farmer Minister RV Deshpande ) ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದು ಪುತ್ರ ಪಶಾಂತ್ ದೇಶಪಾಂಡೆ ರವರ ಮುಂದಿನ ರಾಜಕೀಯ ಭವಿಷ್ಯದ ಕುರಿತು ಚರ್ಚೆ ನಡೆಸಿದ್ದಾರೆ ಎಂಬ ಊಹಾಪೋಹಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ದೇಶಪಾಂಡೆಯವರು ಅಮಿತ್ ಶಾ ಹಾಗೂ ಪ್ರಹ್ಲಾದ್ ಜೋಷಿ (central minister Prahlad Joshi )ಜೊತೆ ಇರುವ ಫೋಟೋಗಳು ಹರಿದಾಡುತಿದ್ದು ಸಖತ್ ಸದ್ದು ಮಾಡುತ್ತಿದೆ.
ಈ ಫೋಟೋ ರಾಜ್ಯ ನಾಯಕ ಬಳಿಯೂ ಸುಳಿದಾಡಿದ್ದು ಮುಖ್ಯಮಂತ್ರಿಯವರ ಆಪ್ತ ವಲಯದಲ್ಲೂ ಸದ್ದು ಮಾಡಿದೆ. ಹಾಗಿದ್ರೆ ನಿಜವಾಗಿಯೂ ಆರ್.ವಿ ದೇಶಪಾಂಡೆಯವರು ದೆಹಲಿಯಲ್ಲಿ ಅಮಿತ್ ಶಾ (BJP leader Amit Shah )ವರನ್ನ ಭೇಟಿಯಾಗಿದ್ರಾ ಎಂಬ ಕುರಿತು ದೆಹಲಿ ಮೂಲದಿಂದ ಮಾಹಿತಿಯನ್ನು ಕಲೆಹಾಕಿದಾಗ ಈ ಫೋಟೋ ಮೂರು ವರ್ಷಕ್ಕೂ ಹೆಚ್ಚು ಹಳೆಯದ್ದು ಎಂದು ತಿಳಿದುಬಂದಿದೆ.

ಇದನ್ನೂ ಓದಿ:- ಮಹಿಳಾ ದೌರ್ಜನ್ಯ ಪ್ರಕರಣ|ದೇಶದಲ್ಲೇ ಬಿಜೆಪಿ ಜನಪ್ರತಿನಿಧಿಗಳಿಗೆ ಅಗ್ರ ಸ್ಥಾನ! ವಿವರ ನೋಡಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress government )ಇದ್ದಾಗ ಆರ್.ವಿ ದೇಶಪಾಂಡೆಯವರು ಪ್ರವಾಸೋಧ್ಯಮ ಸಚಿವರಾಗಿದ್ದರು. ಈ ವೇಳೆ ದೆಹಲಿಗೆ ತೆರಳಿದ್ದಾಗ ಅಮಿತ್ ಶಾ ರವರನ್ನು ಭೇಟಿಯಾಗಿದ್ದಾಗಿನ ಫೋಟೋ ಇದು. ಆದ್ರೆ ಈ ಫೋಟೋವನ್ನು ಪ್ರಸಕ್ತ ರಾಜಕೀಯದೊಂದಿಗೆ ತೂಗುಹಾಕಿ ಸುದ್ದಿ ಹರಿಬಿಡಲಾಗಿದೆ.

ಇನ್ನು ಈ ಕುರಿತು ಆರ್.ವಿ ದೇಶಪಾಂಡೆಯವರ ಆಪ್ತ ಕಾರ್ಯದರ್ಶಿರವರನ್ನು ಸಹ ವಿಚಾರಿಸಿದಾಗ ಅವರು ಈ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಕರೆದಿದ್ದ ಸಭೆಗೆ ದೆಹಲಿಗೆ ತೆರಳಿದ್ದರು.ಆದ್ರೆ ರಾಹುಲ್ ಗಾಂದಿಯವರನ್ನು ಭೇಟಿಯಾದ ನಂತರ ಮರಳಿ ಬೆಂಗಳೂರಿಗೆ ಆಗಮಿಸಿರುವುದಾಗಿ ತಿಳಿಸಿದ್ದಾರೆ.

ಪ್ರಶಾಂತ್ ದೇಶಪಾಂಡೆ ಬಿಜೆಪಿ ಸೇರ್ತಾರಾ?

ಹೀಗೊಂದು ಪ್ರಶ್ನೆ ಹಳಿಯಾಳ ಒಂದರಲ್ಲೇ ಅಲ್ಲದೇ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ದುಮಾಡುತ್ತಿದೆ.ಆದ್ರೆ ಮೂಲಗಳ ಪ್ರಕಾರ ಪ್ರಶಾಂತ್ ದೇಶಪಾಂಡೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಕುರಿತು ಯಾವುದೇ ಬೆಳವಣಿಗೆ ನೆಡೆದಿಲ್ಲ. ಇನ್ನು ಈ ಕುರಿತು ಚರ್ಚೆ ಸಹ ನಡೆದಿಲ್ಲ ಎನ್ನುತ್ತದೆ ಮೂಲಗಳು. ಇನ್ನು ಸದ್ಯ ಪ್ರಶಾಂತ್ ದೇಶಪಾಂಡೆಯವರಿಗೆ ಪ್ರಸಕ್ತ ರಾಜಕೀಯದಲ್ಲಿ ಸಕ್ರಿಯವಾಗಿ ಇರುವ ಆಸಕ್ತಿ ಕಡಿಮೆ ಇದೆ. ಅವರ ವೃತ್ತಿಕಡೆ ಹೆಚ್ಚು ಆಸಕ್ತರಾಗಿದ್ದಾರೆ ಎನ್ನುತ್ತದೆ ಅವರ ಆಪ್ತಮೂಲ.

ಒಟ್ಟಿನಲ್ಲಿ ಹಳೆಯ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿಸಿದ್ದಂತು ಸತ್ಯ.

ಇದನ್ನೂ ಓದಿ:- ಚಾಕ್ಲೆಟ್ ನಲ್ಲಿ ಡ್ರಗ್ಸ್ ! ಕರಾವಳಿಯ ಇಬ್ಬರ ಬಂಧನ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!