ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕು ತಡೆಗಟ್ಟಲು ಸಪ್ತಾಹ ರೂಪದಲ್ಲಿ ಜ್ವರ ಸಮೀಕ್ಷೆ ಬಯೋಮೆಟ್ರಿಕ್ ನಿಯಮ ಜಾರಿ- ಮುಲೈ ಮುಗಿಲನ್.

1424

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಕರೋನಾ ಪಾಸಿಟಿವ್ ವರದಿ ಬರುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸಪ್ತಾಹ ರೂಪದಲ್ಲಿ ಜ್ವರ ಸಮೀಕ್ಷೆ ಆರಂಭ ಮಾಡುವುದಾಗಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಡೀ ಜಿಲ್ಲೆಯಲ್ಲಿ ಪ್ರತಿ ಮನೆ ಮನೆಗೆ ತೆರಳಿ ಆಶಾ ಕಾರ್ಯಕರ್ತರು ಸಮೀಕ್ಷೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರೋಗ ಲಕ್ಷಣ ಇರುವವರಿಗೆ ರ್ಯಾಪಿಡ್ ಅಂಡಿಜೆನ್ ಟೆಸ್ಟ್ ಮಾಡಲಾಗುತ್ತದೆ.
ಪ್ರತಿ ತಾಲೂಕಿನಲ್ಲಿ ಮೊಬೈಲ್ ಟೀಮ್ ಮಾಡಿದ್ದೇವೆ ಎಂದರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸಂಖ್ಯೆ ಕಡಿಮೆಯಾಗುತ್ತಿದೆ.ಗುಣಮುಖರಾಗುವವರ ಸಂಖ್ಯೆ ಏರಿಕೆ ಯಾಗುತ್ತಿದೆ, ರೋಗ ಲಕ್ಷಣ ಇರುವವರು ದಯವಿಟ್ಟು ಮುಚ್ಚಿಡಬೇಡಿ.

ಕೋಮಾರ್ಬಿಡ್ (ಯಾವುದೇ ಖಾಯಿಲೆ ಇರುವವರು) ಇರುವವರಿಗೆ ರಕ್ತ ಪರೀಕ್ಷೆ ಸೇರಿದಂತೆ ಸಂಪೂರ್ಣ ಟೆಸ್ಟ್ ಮಾಡಲಾಗುವುದು.

ಸೊಂಕು ಪತ್ತೆಯಾದಲ್ಲಿ ಪ್ರಾಥಮಿಕ ಮತ್ತು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗುವುದು.
ಸಾವಿನ ನ ಸಂಖ್ಯೆ ಶೂನ್ಯಕ್ಕೆ ಹೋಗುವ ಗುರಿ ಇಟ್ಟುಕೊಳ್ಳಲಾಗಿದೆ.ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.

ಸರ್ಕಾರದಿಂದ ಕೇಂದ್ರೀಕೃತ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಜಾರಿಗೆ ತರಲಾಗಿದೆ.ಬಯೋಮೆಟ್ರಿಕ್ ಮುಖಾಂತರ ಬೆಡ್ ಅಲಾಟ್ಮೆಂಟ್ ಮಾಡಲಾಗುವುದು,ಸರ್ಕಾರದ ಮುಖಾಂತರ ಬೆಡ್ ಸಿಸ್ಟಮ್ ವ್ಯವಸ್ಥೆ ಜಾರಿಯಾಗಿದೆ.ಈ ನಿಯಮವನ್ನು ಎಲ್ಲಾ ಜಿಲ್ಲೆಗಳಲ್ಲಿ ಅನ್ವಯ ಮಾಡಲಾಗಿದೆ.

ಅಡ್ಮಿಶನ್, ಡಿಸ್ಜಾರ್ಜ್, ರೆಫರ್ ಸಂಪೂರ್ಣ ವಿವರ ಬಯೋಮೆಟ್ರಿಕ್ ಮುಖಾಂತರ ಎಲ್ಲಾ ವಿವರ ದಾಖಲಾಗಲಿದೆ. ಇದರಿಂದ ಸಾವು ಸಂಭವಿಸದ ಹಾಗೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೇಗಿರಲಿದೆ ವ್ಯವಸ್ಥೆ- ಜಿಲ್ಲಾಧಿಕಾರಿ ಹೇಳಿದ ವಿವರ ಹೀಗಿದೆ:-

ಕೇಂದ್ರೀಕೃತ ಕೋವಿಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಸ್ಟೇಟ್ ಕೋವಿಡ್ ವಾರ್ ರೂಂ ನ ನಿರ್ದೇಶನದಂತೆ ತೆರೆಯಲಾಗಿದೆ .

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 23 ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳೆಂದು ಗುರುತಿಸಲಾಗಿದ್ದು ,ಒಟ್ಟು 1351 ಹಾಸಿಗೆಗಳನ್ನು ಕೋವಿಡ್ ರೋಗಿಗಳ ಸಲುವಾಗಿ ಕಾದಿರಿಸಲಾಗಿದೆ. ಇದರಲ್ಲಿ 811 ಆಕ್ಸಿಜನ್ ಹಾಸಿಗೆಗಳನ್ನು ಗುರುತಿಸಲಾಗಿದೆ. ಇವುಗಳ ಜೊತೆಗೆ 16 ಕೋವಿಡ್ ಕೇರ್ ಸೆಂಟರ್ ಳನ್ನು ಗುರುತಿಸಲಾಗಿದೆ. ಇದರಲ್ಲಿ 1030 ಹಾಸಿಗೆಗಳನ್ನು ಮೀಸಲಿಡಲಾಗಿದೆ.

ಕೇಂದ್ರಿಕೃತ ಬೆಡ್ ಮ್ಯಾನೇಜ್ಮೆಂಟ್ ವ್ಯವಸ್ಥೆಯಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ಬ್ಲಾಕ್ ಮಾಡಲು ಅಂದರೆ ಕಾಯ್ದಿರಿಸಲು ಅವಕಾಶಗಳನ್ನು ಮಾಡಿಕೊಡಲಾಗಿದೆ.

ಲೈನ್ ಲಿಸ್ಟ್ ಮೂಲಕ ಪೋಸಿಟಿವ್ ಪ್ರಕರಣಗಳನ್ನು ಗುರುತಿಸಿದಾಗ ಹಾಸಿಗೆ ಬೇಕಾದವರ ರೋಗಿಗಳಿಗೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಕಾಯ್ದಿರಿಸಬಹುದಾಗಿದೆ.

ಸಾರ್ವಜನಿಕರು, ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ, ಕೋವಿಡ್ ವಾರ್ ರೂಮಿನ ಪೋರ್ಟಲ್ ನಲ್ಲಿ ತಮ್ಮ ಹೆಸರನ್ನು ದಾಖಲೆ ಮಾಡಿ, ತಮ್ಮ ಮೊಬೈಲ್ ನಂಬರನ್ನು ಎಂಟ್ರಿ ಮಾಡಿದಾಗ ಓಟಿಪಿ ಬರುತ್ತದೆ ಅದನ್ನು ಬಳಸಿಕೊಂಡು ತಮಗೆ ಬೇಕಾದಲ್ಲಿ ಹಾಸಿಗೆಗಳನ್ನು ರೋಗಿಗಳು ಪಡೆಯಬಹುದಾಗಿದೆ.
ಇದಲ್ಲದೇ ಡಿ.ಎಸ್.ಒ ಅವರು ಅಪ್ರುವಲ್ ಮಾಡಿದಾಗ SAST ನಲ್ಲಿ ಸೌಲಭ್ಯವೂ ಕಂಡುಬರುತ್ತದೆ.
ನಾಲ್ಕು ಗಂಟೆಗಳ ಕಾಲ ಕಾಯ್ದಿರಿಸಿದ ಹಾಸಿಗೆಯು ಲಭ್ಯವಿರುತ್ತದೆ.ರೋಗಿಯು ಬರದಿದ್ದರೆ ಮೀಸಲಿಟ್ಟ ಹಾಸಿಗೆಯು ರದ್ದಾಗುತ್ತದೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಪೊಲೀಸ್ ಅದೀಕ್ಷಕ ಶಿವಪ್ರಕಾಶ್ ದೇವರಾಜು ಉಪಸ್ತಿತರಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!