ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ನಿರ್ಧಾರವಾಗಿದೆ- ಮಾಜಿ ಸ್ಪೀಕರ್ ಕಾಗೇರಿ

289

ಉತ್ತರ ಕನ್ನಡ ಜಿಲ್ಲೆಯ ಸಂದದ ಅನಂತಕುಮಾರ್ ಹೆಗಡೆ (ananthkumar hegde) ರಾಜಕೀಯವಾಗಿ ನಿವೃತ್ತಿ ಯಾಗುವುದಾಗಿ ಈ ಹಿಂದೆಯೇ ಹೇಳಿಕೊಂಡಿದ್ದು ಪಕ್ಷದ ಸಂಘಟನೆಯಾಗಲಿ ಅಥವಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ದೂರ ಉಳಿದಿದ್ದರು.

ಹೀಗಾಗಿ ಬಿಜೆಪಿ (BJP) ಪಕ್ಷದಿಂದ ಮುಂಬರುವ ಲೋಕಸಭಾ ಚುನಾವಣೆಗೆ ಯಾರು ಸ್ಪರ್ಧಿಗಳಾಗುತ್ತಾರೆ ,ಅಥವಾ ಜೆಡಿಎಸ್ ಗೆ ಸ್ಥಾನ ಬಿಟ್ಟುಕೊಡುತ್ತಾ ಎಂಬುದು ಕುತೂಹಲ ಮೂಡಿಸಿತ್ತು.

ಇನ್ನು ಶಿರಸಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (vishveshvara hegde kageri)ಯವರು ,ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೆಸರು ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬಂದಿತ್ತು.

ಮಾಜಿ ಸ್ಪೀಕರ್ ಏನು ಹೇಳುದ್ರು ವಿಡಿಯೋ ನೋಡಿ:-

ಈ ಹಿನ್ನಲೆಯಲ್ಲಿ ಸೋಮವಾರ ಕಾರವಾರಕ್ಕೆ ಆಗಮಿಸಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆಗೆ ಬಿಜೆಪಿ (BJP) ಯಿಂದ ಮುಂದೆ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರ ನೀಡಿದ ಅವರು ಕೆನರಾ ಕ್ಷೇತ್ರಕ್ಕೆ ಅಭ್ಯರ್ಥಿಯಾರು ಎಂದು ಈಗಾಗಲೇ ನಿರ್ಧಾರ ಆಗಿದೆ ,ವ್ಯಕ್ತಿ ಯಾರು ಎಂಬುದನ್ನು ಪಕ್ಷದ ವರಿಷ್ಠರೇ ತಿಳಿಸುತ್ತಾರೆ, ಆ ಅಭ್ಯರ್ಥಿಯೇ ಬಿಜೆಪಿಯ ಕಮಲ ಎಂದು ಉತ್ತರ ನೀಡಿದ್ದು ಈ ಕಮಲಕ್ಕಾಗಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಿ ಗೆಲ್ಲಿಸುತ್ತಾರೆ ಎಂದರು.

ಉಡುಪಿಯಲ್ಲಿ ಜೆಸಿಬಿ ಏರಿ ಮಂಟಪದಲ್ಲಿ ಕೋಳಿಪಡೆ ಆಡಿದ ವಧು ವರರು:ವಿಡಿಯೋ ನೋಡಿ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!