ಗೋಕರ್ಣ ವಸ್ತ್ರ ಸಂಹಿತೆ:ದೇವಸ್ಥಾನದಿಂದ ಖಾಸಗಿ ವಾಹಿನಿ ಪತ್ರಕರ್ತನನ್ನು ಹೊರದಬ್ಬಿದ ಮ್ಯಾನೇಜರ್!

345

ಕಾರವಾರ :- ಉತ್ತರ ಕನ್ನಡ ಜಿಲ್ಲೆ ಕುಮಟಾ (ಉತ್ತರಕನ್ನಡ )ತಾಲೂಕಿನ ಗೋಕರ್ಣದ (ಗೋಕರ್ಣ) ಮಹಾಬಲೇಶ್ವರ ದೇವಸ್ಥಾನದಲ್ಲಿ ಚಂದ್ರ ಗ್ರಹಣ ನಿಮಿತ್ತ ದೇವಸ್ಥಾನದ ಸುದ್ದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ಮಹಾಬಲೇಶ್ವರ ದೇವಸ್ಥಾನದ ಮ್ಯಾನೇಜರ್ ಸುಬ್ರಹ್ಮಣ್ಯ ಹೆಗಡೆ ಎಂಬಾತನ ಫೋಟೋಗಳನ್ನು ಮಾಡುವಾಗ ಏಕಾಏಕಿ ಕೈ ದೇವಸ್ಥಾನದಿಂದ ಹೊರದಬ್ಬಿದ ಈ ಹಿಂದೆ ದೇವಸ್ಥಾನದ ಸಿಬ್ಬಂದಿಗೆ ಅಧಿಕಾರಿಗಳಿಂದ ಬಂದ ಅಧಿಕಾರಿಗಳು ಗಲಾಟೆ ಮಾಡಿದ್ದಾರೆ.

ಈಗ ನೀವು ದೇವಸ್ಥಾನಕ್ಕೆ ಬಂದು ಸುದ್ದಿ ಮಾಡಲು ಬಂದಿದ್ದೀರಿ ನಮ್ಮ ವಿರುದ್ಧವೇ ಮಾಡುತ್ತೀರ ಎಂದು ಬೈದಾಡಿದ್ದಾರೆ.

ಘಟನೆ ಏನು?

ಗ್ರಹಣ ಸಂಬಂಧ ಸುದ್ದಿಗಾಗಿ ಟಿ.ವಿ ಮಾಧ್ಯಮದ (News Repoter) ಪತ್ರಕರ್ತರು ಮಹಾಬಲೇಶ್ವರ ದೇವಸ್ಥಾನಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಕಮಿಟಿಯವರಲ್ಲಿ ಸಂದರ್ಶನ ಮಾಡಿದ್ದಾರೆ.ನಂತರ ದೇವಸ್ಥಾನದಲ್ಲಿ ಖಾಸಗಿ ವಾಹಿನಿಯವರು ಬಟ್ಟೆ ತೆಗೆದು ದೇವರ ದರ್ಶನ ಮಾಡಿ ಚಿತ್ರೀಕರಣ ನಡೆಸುತ್ತಿರುವಾಗ ದೇವಸ್ಥಾನದ ಮ್ಯಾನೇಜರ್ ಏಕಾ ಏಕಿ ಬಂದು ಪ್ಯಾಂಟ್ ಹಾಕಿದ್ದೀರಾ ಎಂದು ಪತ್ರಕರ್ತನನ್ನ ಹಿಡಿದು ದೇವಸ್ಥಾನದಿಂದ ಹೊರಗೆ ದೂಕಿ ಗಲಾಟೆ ಮಾಡಿದ್ದಾರೆ.

ವಸ್ತ್ರ ಸಂಹಿತ ಯಾಕೆ? ದೇವರಿಗೆ ಬೇದ ಉಂಟಾ?

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ದೇಶ ವಿದೇಶದಿಂದ ಜನರು ದೇವರ ದರ್ಶನಕ್ಕೆ ಬರುತ್ತಾರೆ. ದೇವರಿಗೆ ಭಕ್ತಿ ಮುಖ್ಯವೂ ಅಥವಾ ಅವರು ಹಾಕುವ ಬಟ್ಟೆ ಮುಖ್ಯವೋ ಎಂಬುದೇ ಪ್ರಶ್ನೆಯಾಗಿದೆ. ಇನ್ನು ಈ ಹಿಂದೆ ವಸ್ತ್ರ ಸಂಹಿತೆ ಜಾರಿ ಮಾಡಿದ್ದಾಗ ವ್ಯಾಪಕ ವಿರೋಧ ಸಹ ವ್ಯಕ್ತವಾಗಿತ್ತು. ಇನ್ನು ಪ್ಯಾಂಟ್ ಹಾಕಿ ದೇಹದ ಮೇಲಿನ ಬಟ್ಟೆ ತೆಗೆದರೂ ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧಿಸಲಾಗುತ್ತದೆ. ದೂರದ ಊರಿನಿಂದ ಬಂದವರು ದೇವಸ್ಥಾನದಲ್ಲಿ ಸಿಗುವ ₹100 ನ ಪಂಚೆ ಧರಿಸಿಯೇ ಒಳಕ್ಕೆ ಹೋಗಬೇಕು. ಪಂಚೆ ತೆಗೆದುಕೊಳ್ಳಲು ಸರತಿ ಸಾಲಲ್ಲಿ ನಿಲ್ಲಬೇಕು. ಬಡವರು ಬಂದರೆ ಪಂಚೆ ತೆಗೆದುಕೊಳ್ಳಲೂ ಸಾದ್ಯವಾಗದೇ ದೇವರ ದರ್ಶನ ಮರೆತು ಹೊರಹೋಗಬೇಕು. ಇನ್ನು ಎಲ್ಲರಿಗೂ ಒಂದೇ ನ್ಯಾಯ ಎಂದು ಮಾಡಿದ್ದರೇ ಅದು ಬೇರೆಯ ಮಾತು. ಆದರೇ ತಮಗೆ ಬೇಕಾದವರು ಬಂದರೆ ಅವರಿಗೆ ಹೇಗೆ ಬೇಕೋ ಹಾಗೆ ಅವಕಾಶ ಮಾಡಿಕೊಡುತ್ತಾರೆ. ಇನ್ನು ದೇವಸ್ಥಾನದ ಒಳಗೆ ಇರುವ ಸಿಬ್ಬಂದಿಗಳು ಪ್ಯಾಂಟನ್ನೇ ಧರಿಸಿರುತ್ತಾರೆ. ಹೀಗಿರುವಾಗ ಅವರ ಸಿಬ್ಬಂದಿಗಿಲ್ಲದ ವಸ್ತ್ರ ಸಂಹಿತೆ ಬರುವ ಭಕ್ತರಿಗೆ ಏಕೆ? ಭಕ್ತಿಗಿಂತ ಅವರು ಹಾಕುವ ಬಟ್ಟೆ ಮುಖ್ಯವಾಗುತ್ತಾ? ಮಹಾಬಲೇಶ್ವರನಿಗೆ ಇರದ ಚೌಕಟ್ಟು ಆತನನ್ನು ನೊಡಲು ಬಂದ ಭಕ್ತರಿಗೆ ಯಾಕೆ ಎಂಬ ಪ್ರಶ್ನೆ ಉದ್ಭವವಾಗಿದೆ.

ದೇವಸ್ಥಾನದಲ್ಲಿ ಮ್ಯಾನೇಜರ್ ದರ್ಪ ಇದು ಮೊದಲಲ್ಲ!.

ಮಹಾಬಲೇಶ್ವರ ದೇವಸ್ಥಾನದ ಮ್ಯಾನೇಜರ್ ಸುಬ್ರಹ್ಮಣ್ಯ ಹೆಗಡೆ ದರ್ಪ ಇದು ಮೊದಲಿನದಲ್ಲ. ಈ ಹಿಂದ ಸಹ ಹಲವು ಭಕ್ತರನ್ನ ದರ್ಶನಕ್ಕೆ ಬಂದ ಸಂದರ್ಭದಲ್ಲಿ ದೇವಸ್ಥಾನದಿಂದ ಹೊರಹಾಕಿದ್ದರು. ಭಕ್ತರೊಂದಿಗೆ ಅನುಚಿತ ವರ್ತನೆ ಗಲಾಟೆ ಮಾಡಿಕೊಂಡು ಸಾಕಪ್ಪ ಈ ದೇವರ ದರ್ಶನ ಎನ್ನುಂತೆ ಹಲವರು ದೇವರ ದರ್ಶನವನ್ನು ಮಾಡದೇ ಹೊರಹೋಗಿದ್ದರು. ದೇವಸ್ಥಾನವೇ ತನ್ನದೆಂಬ ದರ್ಪದಲ್ಲಿ ಈತನಿದ್ದಾನೆ.

ದೇವಸ್ಥಾನದ ಮ್ಯಾನೇಜರ್ ವರ್ತನೆಗೆ ಖಂಡನೆ!

ಇನ್ನು ದೇವಸ್ಥಾನ ಮ್ಯಾನೇಜರ್ ಸುಬ್ರಹ್ಮಣ್ಯ ಹೆಗಡೆ ವರ್ತನೆಗೆ ಖಂಡನೆ ವ್ಯಕ್ತವಾಗಿದೆ. ಇದಲ್ಲದೇ ಇನ್ನುಮುಂದೆ ಇದೇ ರೀತಿ ವರ್ತನೆ ಮಾಡಿದರೇ ದೇವಸ್ಥಾನದ ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಯಲಕ ಪಾಟೀಲ್ ಎಚ್ಚರಿಕೆ ನೀಡಿದ್ದು ವಸ್ತ್ರ ಸಂಹಿತೆ ತೆಗದು ಹಾಕದಿದ್ದಲ್ಲಿ ದೇವಸ್ಥಾನದ ಮುಂದೆ ದಲಿತ ಸಂಘಟನೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಮ್ಯಾನೇಜರ್ ವಿರುದ್ಧ ದೂರು.

ಇನ್ನು ದೇವಸ್ಥಾನದ ಮ್ಯಾನೇಜರ್ ಸುಬ್ರಹ್ಮಣ್ಯ ಹೆಗಡೆ ವಿರುದ್ಧ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷರಿಗೆ ದೂರು ನೀಡಲು ಟಿ.ವಿ ಮಾಧ್ಯಮದ ಪತ್ರಕರ್ತರು ತೀರ್ಮಾನಿಸಿದ್ದು ,ಇದಲ್ಲದೇ ಈ ಕುರಿತು ಜಿಲ್ಲಾಧಿಕಾರಿಗೆ ಹಾಗೂ ಕುಮಟಾ ಎಸಿಗೆ ದೂರು ನೀಡಲು ತೀರ್ಮಾನಿಸಲಾಗಿದ್ದು, ಜಿಲ್ಲಾಧಿಕಾರಿ ಮೂಲಕ ದೇವಸ್ಥಾನದ ಮ್ಯಾನೇಜರ್ ವರ್ತನೆ ಬಗ್ಗೆ ವಿವಿಧ ಸಂಘಟನೆಗಳ ಮೂಲಕ ಮುಖ್ಯಮಂತ್ರಿಗಳಿಗೆ ದೂರು ನೀಡಲು ತೀರ್ಮಾನಿಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!