Honnavar| ತೆಲಗು ಚಿತ್ರೀಕರಣದ ವೇಳೆ ತುಂಡಾದ ಸೇತುವೆ ಕೊಂಡಿ-ಅನುಮತಿ ಪಡೆಯದೇ ಚಿತ್ರೀಕರಣ

Honnavar Telugu Movie Shooting – Hanging Bridge Damaged Honnavar Telugu Movie Shooting – Hanging Bridge Damaged
Honnavar Telugu Movie Shooting – Hanging Bridge Damaged

Honnavar|ಕಾರವಾರ :- ತೆಲಗು ಸಿನಿಮಾ ಚಿತ್ರೀಕರಣದ ವೇಳೆ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ತುಂಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavar) ತಾಲೂಕಿನ ಖಾರ್ವ ನಾಥಗೇರಿ ಬಳಿಯ ಮೋಟೆ ಯಲ್ಲಿ ನಡೆದಿದೆ.ಆಂದ್ರದ ಆರ್.ಕೆ ದುಗ್ಗುಲ್ ಸ್ಟುಡಿಯೋಸ್ ತಂಡವು ತೆಲಗು ಸಿನಿಮಾ ಚಿತ್ರೀಕರಣಕ್ಕಾಗಿ ಮೋಟೆ ತೂಗುಸೇತುವೆ ಮೇಲೆ ಭಾರೀ ಗಾತ್ರದ ಚಿತ್ರೀಕರಣದ ಪರಿಕರ ಹಾಗೂ ಟ್ರ್ಯಾಲಿಯನ್ನು ಯಾವುದೇ ಅನುಮತಿ ಇಲ್ಲದೇ ತೂಗು ಸೇತುವೆಯಮೇಲೆ ತಂದಿದ್ದಾರೆ. ಇದನ್ನೂ ಓದಿ:-Honnavar| ಶಾಲೆಯಲ್ಲಿ ಮಕ್ಕಳಿಗೆ ಶೌಚಕ್ಕೂ ಅವ್ಯವಸ್ಥೆ – ಬಾವಿಯಿಂದ ನೀರು ಸೇದಿ ಬಕೇಟ್ ಹೊತ್ತು ಹೋಗುವ ಪುಟ್ಟ ಮಕ್ಕಳು!

ಈವೇಳೆ ಸೇತುವೆಯ ಒಂದು ಭಾಗದ ಕಬ್ಬಿಣದ ಹಗ್ಗವು ತುಂಡಾಗಿ ಸೇತುವೆ ಪಕ್ಕದ ತೆಂಗಿನ ಮರದಕಡೆ ವಾಲಿದೆ,  ಇದರಿಂದ ಸೇತುವೆ ತುಂಡಾಗಿ ನದಿಗೆ ಬೀಳುವುದು ತಪ್ಪಿದ್ದು ,ದೊಡ್ಡ ಅವಘಡ ತಪ್ಪಿದೆ. ಸೇತುವೆ ಮುಂಭಾಗದಲ್ಲಿ  ಸೇತುವೆ ಶಿಥಿಲಾವಸ್ತೆಯಲ್ಲಿದ್ದು ಭಾರೀ ವಾಹನ, ವಸ್ತುಗಳನ್ನ ಕೊಂಡೊಯ್ಯದಂತೆ ನಾಮಫಲಕ ಅಳವಡಿಸಿದ್ದರೂ ,ಯಾವುದೇ ಅನುಮತಿ ಸಹ ಪಡೆಯದೇ ಚಿತ್ರತಂಡ ಚಿತ್ರೀಕರಣ ಮಾಡಿದ್ದು ಇದರಿಂದಾಗಿ ಇದೀಗ ಖರ್ವಾ ಗ್ರಾಮದ ನಾಥಗೇರಿ -ಮೊಟೆ ಭಾಗದ ಸಂಪರ್ಕ ಕೊಂಡಿ ತಪ್ಪಿದಂತಾಗಿದೆ.ಪ್ರತಿ ಮಳೆಗಾಲದಲ್ಲಿ ಮುಖ್ಯ ಸಂಪರ್ಕ ಸೇತುವೆಯಾಗಿದ್ದ ಈ ಸೇತುವೆ ಚಿತ್ರೀಕರಣ ತಂಡದ ನಿರ್ಲಕ್ಷ ಕೆಲಸದಿಂದ ಊರಿನವರು ಸಂಪರ್ಕ ಕೊಂಡಿಯನ್ನ ಕಳೆದುಕೊಂಡಂತಾಗಿದೆ. ಇನ್ನು ಸ್ಥಳಕ್ಕೆ ಗ್ರಾಮಪಂಚಾಯ್ತಿ ಪಿಡಿಓ ಗಿರೀಶ್ ನಾಯ್ಕ ಹಾಗೂ ಇತರ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದು ಪ್ರಟ್ಯೂಸರ್ ಗೌತಮ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದು ,ಈವೇಳೆ ಸೇತುವೆಯ ವೆಚ್ಚ ಬರಿಸುವುದಾಗಿ ಚಿತ್ರತಂಡ ಮುಚ್ಚಳಿಕೆ ಬರೆದುಕೊಟ್ಟ ನಂತರ ಚಿತ್ರತಂಡವನ್ನು ತೆರಳಲು ಬಿಡಲಾಯಿತು.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement