
Karwar / ಕಾರವಾರ :- ಹಲವರಿಗೆ ಸೋಷಯಲ್ ಮೀಡಿಯಾ ಕ್ರೇಸ್ ಎಷ್ಟಿರುತ್ತದೆ ಎಂದರೇ ಲೈಕ್ ಮತ್ತು ವೀವ್ ಗಾಗಿ ತಮ್ಮ ವಯುಕ್ತಿಕ ಬದುಕಿನ ವಿಡಿಯೋಗಳನ್ನ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕೊನೆಗೆ ಪರಬಾಡದ ಪಾಡು ಪಡುತ್ತಾರೆ.ಹೌದು ಇಂತದೊಂದು ಘಟನೆ ಇದೀಗ ಕಾರವಾರದಲ್ಲಿ (karwar)ಕೂಡ ನಡೆದಿದೆ. ತಾನು ತನ್ನ ಗೆಳತಿ ಜೊತೆ ಏಕಾಂತದಲ್ಲಿ ಇರುವ ವೀಡಿಯೋವನ್ನ ರೆಕಾರ್ಡ ಮಾಡಿದ್ದಾನೆ .ಸುಮಾರು ಮೂರು ನಿಮಿಷದ ವಿಡಿಯೋ ಇದಾಗಿದ್ದು ಇಬ್ಬರ ಸಮ್ಮತಿಯೊಂದಿಗೆ ಅಶ್ಲೀಲ ಏಕಾಂತದ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸಿದ ಕಾರವಾರ ತಾಲೂಕಿನ ಮಧ್ಯ ವಯಸ್ಸಿನ ಯುವಕನೊಬ್ಬ ತನ್ನ ಸ್ನೇಹಿತರಿಗೆ ಪರಾಕ್ರಮ ತೋರಿಸಲು ಷೇರ್ ಮಾಡಿದ್ದಾನೆ.
ಇನ್ನು ಪೋಲಿ ಗೆಳೆಯರು ಇದನ್ನ ನೋಡಿ ತಮ್ಮ ವಾಟ್ಸ್ ಅಪ್ ಮೂಲಕ ಮತ್ತೊಂದಿಷ್ಟು ಜನರಿಗೆ ಷೇರ್ ಮಾಡಿದ್ದು ಅಶ್ಲೀಲ ವಿಡಿಯೋ ವೈರಲ್ ಆಗಿದೆ.
ಈ ಹಿಂದೆಯೂ ಆಗಿತ್ತು ವೈರಲ್ !
ಮೂಲಗಳ ಮಾಹಿತಿ ಪ್ರಕಾರ ಕಳೆದ ಎರಡು ತಿಂಗಳ ಹಿಂದೆ ಈ ವಿಡಿಯೋ ಮಾಡಿರುವುದು ಎಂದು ಹೇಳಲಾಗುತ್ತಿದೆ. ಇಬ್ಬರ ಮುಖವೂ ಸ್ಪಷ್ಟವಾಗಿ ಕಾಣುತಿದ್ದು ,ಇದೀಗ ವೈರಲ್ ಬೆನ್ನಲ್ಲೇ ಇಬ್ಬರೂ ಮನೆಯಿಂದ ಹೊರಹೋಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಕಾರವಾರ ನಗರಕ್ಕೂ ಬರಲು ಈ ಜೋಡಿಗಳು ಬರಲು ಅಂಜುವಂತಾಗಿದೆ. ಸ್ವಯಂ ಕೃತ ಅಪರಾಧದಿಂದ ಇದೀಗ ಈ ಜೋಡಿ ಇತ್ತ ದೂರು ಕೊಡಲು ಸಹ ಹಿಂದೇಟು ಹಾಕುತಿದ್ದು ತಮ್ಮ ತಪ್ಪಿಗೆ ಪಶ್ಚತ್ತಾಪ ಪಡುತಿದ್ದಾರೆ. ಇದನ್ನೂ ಓದು:-Karwar | ಮ್ಯಾಕ್ಸ್ ಬಳಿ ಮುಸ್ಲಿಂ ಯುವಕರಿಂದ ನಡು ರಸ್ತೆಯಲ್ಲಿ ರಾಡ್ ,ಇಟ್ಟಿಗೆ ತುಂಡು ಹಿಡಿದು ಗಲಾಟೆ
ಇನ್ನು ಕೆಲವು ತಿಂಗಳ ಹಿಂದೆ ಕಾರವಾರ ತಾಲೂಕಿನ ಅಪ್ರಾಪ್ತ ಯುವತಿಯ ಅಶ್ಲೀಲ ವಿಡಿಯೋ ಸಹ ಹರಿದಾಡಿತ್ತು. ಇದಲ್ಲದೇ ಸಿದ್ದಾಪುರ ತಾಲೂಕಿನ ಅಪ್ರಾಪ್ತೆಯ ವಿಡಿಯೋ ಸಹ ಹರಿದಾಡಿ ನಂತರ ಎಸ್.ಪಿ ದೀಪನ್ ರವರ ಸೂಚನೆಯಂತೆ ಬಂಧಿಸಿ ,ಪ್ರಕರಣ ದಾಖಲಿಸಿದ್ದರು. Karwar | ಚಿತ್ತಾಕುಲದ ಬಿಡ್ತುಲ ಭಾಗದಲ್ಲಿ ಪಂಜರಕ್ಕೆ ಚಿರತೆ ಸೆರೆ-video ನೋಡಿ
ಈ ರೀತಿಯ ವಿಡಿಯೋ ವನ್ನ ನೋಡುವುದು ಹಾಗೂ ಶೇರ್ ಮಾಡುವುದು ಅಪರಾಧವಾಗಿದೆ. ಅಪ್ರಾಪ್ತರ ವಿಡಿಯೋ ಮೊಬೈಲ್ ನಲ್ಲಿ ಇಟ್ಟುಕೊಳ್ಳುವುದು ,ಷೇರ್ ಮಾಡುವುದು ಸಹ ಅಪರಾಧ ಹೀಗಾಗಿ ವಾಟ್ಸ್ ಅಪ್ ನಲ್ಲಿ ಶೇರ್ ಮಾಡುವಾಗ ಎಚ್ಚರ ವಹಿಸಿ ಹಾಗೂ ಈರೀತಿಯ ವಿಡಿಯೋಗಳನ್ನ ಷೇರ್ ಮಾಡಬೇಡಿ. ಈ ಸುದ್ದಿಯನ್ನ ಜಾಗೃತಿಗಾಗಿ ಮಾತ್ರ ಪ್ರಕಟಿಸಲಾಗಿದೆ.
