ಜೋಯಿಡಾ|ಉಳವಿ ಚನ್ನಬಸವೇಶ್ವರ ಜಾತ್ರೆಗೆ ಚಕ್ಕಡಿಗಳಿಗೆ ನಿರ್ಬಂಧ- ಕಾರಣ ಏನು?

370

ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿಯ ಚನ್ನಬಸವೇಶ್ವರ ಜಾತ್ರೆಯು ಜನವರಿ 28 ರಂದು ಪ್ರಾರಂಭವಾಗಿ ಫೆಭ್ರವರಿ 8 ಕ್ಕೆ ಸಂಪನ್ನಗೊಳ್ಳಲಿದೆ. ಫೆಭ್ರವರಿ ಆರ ರಂದು ರಥೋತ್ಸವ ನಡೆಯಲಿದ್ದು ಕೋವಿಡ್ ನಂತರ ಅದ್ದೂರಿಯಾಗಿ ಈಭಾರಿ ಜಾತ್ರೆ ನಡೆಸಲು ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ.

ಪ್ರತಿ ವರ್ಷ ಜಾತ್ರೆ ಸಂದರ್ಭ ದಲ್ಲಿ ಲಕ್ಷಾಂತರ ಭಕ್ತರು ವಿವಿಧ ಜಿಲ್ಲೆಗಳಿಂದ ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ಜಾತ್ರೆಯಲ್ಲಿ ಭಕ್ತರು ವಿವಿಧ ಜಿಲ್ಲೆಗಳಿಂದ ಎತ್ತಿನ ಗಾಡಿ ಅಥವಾ ಚಕ್ಕಡಿ ಯಲ್ಲಿ ಬಂದು ಚನ್ನಬಸವೇಶ್ವರ ದೇವರ ದರ್ಶನ ಪಡೆಯುವುದು ವಾಡಿಕೆ. ಹೀಗಾಗಿ ಈ ಜಾತ್ರೆ ಚಕ್ಕಡಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ.

ಆದರೇ ಈ ವರ್ಷ ಚಕ್ಕಡಿಯನ್ನು ಉಳವಿಗೆ ತರಲು ಜಿಲ್ಲಾಡಳಿತ ನಿಷೇಧ ಹೇರಿದೆ.ರಾಸುಗಳಿಗೆ ಲಿಂಪಿಸ್ಕಿನ್ ಸೋಂಕು ಜಿಲ್ಲೆಯಲ್ಲಿ ಹೆಚ್ಚಾದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಈಭಾರಿ ಜಾತ್ರೆಗೆ ಚಕ್ಕಡಿಗಳಲ್ಲಿ ಭಕ್ತರು ಆಗಮಿಸುವಂತಿಲ್ಲ.

ಜಿಲ್ಲೆಯಲ್ಲಿ 6185 ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸಿದೆ.285 ರಾಸುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿದೆ. ಇನ್ನು ರೋಗದಿಂದ ಕೇವಲ 2207 ಗೋವುಗಳು ಗುಣಮುಖವಾಗಿದ್ದು 3693ಗೋವುಗಳು ಸೋಂಕು ಪೀಡಿತವಾಗಿದ್ದು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಚರ್ಮಗಂಟು ರೋಗ ಹೆಚ್ಚಳವಾಗಿದೆ.

ಹೀಗಾಗಿ ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಯವರು ಈ ಆದೇಶ ಮಾಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!