ಜೋಯಿಡಾದ ಕಾಡಿನಲ್ಲೇ ತನ್ನ ಆಯಸ್ಸು ಕಳೆದ 90 ವರ್ಷದ ವೃದ್ಧನಿಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ

1232

ಕಾರವಾರ:- ಕರ್ನಾಟಕ ಸರ್ಕಾರ 66 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಆದರೇ ಉತ್ತರ ಕನ್ನಡ ಜಿಲ್ಲೆಯ ದಟ್ಟ ಅಡವಿಯಲ್ಲಿ ವಾಸಮಾಡುವ 90 ವರ್ಷದ ವೃದ್ಧರೊಬ್ಬರಿಗೆ ಪ್ರಶಸ್ತಿ ಘೋಷಿಸಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅತೀ ಹಿಂದುಳಿದ ಪ್ರದೇಶವಾದ ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯಿತಿಯ ಕಾಟೋ೯ಳಿ ಎಂಬ ಗ್ರಾಮದವರಾದ ಮಾದೇವ ವೇಳಿಪ ಜನಪದ ಕಲಾವಿದರು. ಜೊತೆಗೆ ನಾಟಿ ವೈದ್ಯರು ಸಹ. ಅತೀ ಹಿಂದುಳಿದ ಕುಣಜಿ ಬುಡಕಟ್ಟು ಸಮುದಾಯದ ಇವರು ಹುಟ್ಟಿದಾಗಿನಿಂದ ಕಾಡಿನೊಂದಿಗೆ ಬೆರೆತು ಅಲ್ಲಿನ ಪ್ರತಿ ಸಸ್ಯಗಳ ಬಗ್ಗೆ ಮಾಹಿತಿ ಯನ್ನು ತನ್ನ ಮಸ್ತಕದಲ್ಲಿ ಅಚ್ಚಾಗಿಸಿಕೊಂಡವರು. ಹಸಿರಿನೊಂದಿಗೆ ಜೀವನ ಕಟ್ಟಿಕೊಂಡ ಇವರು ಇಲ್ಲಿನ ಪರಿಸರ ಉಳಿಸಲು ತನ್ನದೇ ಆದ ಕಾಣಿಕೆ ನೀಡಿದ್ದಾರೆ.


ತಮ್ಮೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ತುಡಿತ ಹೊಂದಿರುವ ಇವರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ,ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಹಂಬಲ ಹೊಂದಿದ್ದು ಸ್ಥಳೀಯ ಜನರಿಗೆ ಕಾಡಿನ ಬಗ್ಗೆ ಮಹತ್ವ ಸಾರಲು ಜನಪದ ಹಾಡುಗಳನ್ನು ಕಟ್ಟಿ ಜನರಲ್ಲಿ ಪರಿಸರ ಜಾಗೃತಿ ಜೊತೆ ಶಿಕ್ಷಣದ ಜಾಗೃತಿ ಸಹ ಮೂಡಿಸುತಿದ್ದಾರೆ.

ಇಲ್ಲಿನ ಸಸ್ಯಗಳು, ಕಾಡಿನಲ್ಲಿ ಇರುವ ಉಂಬಳ, ಪಕ್ಷಿ,ಪ್ರಾಣಿಗಳ ಸಂರಕ್ಷಣೆ ಪಣತೊಟ್ಟ ಇವರು ಊರಿನಲ್ಲಿ ಜಾಗೃತಿ ಮೂಡಿಸುತ್ತಾ ತನ್ನ ಇಡೀ ಜೀವನವನ್ನು ಇಲ್ಲಿ ಕಳೆದಿದ್ದಾರೆ. ತನ್ನೂರಿನಲ್ಲಿ ಸಿಗುವ ಅಪರೂಪದ ಹತ್ತಕ್ಕೂ ಹೆಚ್ಚು ಅಪರೂಪದ ಗೆಡ್ಡೆ ,ಗೆಣಸುಗಳನ್ನು ಸಂರಕ್ಷಿಸಿ ಬೆಳಸಿ ಇದರ ಮಹತ್ವವನ್ನು ದೇಶ ವಿದೇಶಕ್ಕೆ ತಲುಪಿಸುವಲ್ಲಿ ಇವರ ಕಾಣಿಕೆ ಇದೆ. ಎಂದೂ ಕೂಡ ಪ್ರಚಾರವನ್ನು ಬಯಸದೇ ತನ್ನ ಜೀವಮಾನದ 90 ವರ್ಷಗಳನ್ನು ಕಾಡಿನೊಂದಿಗೆ ಬೆರೆತು ಕಳೆದಿದ್ದಾರೆ.


ಇಳೆ ವಯಸ್ಸಿನಲ್ಲಿಯೂ ಇವರ ಪರಿಸರ ಕಾಳಜಿ ಯನ್ನು ನೋಡಿ ಈ ಹಿಂದೆ ಕುದ್ದು ದಿವಂಗತ ಪುನಿತ್ ರಾಜ್ ಕುಮಾರ್ ಸಹ ಇವರನ್ನು ಭೇಟಿಮಾಡಿ ಹೋಗಿದ್ದರು.
ಇವರ ಜನಪದ ಸೇವೆಗಾಗಿ ನಾಲ್ಕು ವರ್ಷದ ಹಿಂದೆ ಜನಪದ ಪ್ರಶಸ್ತಿ ಸಹ ಲಭಿಸಿದೆ.


ಇವರಿಗೆ 3 ಗಂಡು ಮತ್ತು 4 ಹೆಣ್ಣು ಮಕ್ಕಳು,ಪತ್ನಿ ಪಾರ್ವತಿ ವೇಳಿಪ 10 ವರ್ಷದ ಹಿಂದೆ ತೀರಿಕೊಂಡಿದ್ದಾರೆ.
ಪ್ರಶಸ್ತಿ ಸನ್ಮಾನಗಳಿಗಾಗೇ ಇಂದಿನ ದಿನದಲ್ಲಿ ಲಾಭಿಮಾಡುವಾಗ ಯಾವುದೇ ಲಾಭಿ ಇಲ್ಲದೇ ತಳಮಟ್ಟದಲ್ಲಿ ಸಾಧನೆಮಾಡಿದ ಜನರನ್ನು ಗುರುತಿಸಿರುವುದು ನಿಜವಾಗಿಯೂ ಶ್ಲಾಘನೀಯ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!