SSLC, ದ್ವಿತೀಯ PUC ವರ್ಷಕ್ಕೆ ಮೂರು ಪರೀಕ್ಷೆ ಸಂಭವನೀಯ ವೇಳಾಪಟ್ಟಿ ಪ್ರಕಟ|ವಿವರ ನೋಡಿ.

153

ಬೆಂಗಳೂರು :- ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಬಳಿಕ ಸೆಪ್ಲಿಮೆಂಟರಿ ಪರೀಕ್ಷೆ ಆನಂತರ ಸೆಪ್ಲಿಮೆಂಟರಿ ಪರೀಕ್ಷೆ-2 ನಡೆಸಲಾಗಿತ್ತು. ಈ ಮೂಲಕ ಈ ಹಿಂದೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವರ್ಷಕ್ಕೆ ಮೂರು ಬಾರಿ ನಡೆಸಲಾಗಿತ್ತು. ಈಗ ಇದೇ ಮಾದರಿಯಲ್ಲಿ ದ್ವಿತೀಯ ಪಿಯುಸಿ ಬಳಿಕ, ಎಸ್‌ಎಸ್‌ಎಲ್ ಸಿ ಪರೀಕ್ಷೆಯನ್ನು ವಾರ್ಷಿಕ ಪರೀಕ್ಷೆ, ಸೆಪ್ಲಿಮೆಂಟರಿ ಪರೀಕ್ಷೆ ಹಾಗೂ ಸೆಪ್ಲಿಮೆಂಟರಿ-2 ಪರೀಕ್ಷೆಯಂತೆ ಮೂರು ಬಾರಿ ನಡೆಸುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತು ಇಂದು ವಿಧಾನಸೌಧದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ವರ್ಷಕ್ಕೆ ಮೂರು ಬಾರಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.

ಶಿಕ್ಷಣ ಸಚಿವರ ಘೋಷಣೆ ಬೆನ್ನಲ್ಲೇ ಶಾಲಾ ಶಿಕ್ಷಣ ಇಲಾಖೆಯಿಂದ ವರ್ಷದಲ್ಲಿ ಮೂರು ಬಾರಿಯ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ವರ್ಷದಲ್ಲಿ ಎಸ್‌ಎಸ್‌ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಮೂರು ಬಾರಿ ನಡೆಯಲಿದ್ದು ಅವುಗಳ ವೇಳಾಪಟ್ಟಿ ಈ ಕೆಳಗೆ ನೀಡಲಾಗಿದೆ.

ಎಸ್ ಎಸ್ ಎಲ್ ಸಿ ವರ್ಷಕ್ಕೆ ಮೂರು ಬಾರಿಯ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ.

ಪರೀಕ್ಷೆ -1 : ಮಾರ್ಚ್ 30 ರಿಂದ ಏಪ್ರಿಲ್ 15ರವರೆಗೆ ನಡೆಸಲು ನಿರ್ಧಾರ.

ಪರೀಕ್ಷೆ-2 ಜೂನ್ 12ರಿಂದ 19ರಂದು ನಡೆಸಲು ನಿಗದಿ ಮಾಡಲಾಗಿದೆ.

ಪರೀಕ್ಷೆ -3 : ಜುಲೈ.29ರಿಂದ ಆಗಸ್ಟ್ 5ರವರೆಗೆ ನಡೆಸಲು ನಿಗದಿ.

ದ್ವಿತೀಯ ಪಿಯುಸಿ ವರ್ಷಕ್ಕೆ ಮೂರು ಬಾರಿ ನಡೆಯುವ ತಾತ್ಕಾಲಿಕ ವೇಳಾಪಟ್ಟಿ

ಪರೀಕ್ಷೆ -1: ಮಾರ್ಚ್ 1ರಿಂದ ಮಾರ್ಚ್ 25ರವರೆಗೆ.

ಪರೀಕ್ಷೆ-2: ಮೇ.15ರಿಂದ ಜೂನ್ 5ರವರೆಗೆ ನಡೆಸಲು ನಿಗದಿ.

ಪರೀಕ್ಷೆ-3: ಜುಲೈ.12ರಿಂದ ಜುಲೈ.30ರವರೆಗೆ ನಡೆಸಲು ನಿಗದಿ ಮಾಡಲಾಗಿದೆ.

ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು 2023-24ನೇ ಸಾಲಿನ ಈ ವರ್ಷದಿಂದಲೇ ಮೂರು ಬಾರಿ ನಡೆಯಲಿವೆ.

ವಿದ್ಯಾರ್ಥಿಗಳು ವಾರ್ಷಿಕ, ಪೂರಕ ಪರೀಕ್ಷೆಯ ಫಲಿತಾಂಶವೂ ತೃಪ್ತಿಯಾಗದೇ ಇದ್ದರೇ, ಮತ್ತೊಮ್ಮೆ 3ನೇ ಬಾರಿ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ.

ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ, ಜ್ಞಾನಾಧಾರಿತ ವೃದ್ಧಿಯ ಗುರಿಯೊಂದಿಗೆ ವರ್ಷದಲ್ಲಿ ಮೂರು ಬಾರಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!