ನಾಳೆ ಕಾರವಾರಕ್ಕೆ ರಾಜ್ಯಪಾಲರ ಆಗಮನ|ಪತ್ರಕರ್ತರಿಗೆ ಷರತ್ತುಬದ್ಧ ವಸ್ತ್ರಸಂಹಿತೆ ಜಾರಿ ಮಾಡಿದ ನೌಕಾದಳ!

144

ಕಾರವಾರ :- ನಾಳೆ ಕಾರವಾರದ ಕದಂಬ ನೌಕಾನೆಲೆಗೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಧ್ಯಹ್ನ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ನೌಕಾನೆಲೆಯ ಕಾರ್ಯಕ್ರಮದ ಪ್ರಚಾರಕ್ಕಾಗಿ ಪತ್ರಕರ್ತರಿಗೆ ಆಹ್ವಾನಿಸಲಾಗಿದೆ. ಆದ್ರೆ ಪತ್ರಕರ್ತರಿಗೆ ಷರತ್ತು ಬದ್ಧ ವಸ್ತ್ರಸಂಹಿತೆ ಜಾರಿ ಮಾಡಿದೆ.

ಹೌದು ಪತ್ರಕರ್ತರಿಗೆ(reporters) ಹೀಗೆ ಇರಬೇಕು ಎಂಬ ನಿಯಮಗಳನ್ನು ನೌಕಾದಳ ಹೇರಿದೆ. ಅಂತ ನಿಯಮ ಏನು ಅಂತೀರಾ ಹೌದು ರಾಜ್ಯಪಾಲರ ಕಾರ್ಯಕ್ರಮಕ್ಕೆ ಆಗಮಿಸುವ ಮಾಧ್ಯಮದವರು ಚಪ್ಪಲಿ ಹಾಕುವಂತಿಲ್ಲ,ಬದಲಿಗೆ ಶೂ ಹಾಕಬಹುದು,ಸ್ವಚ್ಛ ವಾದ ಸುಂದರವಾದ ವಸ್ತ್ರವನ್ನು ಹಾಕಬೇಕು ,ವಸ್ತ್ರಗಳುಕ್ಯಾಷುವಲ್ ಆಗಿ ಇರಬೇಕು ಹೀಗಂತ ನೌಕಾದಳದ ಪತ್ರಕರ್ತರ ಗ್ರೂಪ್ ಗೆ ಈ ಸಂದೇಶವನ್ನು ಹಾಕಲಾಗಿದೆ.ಇದಲ್ಲದೇ ಹಲವು ರಿವಾಜುಗಳನ್ನು ಹೊರಡಿಸಲಾಗಿದ್ದು ಇದೀಗ ಟೀಕೆಗೆ ಕಾರಣವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮಗಳು ನೌಕಾದಳ ನಿರ್ಮಾಣವಾದಾಗಿನಿಂದ ಈವರೆಗೂ ರಾಜ್ಯಪಾಲರು,ರಾಷ್ಟ್ರಪತಿ,ಕೇಂದ್ರ ಸಚಿವರು ಸೇರಿದಂತೆ ಅನೇಕ ಗಣ್ಯರು ನೌಕಾದಳಕ್ಕೆ ಬಂದಾಗ ಸುದ್ದಿ ಕವರ್ ಮಾಡಿವೆ. ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೇ ಸುದ್ದಿಗಳನ್ನು ಕವರ್ ಮಾಡಿದೆ.ಆದ್ರೆ ಬ್ರಿಟೀಷ್ ಸಂಸ್ಕೃತಿಯನ್ನು ಇನ್ನೂ ಉಳಿಸಿಕೊಂಡಿರುವ ನೌಕಾದಳ ,ಪತ್ರಕರ್ತರಿಗೆ ಚಪ್ಪಲಿಯನ್ನು ಬ್ಯಾನ್ ಮಾಡಿದೆ. ಹೀಗಿರುವಾಗ ಜಿಲ್ಲೆಯ ಪತ್ರಕರ್ತರು ಇನ್ನೂ ಮೌನವಹಿಸಿದ್ದು ಮಾತ್ರ ದುರಂತವಾಗಿದ್ದು ,ಇಷ್ಟು ವರ್ಷ ಇಲ್ಲದ ನಿಯಮ ಈಗ ಜಾರಿ ಏಕೆ..ರಾಜ್ಯಪಾಲರು ಚಪ್ಪಲಿ ಹಾಕಿ ಕಾರ್ಯಕ್ರಮಕ್ಕೆ ಬಂದರೇ ಏನು ಮಾಡುತ್ತಾರೆ? ಎಂಬ ನೂರೆಂಟು ಪ್ರಶ್ನೆ ಜೊತೆ ಕಾರವಾರದ ಪತ್ರಕರ್ತರು ಇಷ್ಟು ಕೆಳಮಟ್ಟದ ಸ್ಥಿತಿಗೆ ಬಂದರೇ ಎಂಬ ಪ್ರಶ್ನೆ ಏಳುವಂತೆ ಮಾಡಿದೆ. ಉತ್ತರ ಕಾರವಾರದ ಪತ್ರಕರ್ತರು ಕೊಡುತ್ತಾರೋ ಅಥವಾ ನೌಕಾದಳ ತಪ್ಪು ತಿದ್ದಿಕೊಂಡು ಉತ್ತರ ಕೊಡುತ್ತೋ ಎನ್ನುವುದನ್ನು ಕಾದುನೋಡಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!