BREAKING NEWS
Search

ದಲಿತ ಮುಖಂಡನಿಂದ ಹಿಂದೂ ದೇವರ ಅವಹೇಳನ ಹೇಳಿಕೆ ಚಿತ್ರೀಕರಿಸಿದ್ದ ಯುವಕನ ಮೇಲೆ ಹಲ್ಲೆ.

291

ಕಾರವಾರ :- ಹಿಂದೂ ದೇವರ ಅವಹೇಳನ ಮಾಡಿದ ದಲಿತ ಮುಖಂಡನ ಚಿತ್ರೀಕರಣ ಮಾಡಿ ದೂರು ನೀಡುವ ಮೂಲಕ ಬಂಧಿಸಲು ಕಾರಣವಾಗಿದ್ದ ಯುವಕನ ಮೇಲೆ ದಲಿತ ಮುಖಂಡನ ಕುಟುಂಬ( family ) ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಂಗಾರಪ್ಪ ನಗರದಲ್ಲಿ ನಡೆದಿದೆ.

ಮಾರುತಿ ವಾಲ್ಮೀಕಿ ಹಲ್ಲೆಗೊಳಗಾದ ಯುವಕ ನಾಗಿದ್ದು ,ಕಳೆದ ತಿಂಗಳು ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ ಹಿಂದೂ ದೇವರ( Hindu god ) ಮೇಲೆ ಅವಹೇಳನಕಾರಿಯಾಗಿ ಮಾತನಾಡಿ ಮಾರುತಿ ವಾಲ್ಮೀಕಿ ದೂರಿನ ಮೇಲೆ ಬಂಧನಕ್ಕೊಳಗಾಗಿದ್ದರು.(arrest) ಇಂದು ರಾತ್ರಿ ಕ್ಷುಲ್ಲಕ್ಕ ಕಾರಣ ದಿಂದ ಜಗಳ ತೆಗೆದ ದಲಿತ ಮುಖಂಡ ಎಲಿಷಾ ಎಲಿಕಪಾಟಿ ಕುಟುಂಬದವರು ಮಾರುತಿ ವಾಲ್ಮೀಕಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಈ ಕುರಿತು ಮಾರುತಿ ವಾಲ್ಮೀಕಿ ಹೇಳಿಕೆ ನೀಡಿದ್ದಾರೆ‌

ಇದನ್ನೂ ಓದಿ:- ದಲಿತ ಮುಖಂಡನಿಂದ ಹಿಂದೂ ದೇವರ ಅವಹೇಳನ ವಿಡಿಯೋ ವೈರಲ್ (ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಹಲ್ಲೆಗೊಳಗಾದ ಮಾರುತಿ ವಾಲ್ಮೀಕಿ ಚಿಕ್ಕಪುಟ್ಟ ಗಾಯವಾಗಿದ್ದು ಕಾರವಾರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!