ಬೆಂಗಳೂರು :- ರಾಜ್ಯಾಧ್ಯಾಂತ ಮಳೆ ಕೊರತೆಯಾಗಿದ್ದು ಬರಗಾಲ ಪ್ರಾರಂಭವಾಯಿತೇ ಎನ್ನುವಷ್ಟರಲ್ಲಿ ಹವಾಮಾನ ಇಲಾಖೆ ರಾಜ್ಯದ ರೈತರಿಗೆ ಖುಷಿ ಸುದ್ದಿ ನೀಡಿದೆ. ಮುಂದಿನ 5 ದಿನಗಳ ಕಾಲ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂದರೇ ಸೆಪ್ಟಂಬರ್ 8 ರ ವರೆಗೂ ಮಳೆಯಾಗಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಉತ್ತರ ಒಳನಾಡಿನ ಕಲಬುರಗಿ, ಬೀದರ್, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಸೆಪ್ಟಂಬರ್ 3 ಮತ್ತು 4ರಂದು ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ 2 ದಿನ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ ಮೊದಲ ವಾರದಲ್ಲೇ ವಾಡಿಕೆಯಂತೆ ರಾಜ್ಯಾದ್ಯಂತ ಮಳೆ ಪ್ರಾರಂಭವಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿ, ರಾಯಚೂರು, ಯಾದಗಿರಿಯಲ್ಲಿ ಗರಿಷ್ಠ 35 ಡಿಗ್ರಿ, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ರಾಜ್ಯದ ಪ್ರಮುಖ ನಗರಗಳ ಹವಾಮಾನ ವರದಿ( district weather report)
ಬೆಂಗಳೂರು: 28-20
ಮಂಗಳೂರು: 31-25
ಶಿವಮೊಗ್ಗ: 29-22
ಬೆಳಗಾವಿ: 28-21
ಮೈಸೂರು: 31-21
ಮಂಡ್ಯ: 30-22
ಮಡಿಕೇರಿ: 24-18
ರಾಮನಗರ: 30-21
ಹಾಸನ: 28-19
ಇದನ್ನೂ ಓದಿ:-ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡಿದ ಮಹಾನಗರ ಪಾಲಿಕೆ
ಚಾಮರಾಜನಗರ: 30-21
ಚಿಕ್ಕಬಳ್ಳಾಪುರ: 29-19
ಹುಬ್ಬಳ್ಳಿ: 31-22
ಚಿತ್ರದುರ್ಗ: 31-21
ಹಾವೇರಿ: 31-22
ಬಳ್ಳಾರಿ: 35-24
ಗದಗ: 32-22
ಕೊಪ್ಪಳ: 30-23
ಕೋಲಾರ: 29-21
ತುಮಕೂರು: 29-21
ಉಡುಪಿ: 31-25
ಕಾರವಾರ: 31-26
ಇದನ್ನೂ ಓದಿ:-Karwar|ದಲಿತ ಮುಖಂಡನಿಂದ ಹಿಂದೂ ದೇವತೆಗಳ ಅವಹೇಳನ-ಬಂಧನ
ಚಿಕ್ಕಮಗಳೂರು: 27-19
ದಾವಣಗೆರೆ: 31-22
ರಾಯಚೂರು: 35-24
ಯಾದಗಿರಿ: 35-24
ವಿಜಯಪುರ: 34-23
ಬೀದರ್: 31-23
ಕಲಬುರಗಿ: 33-24
ಬಾಗಲಕೋಟೆ: 34-23
ಇದನ್ನೂ ಓದಿ:-ಕಾರವಾರ ಬಾರೆ ಬಳಿ ಹುಲಿ ಪ್ರತ್ಯಕ್ಷ |ಹುಲಿಯ ವಿಡಿಯೋ ವೈರಲ್