BREAKING NEWS
Search

ಚಕ್ ಬೌನ್ಸ್ ಪ್ರಕರಣ- ಸಚಿವ ಮಧು ಬಂಗಾರಪ್ಪಗೆ ದಂಡದ ಜೊತೆ ಜೈಲು ಶಿಕ್ಷೆ?!

173

ಬೆಂಗಳೂರು: ಚೆಕ್ ಬೌನ್ಸ್ (Check Bounce) ಪ್ರಕರಣದಲ್ಲಿ ಪ್ರಾಥಮಿಕ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಜನಪ್ರತಿನಿಧಿಗಳ‌ ವಿಶೇಷ ನ್ಯಾಯಾಲಯ 6.96 ಕೋಟಿ ರೂ. ದಂಡ (Fine) ವಿಧಿಸಿ ಶುಕ್ರವಾರ ಆದೇಶ ಪ್ರಕಟಿಸಿದೆ.

2011 ರಲ್ಲಿ ಆಕಾಶ್ ಆಡಿಯೋ ಪರವಾಗಿ ರಾಜೇಶ್ ಎಕ್ಸ್‌ಪೋರ್ಟ್‌ (Rajesh Exports) ಕಂಪನಿಯಿಂದ ಮಧುಬಂಗಾರಪ್ಪ 6.60 ಕೋಟಿ ರೂ. ಸಾಲವನ್ನು ಪಡೆದುಕೊಂಡಿದ್ದರು. ಸಾಲ ಪಡೆಯುವ ಸಂದರ್ಭದಲ್ಲಿ ಮಧು ಬಂಗಾರಪ್ಪ ಚೆಕ್ ನೀಡಿ ಹಣವನ್ನು ಹಿಂದಿರುಗಿಸಿರಲಿಲ್ಲ.

ಇದನ್ನೂ ಓದಿ:-ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡಿದ್ರೆ 1 ಲಕ್ಷ ಬಹುಮಾನ: ಸಚಿವ ದಿನೇಶ್ ಗುಂಡೂರಾವ್

ಮಧು ಬಂಗಾರಪ್ಪ ಅವರು 6.60 ಕೋಟಿ ರೂ. ಮೊತ್ತದಲ್ಲಿ ಕೇವಲ 50 ಲಕ್ಷ ರೂ.ವನ್ನು ಮಾತ್ರ ಮರುಪಾವತಿಸಿ ಉಳಿದ ಮೊತ್ತವನ್ನು ಮರಳಿಸಿರಲಿಲ್ಲ . ಈ ನಡುವೆ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದು ಆದೇಶ ನೀಡಿದ ಜನಪ್ರತಿನಿಧಿ ವಿಶೇಷ ನ್ಯಾಯಾಲಯವು ಮಧು ಬಂಗಾರಪ್ಪ ಅವರಿಗೆ 6,96,70,000 ರೂ. ಹಣವನ್ನು ದಂಡವಾಗಿ ಪಾವತಿಸಬೇಕು. ದಂಡ ಪಾವತಿಸದಿದ್ದರೆ 6 ತಿಂಗಳು ಸೆರೆವಾಸ‌ ಅನುಭವಿಸಲು ಆದೇಶ ನೀಡಿದೆ.

ಈ ದಂಡದ ಹಣದಲ್ಲಿ 6,96,60,000 ರೂ.ದೂರುದಾರರಿಗೆ ಪರಿಹಾರವಾಗಿ ನೀಡಬೇಕು, ಉಳಿದ 10,000 ರೂ. ಸರ್ಕಾರಕ್ಕೆ ದಂಡವಾಗಿ ನೀಡಲು ಆದೇಶವನ್ನು ನೀಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!