Karwar|₹1,18,800 ಮೌಲದ್ಯ ಗೋವಾ ಮದ್ಯ ವಶ-ಮೂರುಜನ ಬಂಧನ.

123

ಕಾರವಾರ :-ಅಕ್ರಮವಾಗಿ ಸಾಗಿಸುತ್ತಿದ್ದ 1,18,800 ಲಕ್ಷ ಮೌಲ್ಯದ ಗೋವಾ ಮದ್ಯ ವಶಪಡಿಸಿಕೊಂಡ ಘಟನೆಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಖಾಪ್ರಿ ದೇವಸ್ಥಾನ ಬಳಿ ನಡೆದಿದೆ.ಮಿಥುನ್ ನಾಯ್ಕ, ಸಂತೋಷ ಠಾಕರಕರ್, ಪ್ರಸಾದ ದೇಸಾಯಿ ಮದ್ಯ ಸಾಗಿಸುತ್ತಿದ್ದ ಆರೋಪಿತರಾಗಿದ್ದಾರೆ.

ಇವರಿಂದ 75,600ರೂ. ಮೌಲ್ಯದ 504 ಬಾಟಲ್ ಗೋವಾ ಫೆನ್ನಿ, 43,200ರೂ. ಮೌಲ್ಯದ 288 ಬಾಟಲ್ ಗೋವಾ ವಿಸ್ಕಿ ಜಪ್ತು ಮಾಡಿ ಮದ್ಯ ಸಾಗಾಟಕ್ಕೆ ಬಳಸಿದ್ದ 2 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದ್ದು ಒಟ್ಟು ಮೌಲ್ಯ 1,18,800ರೂ ಆಗಿದ್ದು ಕರ್ನಾಟಕ ಅಬಕಾರಿ ಕಾಯ್ದೆ ಕಲಂ 32, 34, 38(ಎ) ಅಡಿ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:- ಇಂದಿನ ಅಡಿಕೆ ಧಾರಣೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!