ಬಡವರ ಕಲ್ಯಾಣ ಯೋಜನೆ ಅನುಷ್ಟಾನದ ಹೊಣೆ ಗ್ರಾ.ಪಂ.ಗೆ-ಕೋಟಾ ಶ್ರೀನಿವಾಸಪೂಜಾರಿ

359

ಕಾರವಾರ:-ರಾಜ್ಯ ಸರ್ಕಾರದಿಂದ ಬಡವರ ಕಲ್ಯಾಣ ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ಕೊಡಲು ಚಿಂತಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇಂದು ಕಾರವಾರನಗರದಲ್ಲಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದವುಗಳಿಗೆ ಅರ್ಜಿ ಸಲ್ಲಿಸಿ ಹಲವು ದಿನ ಕಾಯಬೇಕಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ನಾಡ ಕಚೇರಿಗೆ, ತಾಲ್ಲೂಕು ಕಚೇರಿಗೆ ಅರ್ಜಿ ಕೊಟ್ಟವರು, ಅದು ಮಂಜೂರಾಗುವ ಮೊದಲು ಮೃತಪಟ್ಟವರಿದ್ದಾರೆ. ಇದನ್ನು ನಾನು ತಮಾಷೆಗೆ ಹೇಳಿದ್ದಲ್ಲ. ಆರು ತಿಂಗಳು, ಒಂದು ವರ್ಷ ಕಾದರೂ ಹಣ ಬರಲಿಲ್ಲ. ಸಹಜವಾಗಿ ಅವರ ಬದುಕಿನ ಕೊನೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅರ್ಜಿ ಸಲ್ಲಿಸಿದವರ ಬಗ್ಗೆ ಆಯಾ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಬಡವರು ಅವರಿಗೆ ಅರ್ಜಿಗಳನ್ನು ಸಲ್ಲಿಸಿದರೆ 24 ಗಂಟೆಗಳಲ್ಲೇ ಪರಿಶೀಲಿಸಿ ಆದೇಶ ಪತ್ರ ಕೊಡುತ್ತೇವೆ. ಈ ಎಲ್ಲ ಅಧಿಕಾರಗಳೂ ಒಂದಲ್ಲ ಒಂದು ದಿನ ಗ್ರಾಮ ‍ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಿಗೆ ಬಂದೇ ಬರುತ್ತವೆ. ಆದರೆ, ಅದನ್ನು ಸ್ವೀಕರಿಸುವ ಹೊಣೆ, ಜವಾಬ್ದಾರಿ ನಮಗಿರಬೇಕು. ಈ ಮಾದರಿಯನ್ನು ನಾನು ಕೇರಳದಲ್ಲಿ ಅಧ್ಯಯನ ಮಾಡಿದ್ದೇನೆ. ಅಲ್ಲಿ ಎಲ್ಲ ಕಾರ್ಯಕ್ರಮಗಳೂ ಗ್ರಾಮ ಪಂಚಾಯಿತಿಗಳ ಮೂಲಕ ಆಗುತ್ತಿವೆ. ನಮ್ಮಲ್ಲೂ ಜಾರಿ ಮಾಡುವ ನಿಟ್ಟಿನಲ್ಲಿ ಇಂಥ ಕಾರ್ಯಾಗಾರ, ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಕಾಳಿನದಿ ನೀರು ಉತ್ತರಕರ್ನಾಟಕ್ಕೆ-ವಿರೋಧ ಸಲ್ಲದು

ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ನೀರನ್ನು ಉತ್ತರ ಕರ್ನಾಟಕಕ್ಕೆ ಕೊಂಡೊಯ್ಯುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರಸ್ತಾಪಿಸಿದ ಅವರು
ಜನಸಾಮಾನ್ಯರಿಗೆ ಅನುಕೂಲವಾಗ್ಲಿ ಹಾಗೂ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಯಾವುದೇ ಯೋಜನೆಗಳು ಬರುತ್ತವೆ.

ಯೋಜನೆಗಳಲ್ಲಿ ಸಾಧಕ, ಬಾಧಕಗಳು ಸಾಮಾನ್ಯವಾಗಿದ್ದು, ಚರ್ಚಿಸಿದ ಬಳಿಕವೇ ಅನುಷ್ಠಾನಗೊಳಿಸಲಾಗುತ್ತದೆ.ಸದುದ್ದೇಶವನ್ನು ಇಟ್ಟುಕೊಂಡು ಜನರ ಅಭಿಪ್ರಾಯದೊಂದಿಗೆ‌ ಯೋಜನೆ ಮುಂದುವರಿಸುತ್ತೇವೆ.
ಯಾರನ್ನೂ ಕತ್ತಲಲ್ಲಿ ಇಡಲಾಗಲ್ಲ, ಎಲ್ಲರ ಜತೆಯೂ ಚರ್ಚೆ ಮಾಡಿ ನೈಜವಾದ ಉದ್ದೇಶದೊಂದಿಗೆ ಯೋಜನೆ ಮಾಡಲಾಗುವುದುಎಂದರು.

ಇನ್ನು ಸಾಗರಮಾಲಾ ಯೋಜನೆಗೆ ಮೀನುಗಾರರ ವಿರೋಧಕ್ಕೆ ಕೂಡ ನ್ಯಾಯಾಲಯದ ತೀರ್ಪು ಮನದಲ್ಲಿಟ್ಟು, ಇಲಾಖೆಗಳು ಮುಂದಿಟ್ಟಿರುವ ಹೆಜ್ಜೆ ಪರಿಗಣಿಸಲಾಗುವುದು.ಇದರೊಂದಿಗೆ ಜನರ ಅಭಿಪ್ರಾಯ ಕೂಡಾ ಪಡೆಯಲಾಗುತ್ತದೆ. ಎಲ್ಲಾ ವಿಚಾರಗಳ ಮೇಲೆ ಗಮನ ಹರಿಸಿದ ಬಳಿಕ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದರು.

ಸಿದ್ದರಾಮಯ್ಯ ,ಕುಮಾರಸ್ವಾಮಿ ಡಿಕೆಶಿ ಎಲ್ಲಿಯಾದ್ರೂ ನಮ್ಮ ಬಜೆಟ್ ಹೊಗಳು ಸಾಧ್ಯವೇ?

ಸರಕಾರದ ಬಜೆಟ್ ಬಗ್ಗೆ ವಿರೋಧ ಪಕ್ಷದವರ ಟಿಕೆಗೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ, ಸಿದ್ಧರಾಮಯ್ಯ ಹಾಗೂ ಡಿಕೆಶಿ ಎಲ್ಲಿಯಾದ್ರೂ ನಮ್ಮ ಬಜೆಟ್ ಹೊಗಳ್ತಾರೆ ಅನ್ಸುತ್ತಾ?,ಪ್ರತಿಪಕ್ಷದಲ್ಲಿದ್ದಾರೆ, ಹಾಗೆ ಟೀಕೆ ಮಾಡಬೇಕಾಗುತ್ತದೆ.

ಕರ್ನಾಟಕದ 6 ಕೋಟಿ ಜನರು ಸರಕಾರದ ಬಜೆಟ್ ಅನ್ನು ಸ್ವಾಗತಿಸಿದ್ದಾರೆ,ವಿರೋಧ ಪಕ್ಷರವರು ಬಜೆಟ್ ಅನ್ನು ಯಾವಾಗಲೂ ಹೊಗಳಲ್ಲ,ವಿರೋಧ ಪಕ್ಷದ ಕೆಲಸ ಅವರು ಮಾಡಿದಿದ್ದಾರಷ್ಟೇ.
ಸರಕಾರದ ಮಂಡಿಸಿದ್ದಕ್ಕಿಂತ ಉತ್ತಮ‌ ಬಜೆಟ್ ಬೇರೆ ಕೊಡಲು ಸಾಧ್ಯವಿಲ್ಲ ಎಂದು ರಾಜ್ಯದ ಜನರು ಹೇಳ್ತಾರೆ.ಜನಪರ, ಬಡವರ ಪರ ಹಾಗೂ ಅರ್ಥಪೂರ್ಣವಾದ ಬಜೆಟ್ ಇದಾಗಿದೆ ಎಂದರು.

ಸರಿಯಾದಮಾಹಿತಿ ಯಿಲ್ಲದೇ ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳು ಹೇಳಿಕೆ-ಕೋಟ

ಭಾರತದ ರಾಯಭಾರಿ ಅಧಿಕಾರಿಗಳ ವಿರುದ್ಧ ಕೆಲವು ವಿದ್ಯಾರ್ಥಿಗಳ ಅಸಮಾಧಾನ ತೋಡಿಕೊಂಡಿದ್ದಾರೆ.
ಸರಿಯಾದ ಮಾಹಿತಿಯಿಲ್ಲದೇ ಒಂದಿಬ್ಬರು ತಪ್ಪಾಗಿ ಹೇಳಿದ್ದಾರೆ,ಆದರೇ ಅವರು ತಮ್ಮ ಹೇಳಿಕೆಯನ್ನು ಸರಿ ಮಾಡಿಕೊಂಡಿದ್ದಾರಂತೆ.ಯಾವ ರೀತಿಯ ಭಾವನೆಯಿಂದ ಹೇಳಿದ್ದಾರೆ ಗೊತ್ತಿಲ್ಲ.ಆದರೆ, ಇಡೀ ಪ್ರಪಂಚ ಹಾಗೂ ಭಾರತೀಯ ವಿದ್ಯಾರ್ಥಿಗಳು ಕೂಡಾ ದೇಶವನ್ನು ಹೊಗಳಿದ್ದಾರೆ.ಅವರೆಲ್ಲಾ ತನ್ನಷ್ಟಕ್ಕೇ ಬರಲು ಸಾಧ್ಯವೇ?ಅವರನ್ನೆಲ್ಲಾ ಕರೆದುಕೊಂಡು ಬಂದಿದ್ದಕ್ಕೆ ಅವರು ಹೇಳಿಕೆ ನೀಡಿದ್ದಾರೆ ಎಂದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!