BREAKING NEWS
Search

ಕುಮಟಾ ದಲ್ಲಿ ನಾಯಿ ಹಿಡಿಯಲು ಹೋಗಿ ಬೋನಿನಲ್ಲಿ ಲಾಕ್ ಆಯ್ತು ಚಿರತೆ

1528

ಕಾರವಾರ :-ಆಹಾರ ಅರಸಿ ಬಂದಿದ್ದ ಚಿರತೆಯಿಂದು ಬೋನಿನಲ್ಲಿ ಇದ್ದ ನಾಯಿ ಹಿಡಿಯಲು ಹೋಗಿ ಬೋನಿನಲ್ಲೇ ಬಂಧಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ಇಂದು ನಡೆದಿದೆ.ರಾತ್ರಿ ನಾಯಿ ಹಿಡಿಯಲು ಬಂದಿದ್ದ ಚಿರತೆಯನ್ನು ನಾಯಿ ಬೋನಿನೊಳಗೆ ಹೋದದ್ದನ್ನ ಗಮನಿಸಿದ ಮನೆಯ ಮಾಲಿಕರು ತಕ್ಷಣ ಬೋನನ್ನು ಲಾಕ್ ಮಾಡಿದ್ದಾರೆ.

ಅದೃಷ್ಟವಶಾತ್ ಬೋನಿನಲ್ಲಿ ಇದ್ದ ನಾಯಿ ತಪ್ಪಿಸಿಕೊಂಡಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಚಿರತೆ ರಕ್ಷಣೆ ಮಾಡಲು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಕಾರ್ಯಾಚರಣೆಗೆ ದೊಡ್ಡ ಸವಾಲು ಎದುರಾಗಿದ್ದು ಹೆಚ್ಚು ಗಟ್ಟಿ ಇಲ್ಲದ ಕಾರಣ ಚಿರತೆ ದಾಳಿ ಮಾಡುವ ಸಾಧ್ಯತೆಗಳಿದ್ದು ನುರಿತ ತಂಡ ಇದರ ರಕ್ಷಣೆಗೆ ಪ್ರಯತ್ನಿಸುತಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!