ವಾತ,ಬಲಹೀನತೆಗೆ ರಾಮಬಾಣ ಈ ಅಂಬಟೆಮರ:ಉಪಯೋಗ ತಿಳಿಯಿರಿ

1331

ಅಂಬಟೆಮರ ಹೆಸರು ಕೇಳದವರಿಲ್ಲ.ಮಲೆನಾಡು ಭಾಗದಿಂದ ಹಿಡಿದು ಕರಾವಳಿ ಉದ್ದಕ್ಕೂ ಇದು ಹಚ್ಚ ಹಸಿರಿನಿಂದ ಬೆಳೆಯುತ್ತದೆ.ಇದರ ಕಾಯಿ,ಹಣ್ಣು,ತೊಗಟೆಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿವೆ. ಇಂಗ್ಲಿಷ್ ನಲ್ಲಿ Great hog plum ಎಂದು ಕರೆಸಿಕೊಳ್ಳುವ ಇದು ಸಸ್ಯ ಶಾಸ್ತ್ರದಲ್ಲಿ Spondias pinnata (L.f) Kurz ಎಂದು ಕರೆಯಲಾಗುತ್ತದೆ. Anacardiacceae ಎಂಬ ಕುಟುಂಬಕ್ಕೆ ಸೇರಿದೆ.

ಉಪಯೊಗ:-
ಇದರ ಕಾಯಿಗಳು ಉಪ್ಪಿನಕಾಯಿ,ಅಡುಗೆಯಲ್ಲಿ ಬಳಕೆ,ಇತರ ವ್ಯಂಜನಗಳಿಗೂ ಯೋಗ್ಯವಾಗಿದೆ. ಇದು ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಒಳ್ಳೆಯದು,ಎಲೆ,ಹೂಗಳು ರುಚಿಕರ ಅಡುಗೆ ದ್ರವ್ಯಗಳು.ಗಂಟಲು,ಕಿವಿ,ಮೂಗು,ಕಣ್ಣುಗಳ ತೊಂದರೆಗಳಿಗೆ ಪರಿಣಾಮಕಾರಿ ಮದ್ದು.ಬೆಂಕಿ ಹುಣ್ಣು,ಫೈತ್ತಿಕವ್ರಣ,ವುಷವ್ರಣಗಳು,ಚರ್ಮದ ವರ್ಣ ರಾಹಿತ್ಯಗಳಿಗೆ ಇವುಗಳ ಎಲೆ ,ತೊಗಟೆಗಳು ಉಪಯುಕ್ತವಾಗಿದೆ.ಸ್ತ್ರೀರೋಗಗಳಿಗೆ ತೊಗಟೆ ಮತ್ತು ಬೇರುಗಳು ಒಳ್ಳೆಯ ಔಷಧಗಳಾಗಿದೆ.
ಜಾನುವಾರುಗಳ ಹಾಗೂ ಕರುಗಳಿಗೆ ವಿಶೇಷ ಔಷಧವಾಗಿ ಬಳಕೆ ಆಗುತ್ತದೆ.
ಕರಾವಳಿಯಲ್ಲಿ ಆಯುರ್ವೇದದ ಅಂಬಷ್ಟವಾಗಿ ಪ್ರಸಿದ್ಧ. ಇಡೀ ಏಷ್ಯ ಭಾಗದಲ್ಲಿ ಪಸರಿಸಿರುವ ಈ ಸಸ್ಯಗಳಲ್ಲಿ ಹಲವಾರು ಒಳ ಪ್ರಬೇದಗಳು ಸಹ ಇವೆ.
ಪ್ರಮುಖವಾಗಿ ಬಿಳಿ,ಕಾರೆ,ಕಾಡು-ಮೂರು ಭೇದಗಳು.

ದೇಹದ ಕೈಕಾಲುಗಳ ಅವಶತೆ,ಬಲಹೀನತೆ ಗೆ ಔಷಧವಾಗಿದ್ದು ಅಂಬಟೆ ಎಲೆ ಹಾಗೂ ಹುಣಸೆ ಎಲೆಗಳನ್ನು ಹಾಕಿ ಬೇಯಿಸಿದ ನೀರಿನಲ್ಲಿ ತಣಿಸಿ ಅದರಲ್ಲಿ ಸ್ನಾನ,ಕೈಕಾಲುಗಳಿಗೆ ಧಾರೆ ಹಿಡಿಯುವುದರಿಂದ ಉಪಶಮನವಾಗುತ್ತದೆ. (ಎರಡ ರಿಂದ ಮೂರು ವಾರಗಳ ಕಾಲ ಪುನರಾವರ್ತನೆ ಮಾಡಬೇಕು).
ಅಮಟೆ ಎಲೆ ಹಾಗೂ ಹುಳಸೆ ಎಲೆ ಸಮಪ್ರಮಾಣದಲ್ಲಿ ಸೇರಿಸಿ ಎಣ್ಣೆಯೊಂದಿಗೆ ಕುದಿಸಿ ಮೈಗೆ ಹಚ್ಚುವುದರಿಂದ ವಾತದ ನೋವುಗಳು ಗುಣವಾಗುತ್ತದೆ.
ಅಡುಗೆಯನ್ನು ಮಾಡುವಾಗ ಕೆಸದ ಗಡ್ಡೆ,ಎಲೆ,ಸುವರ್ಣ ಗಡ್ಡೆ ಯಂತಹ ಪದಾರ್ಥಗಳು ಹಾಗೇ ಬೇಯಿಸಿದಾಗ ತಿನ್ನುವಾಗ ತುರುಕೆ ಬರುತ್ತದೆ.ಈ ತುರಿಕೆ ನಿವಾರಣೆಗೆ ಬೇಯಿಸುವ ಮೊದಲು ಅಂಬಟೆ ಎಲೆಯನ್ನು ಅವುಗಳ ಜೊತೆ ಇಟ್ಟು ಬೇಯಿಸಿದಲ್ಲಿ ತುರಿಕೆ ಬರುವುದಿಲ್ಲ. ಮುಂದಿನ ಸೋಮವಾರ ಮತ್ತದು ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿಯೊಂದಿಗೆ ನಿಮ್ಮ ಮುಂದೆ ಬರುತ್ತೇವೆ.
ನಮ್ಮ ಲೇಖನ ಇಷ್ಟವಾದರೆ ಈ ಲಿಂಕ್ ಅನ್ನು ಷೇರ್ ಮಾಡಿ ಪ್ರೊತ್ಸಾಹಿಸಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!