ಸರ್ಕಾರದ ಗ್ಯಾರಂಟಿ ಯೋಜನೆಯಿಂದ ನಮಗೆ ಬಾರ ಬಿದ್ದಿದೆ- ಹೆಚ್ .ಕೆ ಪಾಟೀಲ್

111

ಕಾರವಾರ :- ಸರ್ಕಾರದ ಗ್ಯಾರಂಟಿ ಯೋಜನೆಯಿಂದ ನಮಗೆ ಬಾರ ಬಿದ್ದಿದೆ.ಆದ್ರೆ ಮುಖ್ಯಮಂತ್ರಿಗಳ ಚಾಣಾಕ್ಷ ನೀತಿಯಿಂದ ಇದನ್ನು ನೀಗಿಸುತಿದ್ದಾರೆ.


ಹಲವು ಮೂಲಗಳಿಂದ ಹೆಚ್ಚು ಹಣ ಕ್ರೂಡೀಕರಣ ಮಾಡುವ ಮೂಲಕ ಸರಿದೂಗಿಸುತ್ತೇವೆ.ಮುಂದಿನ ಬಜೆಟೆ ನಲ್ಲಿ ತೆರಿಗೆ ಹೆಚ್ಚಳ ಮಾಡಬಹುದು ಎಂದು
ಶಿರಸಿಯಲ್ಲಿ ಕಾನೂನು ಮತ್ತು ಪ್ರವಾಸೋಧ್ಯಮ ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊಡೆತ ಬಿದ್ದಿರುವ ಬಗ್ಗೆ ಮಾತನಾಡಿದರು.ಇನ್ನು ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ ಸೋನಿಯಾ ಗಾಂಧಿ , ಪ್ರಿಯಾಂಕಗಾಂಧಿ,ರಾಹುಲ್ ಗಾಂಧಿ ಸ್ಪರ್ಧಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

ಐದಾರು ಕ್ಷೇತ್ರದ ನಾಯಕರು ಒತ್ತಾಯ ಮಾಡಿದ್ದಾರೆ ಆದ್ರೆ ,ಇನ್ನೂ ಕೂಡ ಈ ಬಗ್ಗೆ ಚರ್ಚೆ ಯಾಗಿಲ್ಲ ಎಂದರು.ಬಿಕೆ ಹರಿಪ್ರಸಾದ್ ರವರ ಅಸಮಾಧಾನ ಕ್ಕೆ ಪ್ರತಿಕ್ರಿಯಿಸಿದ ಅವರು ಹರಿಪ್ರಸಾದ್ ಪಕ್ಷದ ವರ್ಕಿಂಗ್ ಕಮಿಟಿ ಸದಸ್ಯರು,
ಅವರನ್ನು ಸಮಾಧಾನ ಪಡಿಸುವುದಲ್ಲ ಅವರು ನಮಗೆ ಸಮಾಧಾನ ಪಡಿಸಬೇಕು ಎಂದರು.

ಇದನ್ನೂ ಓದಿ:- Loksabha| ನಮ್ಮ ದೇಶವನ್ನಾಳಿದ ಪ್ರಧಾನಿಗಳೆಷ್ಟು ಗೊತ್ತಾ? ಚುನಾವಣೆ ಹೊಸ್ತಿಲಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ


ಲೋಕಸಭೆಯಲ್ಲಿ 142 ಸಂಸದರ ಅಮಾನತ್ತು ಮಾಡಿರುವುದು ಪ್ರಜಾಸತ್ತಾತ್ಮಕ ವ್ಯವಸ್ತೆ ಗೆ ಬಹುದೊಡ್ಡ ಕೊಡಲಿ ಪೆಟ್ಟು ಅಂತರಾಷ್ಟ್ರೀಯ ಮಟ್ಟದ ವ್ಯವಸ್ಥೆ ಯಲ್ಲಿ ಭಾರತವನ್ನು ಅವಮಾನಗೊಳಿಸಿರುವ ಬಿಜೆಪಿ ನೀತಿ ಖಂಡನೀಯ ಮಾತ್ರವಲ್ಲ ,ಪ್ರಜಾಪ್ರಭುತ್ವ ಕ್ಕೆ ಬಂದಿರುವ ದೊಡ್ಡ ಭಯ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!