BREAKING NEWS
Search
Indian Prime Ministers

Loksabha| ನಮ್ಮ ದೇಶವನ್ನಾಳಿದ ಪ್ರಧಾನಿಗಳೆಷ್ಟು ಗೊತ್ತಾ? ಚುನಾವಣೆ ಹೊಸ್ತಿಲಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

176

ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ( Loksabha election 2024) ಬಂದೇ ಬಿಟ್ಟಿತು.ಆದ್ರೆ ಈವರೆಗೆ ನಮ್ಮ ದೇಶವನ್ನು ಎಷ್ಟು ಜನ ಪ್ರಧಾನಿಗಳು ಆಳಿವೆ?,ಯಾವ ಪಕ್ಷ ಅಧಿಕಾರದಲ್ಲಿ ಎಷ್ಟುಬಾರಿ ಇತ್ತು?, ಯಾರು ದೀರ್ಘಾವಧಿ ಪ್ರಧಾನಿ ಆಗಿದ್ರು, ಯಾವ ಪ್ರಧಾನಿ ಯಾವ ಕ್ಷೇತ್ರದಿಂದ ಆಯ್ಕೆಯಾದ್ರೂ, ಹೀಗೆ ನೀವು ಮರೆತ ಒಂದಿಷ್ಟು ಮಾಹಿತಿ ಇಲ್ಲಿದೆ.

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕಾಂಗ್ರೆಸ್ ಉತ್ತರ ಪ್ರದೇಶದ ಫೂಲ್ಪುರ ಕ್ಷೇತ್ರ ದಿಂದ ಆಯ್ಕೆಯಾಗಿದ್ದರು.

ನೆಹರುರವರ ಅವಧಿ:-

15 ಆಗಸ್ಟ್ 1947 ರಿಂದ 15 ಎಪ್ರಿಲ್ 1952,

15 ಎಪ್ರಿಲ್ 1952 ರಿಂದ 17 ಎಪ್ರಿಲ್ 1957

17 ಎಪ್ರಿಲ್ 1957 ರಿಂದ 2 ಎಪ್ರಿಲ್ 1962

2 ಎಪ್ರಿಲ್ 1962 ರಿಂದ 27 ಮೇ 1964

ನೆಹರೂ ನಿಧನದ ನಂತರ ಗುಲ್ಜಾರಿಲಾಲ್ ನಂದಾ ಹಂಗಾಮಿ ಪ್ರಧಾನಿಯಾಗಿ 27 ಮೇ 1964ರಿಂದ 9 ಜೂನ್ 1964ರವರೆಗೆ ಹೊಣೆ ನಿಭಾಯಿಸಿದ್ದರು.

ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ರವರು ಪ್ರಧಾನಿಯಾದರು ಇವರು ಕಾಂಗ್ರೆಸ್ ಪಕ್ಷದಿಂದ ಉತ್ತರ ಪ್ರದೇಶದ ಅಲಹಾಬಾದ್ ಕ್ಷೇತ್ರ ದಿಂದ ಗೆದ್ದು ಆಯ್ಕೆಯಾಗಿದ್ದರು.

ಶಾಸ್ತ್ರಿಯವರ ಅವಧಿ:-

9 ಜೂನ್ 1964ರಿಂದ 11 ಜನವರಿ 1966

ಶಾಸ್ತ್ರಿ ರವರ ಅಕಾಲಿಕ ನಿಧನದ ಬಳಿಕ ಮತ್ತೊಮ್ಮೆ ಗುಲ್ಜಾರಿಲಾಲ್ ನಂದಾ ರವರು 1966ರ ಜನವರಿ 11ರಿಂದ 24ರವರೆಗೆ ಹಂಗಾಮಿಯಾಗಿ ಪ್ರಧಾನಿ ಹುದ್ದೆ ನಿರ್ವಹಿಸಿದರು.

ನಂತರ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದು ಇವರು ಕಾಂಗ್ರೆಸ್ ನಿಂದ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರ ದಿಂದ ಆಯ್ಕೆಯಾಗಿದ್ದರು.

ಇಂದಿರಾ ಅಧಿಕಾರದಲ್ಲಿದ್ದ ಅವಧಿ:-

1)24 ಜನವರಿ 1966ರಿಂದ 4 ಮಾರ್ಚ್ 1967

2)4 ಮಾರ್ಚ್ 1967ರಿಂದ 15 ಮಾರ್ಚ್ 1971

3) 15 ಮಾರ್ಚ್ 1971ರಿಂದ 24 ಮಾರ್ಚ್ 1977

ಇಂದಿರಾ ಗಾಂಧಿ ರವರು ಎಮರ್ಜನ್ಸಿ ಹೇರಿದ ಬಳಿಕ ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆಯಾಗಿ ಮೂರು ವರ್ಷ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಕೂಂಡಿತ್ತು. ಮತ್ತೆ ಅದು ಅಧಿಕಾರಕ್ಕೆ ಬಂದಾಗ ಪುನಃ ಇಂದಿರಾ ಗಾಂಧಿಯವರು ಪ್ರಧಾನಿಯಾದರು. ಈ ಬಾರಿ ಅವರು ಆಂಧ್ರಪ್ರದೇಶದ ಮೇದಕ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ನಾಲ್ಕನೇ ಅವಧಿಗೆ ಇಂದಿರಾ ಪ್ರಧಾನಿಯಾದ ಸಮಯ – 14 ಜನವರಿ 1980ರಿಂದ 31 ಅಕ್ಟೋಬರ್ 1984

ಇಂದಿರ ಹತ್ಯೆ ಬಳಿಕ ಮೊರಾರ್ಜಿ ದೇಸಾಯಿಯವರು ಪ್ರಧಾನಿಯಾದರು. ಅವರು ಜನತಾ ಪಕ್ಷ ದಿಂದ ಗುಜರಾತ್‌ನ ಸೂರತ್ ಕ್ಷೇತ್ರ ದಿಂದ ಆಯ್ಕೆಯಾಗಿದ್ದರು. 24 ಮಾರ್ಚ್ 1977ರಿಂದ 28 ಜುಲೈ 1979 ವರೆಗೆ ಅಧಿಕಾರ ನಡೆಸಿದರು.

ನಂತರ ಚೌಧರಿ ಚರಣ್ ಸಿಂಗ್ ಪ್ರಧಾನಿಯಾಗಿದ್ದು ಜನತಾ ಪಕ್ಷ(ಸೆಕ್ಯುಲರ್) ನಿಂದ ಉತ್ತರ ಪ್ರದೇಶದ ಬಾಘಪತ್ ಕ್ಷೇತ್ರ ದಿಂದ ಗೆದ್ದಿದು 28 ಜುಲೈ 1979ರಿಂದ 14 ಜನವರಿ 1980 ವರೆಗೆ ಅಧಿಕಾರ ನಡೆಸಿದರು.
ಇವರ ನಂತರ ಇಂಧಿರಾ ಗಾಂಧಿ ಪುತ್ರ ರಾಜೀವ್ ಗಾಂಧಿ ಕಾಂಗ್ರೆಸ್ ಪಕ್ಷದಿಂದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರ ದಿಂದ ಗೆದ್ದು ಪ್ರಧಾನಿಯಾದರು.

ಇದನ್ನೂ ಓದಿ:-BjP-JDS ಮೈತ್ರಿ- ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ BJP ಸ್ಪರ್ಧಿ ಆಕಾಂಕ್ಷಿ ಪಟ್ಟಿಯಲ್ಲಿ ಇಬ್ಬರು JDS ಆಕಾಂಕ್ಚಿಗಳು?

ರಾಜೀವ್ ಗಾಂಧಿ 31 ಅಕ್ಟೋಬರ್ 1984ರಿಂದ 31 ಡಿಸೆಂಬರ್ 1984 ಹಾಗೂ 31 ಡಿಸೆಂಬರ್ 1984ರಿಂದ 2 ಡಿಸೆಂಬರ್ 1989 ರ ವರೆಗೆ ಅಧಿಕಾರ ನಡೆಸಿದರು.

ರಾಜೀವ್ ಗಾಂಧಿ ಹತ್ಯೆ ನಂತರ ಏಳನೇ ಪ್ರಧಾನಿಯಾಗಿ ವಿ.ಪಿ. ಸಿಂಗ್ ಜನತಾ ದಳ ದಿಂದ ಉತ್ತರ ಪ್ರದೇಶದ ಫತೇಪುರ್ ನಿಂದ ಗೆದ್ದು 2 ಡಿಸೆಂಬರ್ 1989 ರಿಂದ 10 ನವೆಂಬರ್ 1990 ರ ವರೆಗೆ ಪ್ರಧಾನಿಯಾದರು.

ನಂತರ ಚಂದ್ರಶೇಖರ್ ರಾಷ್ಟ್ರೀಯ ಸಮಾಜವಾದಿ ಜನತಾ ಪಕ್ಷ ದಿಂದ ಉತ್ತರ ಪ್ರದೇಶದ ಬಲ್ಲಿಯಾ ಕ್ಷೇತ್ರ ದಿಂದ ಗೆದ್ದು 10 ನವೆಂಬರ್ 1990ರಿಂದ 21 ಜೂನ್ 1991 ರ ವರೆಗೆ ಪ್ರಧಾನಿಯಾಗಿ ಆಡಳಿತ ನಡೆದಿದರು.

ದೇಶದ ಒಂಬತ್ತನೇ ಪ್ರಧಾನಿಯಾಗಿ ವಿ.ಪಿ ನರಸಿಂಹರಾವ್ ಕಾಂಗ್ರೆಸ್ ಪಕ್ಷದಿಂದ ಆಂಧ್ರಪ್ರದೇಶದ ನಂದ್ಯಾಲ್ ನಿಂದ ಗೆದ್ದು 21 ಜೂನ್ 1991ರಿಂದ 16 ಮೇ 1996 ರ ವರೆಗೆ ಪ್ರಧಾನಿಯಾದರು.

ದೇಶದ 10 ನೇ ಪ್ರಧಾನಿಯಾಗಿ ಎ.ಬಿ. ವಾಜಪೇಯಿ ಬಿಜೆಪಿ ಯಿಂದ ಉತ್ತರ ಪ್ರದೇಶದ ಲಕ್ನೊ ಕ್ಷೇತ್ರ ದಿಂದ ಗೆದ್ದು 16 ಮೇ 1996ರಿಂದ 1 ಜೂನ್ 1996 ರ ವರೆಗೆ ಪ್ರಧಾನಿಯಾಗಿದ್ದು ಕೆಲವೇ ದಿನಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಾಗ ಹುದ್ದೆಯಿಂದಿಳಿದ ವಾಜಪೇಯಿ, ಎರಡು ವರ್ಷಗಳ ಬಳಿಕ ಮತ್ತೆ ಪ್ರಧಾನಿಯಾದರು. ಆ ಅವಧಿಗಳೆಂದರೆ,19 ಮಾರ್ಚ್ 1998ರಿಂದ 10 ಅಕ್ಟೋಬರ್ 1999 ಮತ್ತು10 ಅಕ್ಟೋಬರ್ 1999ರಿಂದ 22 ಮೇ 2004.

ಇವರ ನಂತರ ಕರ್ನಾಟಕದ ಮಣ್ಣಿನ ಮಗ ಎಚ್.ಡಿ. ದೇವೇಗೌಡ ಜನತಾ ದಳ ದಿಂದ ಕರ್ನಾಟಕದಿಂದ ರಾಜ್ಯಸಭಾ ಸದಸ್ಯ ರಾಗಿ ಆಯ್ಕೆಯಾಗಿ 1 ಜೂನ್ 1996ರಿಂದ 21 ಎಪ್ರಿಲ್ 1997 ರ ವರೆಗೆ ಪ್ರಧಾನಿಯಾಗಿದ್ದರು.

ನಂತರ ಐ.ಕೆ. ಗುಜ್ರಾಲ್ ಜನತಾ ದಳ ದಿಂದ ಬಿಹಾರದಿಂದ ರಾಜ್ಯ ಸಭಾ ಸದಸ್ಯ ರಾಗಿ ಆಯ್ಕೆಯಾಗಿ 21 ಎಪ್ರಿಲ್ 1997ರಿಂದ 19 ಮಾರ್ಚ್ 1998 ರ ವರೆಗೆ ಪ್ರಧಾನಿಯಾಗಿದ್ದರು.

13 ನೇ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಕಾಂಗ್ರೆಸ್ ನಿಂದ ಅಸ್ಸಾಮಿನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ 22 ಮೇ 2004ರಿಂದ 22 ಮೇ 2009 ಮತ್ತು 22 ಮೇ 2009ರಿಂದ 26 ಮೇ 2014 ರ ವರೆಗೆ ಪ್ರಧಾನಿಯಾಗಿದ್ದರು.

ಇದನ್ನೂ ಓದಿ:-ಶಿರಸಿ: ಮಗನ ಶವದ ಮುಂದೆಯೇ ತಾಯಿ ಮಗಳು ಆತ್ಮಹತ್ಯೆ

ನಂತರ ದೇಶದ 14 ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಬಿಜೆಪಿ ಯಿಂದ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರ ದಿಂದ ಗೆದ್ದು 2014ರಿಂದ ಪ್ರಧಾನಿ ಹುದ್ದೆಯಲ್ಲಿದ್ದಾರೆ.

ಇವರ ಮೊದಲ ಅವಧಿ 26 ಮೇ 2014ರಿಂದ 30 ಮೇ 2019 ಅನಂತರ 30 ಮೇ 2019ರಿಂದ ಪ್ರಧಾನಿ ಹುದ್ದೆಯಲ್ಲಿದ್ದಾರೆ.

ಈವರೆಗಿನ ಪ್ರಧಾನಿಗಳಲ್ಲಿ ನೆಹರೂ, ಶಾಸ್ತ್ರಿ, ಇಂದಿರಾ ಗಾಂಧಿ, ಚರಣ್ ಸಿಂಗ್, ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಚಂದ್ರಶೇಖರ್, ವಾಜಪೇಯಿ ಮತ್ತು ಮೋದಿ ಈ 9 ಪ್ರಧಾನಿಗಳು ಉತ್ತರ ಪ್ರದೇಶವನ್ನೇ ಪ್ರತಿನಿಧಿಸಿದವರಾಗಿದ್ದಾರೆ.

ಪ್ರಧಾನಿ ಹುದ್ದೆಯಲ್ಲಿ ಅತಿ ದೀರ್ಘ ಅವಧಿ ಅಂದರೆ 16 ವರ್ಷ 286 ದಿನ ಅಧಿಕಾರದಲ್ಲಿದ್ದವರು ನೆಹರೂ ರವರಾಗಿದ್ದು ಅತಿ ಕಡಿಮೆ ಅಂದರೆ 16 ದಿನಗಳ ಕಾಲ ಪೂರ್ಣ ಪ್ರಮಾಣದ ಪ್ರಧಾನಿ ಆಗಿದ್ದವರು ವಾಜಪೇಯಿ ಯಾಗಿದ್ದಾರೆ. ಪ್ರಧಾನಿಯಾಗಿ ಐದು ವರ್ಷಗಳ ಅವಧಿ ಪೂರ್ಣಗೊಳಿಸಿದ ಪ್ರಪ್ರಥಮ ಕಾಂಗ್ರೆಸೇತರ ಪ್ರಧಾನಿಯೂ ವಾಜಪೇಯಿಯವರೇ ಆಗಿದ್ದಾರೆ.

ಇಂದಿರಾ ಗಾಂಧಿ ಈ ದೇಶದ ಪ್ರಪ್ರಥಮ ಹಾಗೂ ಏಕೈಕ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ ಅವರದ್ದು .
ರಾಜೀವ್ ಗಾಂಧಿ ಅತ್ಯಂತ ಕಿರಿಯ ವಯಸ್ಸಲ್ಲಿ ಅಂದ್ರೆ 40 ವರ್ಷಕ್ಕೆ ಪ್ರಧಾನಿ ಆದವರಾಗಿದ್ದಾರೆ.

ಸಂಸತ್ತಿಗೆ ಹಾಜರಾಗುವ ಅವಕಾಶ ಪಡೆಯದ ಪ್ರಧಾನಿ ಚೌಧರಿ ಚರಣ್ ಸಿಂಗ್ ಹೆಸರಿದೆ. ಅವಿಶ್ವಾಸ ನಿರ್ಣಯದಲ್ಲಿ ಸೋತು ರಾಜೀನಾಮೆ ನೀಡಿದ ಪ್ರಪ್ರಥಮ ಪ್ರಧಾನಿ ವಿ.ಪಿ. ಸಿಂಗ್ ರವರಾಗಿದ್ದಾರೆ.

ಮನಮೋಹನ್ ಸಿಂಗ್ ಪ್ರಪ್ರಥಮ ಸಿಖ್ ಪ್ರಧಾನ ಮಂತ್ರಿ ಎಂಬ ಪಟ್ಟ ಅವರಿಗೆ ಸೇರುತ್ತದೆ. ಸತತ ಎರಡು ಅವಧಿಗೆ ಅಧಿಕಾರದಲ್ಲಿದ್ದ ಪ್ರಪ್ರಥಮ ಕಾಂಗ್ರೆಸೇತರ ಪ್ರಧಾನಿ ನರೇಂದ್ರ ಮೋದಿ ಮಾತ್ರ.
ಪ್ರಧಾನಿ ಹುದ್ದೆಗೇರಿದ ದಕ್ಷಿಣ ರಾಜ್ಯಗಳ ನಾಯಕರೆಂದರೆ ಪಿ.ವಿ. ನರಸಿಂಹರಾವ್ ಮತ್ತು ದೇವೇಗೌಡರು ಮಾತ್ರ.

ಉಪ ಪ್ರಧಾನಿಗಳಾಗಿದ್ದ ನಾಯಕರ ವಿವರಗಳು ಹೀಗಿವೆ:-

1.ವಲ್ಲಭಭಾಯ್ ಪಟೇಲ್ ನೆಹರೂ ಅವಧಿಯಲ್ಲಿ 15 ಆಗಸ್ಟ್ 1947ರಿಂದ 15 ಡಿಸೆಂಬರ್ 1950ರವರೆಗೆ ಹುದ್ದೆಯಲ್ಲಿದ್ದ ಪಟೇಲ್, ಗೃಹ ಸಚಿವರೂ ಆಗಿದ್ದರು.

2.ಮೊರಾರ್ಜಿ ದೇಸಾಯಿ ಇಂದಿರಾ ಅವಧಿಯಲ್ಲಿ 21 ಮಾರ್ಚ್ 1967ರಿಂದ 6 ಡಿಸೆಂಬರ್ 1969ರವರೆಗೆ ಹುದ್ದೆ ನಿರ್ವಹಿಸಿದ್ದರು. ಹಣಕಾಸು ಸಚಿವರೂ ಆಗಿದ್ದರು.

3.ಚೌಧರಿ ಚರಣ್ ಸಿಂಗ್ ಮೊರಾರ್ಜಿ ದೇಸಾಯಿ ಅವಧಿಯಲ್ಲಿ ಈ ಹುದ್ದೆಯಲ್ಲಿದ್ದ ಸಿಂಗ್, ಗೃಹ ಮತ್ತು ಹಣಕಾಸು ಖಾತೆಯನ್ನೂ ನಿಭಾಯಿಸಿದ್ದರು.

  1. ಬಾಬು ಜಗಜೀವನ್ ರಾಮ್ ಚರಣ್ ಸಿಂಗ್ ಬಳಿಕ ಮೊರಾರ್ಜಿ ದೇಸಾಯಿ ಅವಧಿಯಲ್ಲಿಯೇ ಉಪ ಪ್ರಧಾನಿಯಾದರು. ರಕ್ಷಣಾ ಖಾತೆ ಹೊಣೆಯನ್ನೂ ಹೊತ್ತಿದ್ದರು.

5.ಯಶವಂತ್ ಚವಾಣ್ ಚರಣ್ ಸಿಂಗ್ ಅವಧಿಯಲ್ಲಿ 28 ಜುಲೈ 1979ರಿಂದ 14 ಜನವರಿ 1980ರವರೆಗೆ ಹುದ್ದೆಯಲ್ಲಿದ್ದರು. ಗೃಹ ಖಾತೆಯನ್ನೂ ಹೊಂದಿದ್ದರು.

6.ದೇವಿಲಾಲ್‌ರವರು ವಿ.ಪಿ. ಸಿಂಗ್ ಮತ್ತು ಚಂದ್ರಶೇಖರ್ ಅವಧಿಯಲ್ಲಿ ಕೃಷಿ ಖಾತೆ ಹೊಣೆ ಹೊತ್ತಿದ್ದು, ಉಪ ಪ್ರಧಾನಿಯಾಗಿದ್ದರು.

7.ಎಲ್.ಕೆ. ಅಡ್ವಾಣಿ ವಾಜಪೇಯಿ ಅವಧಿಯಲ್ಲಿ 5 ಫೆಬ್ರವರಿ 2002ರಿಂದ 22 ಮೇ 2004ರವರೆಗೆ ಹುದ್ದೆಯಲ್ಲಿದ್ದರು. ಗೃಹ ಖಾತೆಯನ್ನು ಹೊಂದಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!