BJP-JDSಮೈತ್ರಿ: ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಇಬ್ಬರು ಆಕಾಂಕ್ಷಿಗಳು! ಏನಂದ್ರು ಗೊತ್ರಾ?

Point Blur Nov202023 144601 Point Blur Nov202023 144601

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ( Loksabha constituency) ಹಾಲಿ ಸಂಸದ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಸ್ಪರ್ಧೆ ಮಾಡಬೇಕು ಎಂಬ ಕೂಗು ಬಿಜೆಪಿ ವಲಯದಲ್ಲಿ ಕೇಳಿಬರುತಿದ್ದರೂ ,ಕೋಣನ ಮುಂದೆ ಕಿನ್ನರಿ ಬಾರಿಸಿದರು ಎಂಬುವಂತೆ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಸ್ಪರ್ಧೆ ಮಾಡುವುದಿಲ್ಲ ಎಂದು ತಟಸ್ಥ ವಾಗಿದ್ದಾರೆ. ಒಂದುವೇಳೆ ಬಿಜೆಪಿ ಯಿಂದ ಅನಂತಕುಮಾರ್ ಹೆಗಡೆ ( Ananthakumar hegde) ಸ್ಪರ್ಧಿಸದಿದ್ರೆ ತಮಗೆ ಲೋಕಸಭಾ ಟಿಕೆಟ್ ನೀಡಿ ( Loksabha ticket) ಎಂದು ಬಿಜೆಪಿಯ ಹಳಿಯಾಳದ ಮಾಜಿ ಶಾಸಕ ಸುನಿಲ್ ಹೆಗಡೆ, ( farmer MLA sunil hegde) ಶಿರಸಿ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ( farmer MLA vishweshwara Hegde Kageri) ,ಮಾಜಿ ಶಾಸಕಿ ರೂಪಾಲಿ ನಾಯ್ಕ ( farmer MLA Rupali Naik) ರವರು ಹೈಕಮಾಂಡ್ ನ ಗಮನಕ್ಕೆ ತಂದಿದ್ದಾರೆ.

TextMaster 11 20 02.39.36

ಆದ್ರೆ ಬಿಜೆಪಿ ಜೆಡಿಎಸ್ ಜೊತೆ ಚುನಾವಣೆ ಮೈತ್ರಿ ಮಾಡಿಕೊಂಡಿದ್ದರಿಂದ ಇದೀಗ ಜೆಡಿಎಸ್ ನ ಮಾಜಿ ಸಚಿವ ಆನಂದ್ ಆಸ್ನೋಟಿಕರ್ , ಕುಮಟಾದ ಸೂರಜ್ ಸೋನಿ ತಾವು ಕೂಡ ಆಕಾಂಕ್ಷಿಗಳು ಎಂದು ಹೇಳಿಕೊಂಡಿದ್ದಾರೆ. ಇಂದು ಕಾರವಾರದಲ್ಲಿ ಸೂರಜ್ ನಾಯ್ಕ ಸೋನಿ ಮಾಧ್ಯಮಗಳ ಜೊತೆ ಮಾತನಾಡಿ ತಾನೂ ಕೂಡ ಜೆಡಿಎಸ್ ಗೆ ಟಿಕೆಟ್ ಕೊಟ್ಟರೇ ಆಕಾಂಕ್ಷಿಯಾಗಿದ್ದೇನೆ , ನಮ್ಮ ನಾಮದಾರಿ ಸಮಾಜ ಜಿಲ್ಲೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ, ಜೊತೆಗೆ ನನಗೂ ಜಿಲ್ಲೆಯನ್ನು ಸುತ್ತಿ ದ ಅನುಭವ ವಿದೆ ಹೀಗಾಗಿ ತನಗೆ ಪಕ್ಷ ಅವಕಾಶ ಕೊಟ್ಟರೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.

Advertisement

ಇನ್ನು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಕೂಡ ಲೋಕ ಸಭಾ ಚುನಾವಣೆಗೆ ಅನಂತಕುಮಾರ್ ಹೆಗಡೆ ಸ್ಪರ್ದಿಸದಿದ್ರೆ ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಸದ್ಯ ಬಿಜೆಪಿ ಗೆಲ್ಲುವ ಕುದುರೆ ಎಂಬುದು ಬಹುತೇಕ ಮುಖಂಡರಿಗೆ ತಿಳಿದ ವಿಷಯ ಹೀಗಾಗಿ ಬಿಹೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆಯುತಿದ್ದರೇ,ಜೆಡಿಎಸ್ ನಲ್ಲೂ ಸಹ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ.

ಸಧ್ಯ ಬಿಜೆಪಿಯಲ್ಲಿ ಯಾರನ್ನು ನಿಲ್ಲಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ , ಹೋರಾಟ ಗಾರ ಚಕ್ರವರ್ತಿ ಸೂಲಿಬೆಲೆ, ಪತ್ರಕರ್ತ ರ ಹೆಸರು ಸಹ ಬಿಜೆಪಿ ಪಟ್ಟಿಯಲ್ಲಿ ತಳಕುಹಾಕಿಕೊಂಡಿದೆ.ಆದರೇ ಇದೀಗ ಜೆಡಿಎಸ್ ನಾಯಕರು ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು ಲೋಕಸಭಾ ಕಣ ಇದೀಗ ರಂಗು ಪಡೆಯುತ್ತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement