BREAKING NEWS
Search

Haliyala:ಬುರ್ಖಾ ಧರಿಸಿ ಬಂದ್ರು 22 ಲಕ್ಷಕ್ಕೂ ಹೆಚ್ಚು ಬಂಗಾರ ಬಾಚಿ ಹೋದರು!

54

ಕಾರವಾರ :-ಜ್ಯುವೆಲರ್ಸ್ (Jewellers )ಮಳಿಗೆಗೆ ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದ‌ ಮಹಿಳೆಯರ ಗ್ಯಾಂಗ್‌ 22 ಲಕ್ಷಕ್ಕೂ ಹೆಚ್ಚು ಮೊತ್ತದ ಚಿನ್ನ (gold) ಕದ್ದು ಪರಾರಿಯಾದ ಘಟನ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ (haliyala) ನಡೆದಿದೆ.

ಹಳಿಯಾಳದ ಶ್ರೀ ಪೇಟೆ ಬಸವೇಶ್ವರ ಅಂಗಡಿ ಸಂಕೀರ್ಣದಲ್ಲಿರುವ ಪ್ರಕಾಶ ಗಡಾದ ಅವರ ಮಾಲಕತ್ವದ ಜ್ಯೋತಿ ಜ್ಯುವೆಲ್ಲರ್ಸ್‌ನಲ್ಲಿ ಕಳ್ಳತನವಾಗಿದ್ದು,ಬಂಗಾರ ಮತ್ತು ಬೆಳ್ಳಿಯ ಉಂಗುರ ಖರೀದಿಸುವ ನೆಪದಲ್ಲಿ ಬುರ್ಖಾ ಧರಿಸಿದ 3 ಮಹಿಳೆಯರು ಹಾಗೂ ಮಾಸ್ಕ್ ಧರಿಸಿದ ಒಬ್ಬ ಯುವಕ ಆಗಮಿಸಿದ್ದರು.

ಬಂಗಾರದ ಆಭರಣ ಮತ್ತು ಬೆಳ್ಳಿಯ ಸಾಮಗ್ರಿ ಖರೀದಿಸುವಂತೆ ನಟಿಸಿ ಅಂಗಡಿ ಮಾಲಕನ ಗಮನ ಬೇರೆಡೆಗೆ ಸೆಳೆದು ಕೃತ್ಯ ವೆಸಗಿದ್ದಾರೆ.

ಅಂಗಡಿಯ ಕೌಂಟರ್‌ನಲ್ಲಿದ್ದ 366 ಗ್ರಾಂ. ಚಿನ್ನಾಭರಣ ಹಾಗೂ ಗ್ರಾಹಕರಿಂದ ದುರಸ್ತಿಗಾಗಿ ಬಂದಿದ್ದ 50 ಗ್ರಾಂ ಚಿನ್ನ ಸೇರಿದಂತೆ ಒಟ್ಟು 416 ಗ್ರಾಂ. ಚಿನ್ನ ಕಳ್ಳತನವಾಗಿದೆ.

ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರಿಯಾಗಿದೆ.ಘಟನೆ ಸಂಬಂಧ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!