ಸಂಘ ಪರಿವಾರಕ್ಕೆ ಸಾಲಕೊಟ್ಟ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಳಿ ಇರುವ ಆಸ್ತಿ ಎಷ್ಟು?

260

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಬಿಜೆಪಿ (bjp)ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಇಂದು ನಾಮಪತ್ರ ( nomination) ಸಲ್ಲಿಕೆ ಮಾಡಿದರು.

ಬಿಜೆಪಿಯಿಂದ ಆರು ಬಾರಿ ಶಾಸಕರಾದ ಕಾಗೇರಿ ಶಿಕ್ಷಣ ಸಚಿವರಾಗಿ ವಿಧಾನಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದು.

2023 ರ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ರವರ ಎದುರು ಸೋಲು ಕಂಡರು.
ನಂತರ ಇದೇ ಮೊದಲಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತಿದ್ದಾರೆ.

ಒಟ್ಟೂ ಆಸ್ತಿ: 16.76 ಕೋಟಿ ರೂ.
ಪತ್ನಿ ಆಸ್ತಿ: 79.32 ಲಕ್ಷ ರೂ.
ಸ್ಥಿರಾಸ್ತಿ: 6.69 ಕೋಟಿ
ಚರಾಸ್ತಿ: 10.24 ಕೋಟಿ.

ಶಿಕ್ಷಣ- Bcom
ಪತ್ನಿ ಭಾರತಿ ಹೆಗಡೆ ಅವರಿಗಿಂತ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಹೆಚ್ಚಿನ ಚಿನ್ನ, ಬೆಳ್ಳಿ ಹೊಂದಿದ್ದಾರೆ.

ಪತ್ನಿ ಬಳಿ 1.100 ಕೆ.ಜಿ. ಚಿನ್ನ ಇದೆ. ಕಾಗೇರಿ ಅವರು 1.250 ಕೆ.ಜಿ. ಚಿನ್ನ, 3.500 ಕೆ.ಜಿ. ಬೆಳ್ಳಿ ಹೊಂದಿದ್ದಾರೆ. ಇವರ ಅವಿಭಕ್ತ ಕುಟುಂಬವು ಒಟ್ಟೂ 3.48 ಕೋಟಿ ರೂ. ಚರಾಸ್ತಿ ಮತ್ತು 2.05 ಕೋಟಿ ರೂ. ಸ್ಥಿರಾಸ್ತಿ ಹೊಂದಿದೆ. ಪತ್ನಿ, ಮಕ್ಕಳ ಹೆಸರಿನಲ್ಲಿ ಯಾವುದೇ ಜಮೀನು ಇಲ್ಲ. ಆದರೇ ಮಗಳು ರಾಜಲಕ್ಷ್ಮಿ ಹೆಸರಲ್ಲಿ 12.54 ಲಕ್ಷ, ಶ್ರೀಲಕ್ಷ್ಮಿ ಹೆಸರಲ್ಲಿ 4.90 ಲಕ್ಷ ರು ಮೌಲ್ಯದ ಚರಾಸ್ಥಿ ಹೊಂದಿದ್ದಾರೆ.

ಕಾಗೇರಿಯವರು ಕಳವೆಯಲ್ಲಿ ಹೋಮ್ ಸ್ಟೇ ನಡೆಸುತಿದ್ದಾರೆ.ಶಿರಸಿ ಪಟ್ಟಣದಲ್ಲಿ ಮನೆ ಜಾಗ ಮಾಡಿದ್ದು ,ಬೆಂಗಳೂರಿನಲ್ಲಿ BDA ಸೈಟ್ ನಲ್ಲಿ ಕೋಟಿ ಬೆಲೆಬಾಳುವ ಮನೆ ನಿರ್ಮಿಸಿದ್ದಾರೆ.

ಇನ್ನು ಕಾಗೇರಿ ಬಳಿ 1 ಕಾರು(car) ಒಂದು ಸ್ಕೂಟರ್ ಮಾತ್ರ ಇದೆ. ಹಿಂದಿನ ವಿಧಾನಸಭೆ (2023) ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಡವಿಟ್ ಮತ್ತು ಇಂದು ಲೋಕಸಭಾ ಚುನಾವಣೆಗೆ ಸಲ್ಲಿಸಿದ ಅಫಡವಿಟ್ ತುಲನ ಮಾಡಿದರೇ 10 ತಿಂಗಳಲ್ಲಿ ಅವರ ಆಸ್ತಿಯ ಮೌಲ್ಯ 46 ಲಕ್ಷ ಹೆಚ್ಚಳವಾಗಿದೆ.

ಇದನ್ನೂ ಓದಿ:-sirsi:ರಸ್ತೆ ಬದಿಯಲ್ಲಿ ವಿಶ್ರಾಂತಿ ಪಡೆಯುತಿದ್ದ ಕಾರ್ಮಿಕರ ಮೇಲೆ ಹರಿದ ಕಾರು| ಇದು ಜನ ಗಂಭೀರ

ಸಂಘ ಪರಿವಾರದ ದೀನದಯಾಳ ಟ್ರಸ್ಟ್ಗೆ 24.50 ಲಕ್ಷ ರೂ. ಕೈ ಸಾಲ ಕೊಟ್ಟಿದ್ದಾರೆ. ಕಾಗೇರಿ ರವರದ್ದು ಯಾವುದೇ ಸಾಲಗಳಿಲ್ಲ ಎಂದು ಅವರು ತಾವು ನೀಡಿದ ಅಪಡವಿಟ್ ನಲ್ಲಿ ಮಾಹಿತಿ ನೀಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!