BREAKING NEWS
Search
Holi festival

Holi | ರಸ್ತೆಯಲ್ಲಿ ಹೋಗುವವರಿಗೆ ಬಣ್ಣ ಎರಚುತ್ತೀರಾ ಹಾಗಿದ್ರೆ ಈ ಸುದ್ದಿ ಓದಿ!

66

ಕಾರವಾರ :- ರಂಗಿನ ಹಬ್ಬ ಎಂದೇ ಪ್ರಸಿದ್ಧವಾಗಿರುವ ಹೋಳಿ (Holi) ಹಬ್ಬ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ನಡೆಯಲಿದೆ. ಜಿಲ್ಲೆಯಲ್ಲಿ ಶಿರಸಿ ,ಕಾರವಾರ,ಕುಮಟಾ, ಹೊನ್ನಾವರ ಸೇರಿದಂತೆ ಪ್ರಮುಖ ತಾಲೂಕುಗಳಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಇನ್ನು ಹೋಳಿ ಹಬ್ಬದಂದು ಮೋಜು ಮಾಸ್ತಿಗಾಗಿ ರಸ್ತೆಯಲ್ಲಿ ಹೋಗುವವರ ಮೇಲೆ ,ಮಕ್ಕಳ ಮೇಲೆ ಬಣ್ಣ ಎರಚಿ ಕೀಟಲೆ ಮಾಡುವ ಅನೇಕರಿದ್ದಾರೆ. ಆದ್ರೆ ಇದೀಗ ಉತ್ತರ ಕನ್ನಡ ಜಿಲ್ಲಾಡಳಿತ ಬಣ್ಣ ಎರಚುವುದನ್ನು ನಿರ್ಬಂಧಿಸಿದ್ದು ಈ ಕುರಿತು ಸುತ್ರೋಲೆ ಹೊರಡಿಸಿದೆ.

ಹಾಗಿದ್ರೆ ಏನು ಈ ಸುತ್ತೋಲೆ ? ಹಬ್ಬಕ್ಕೂ ಅಡ್ಡಿಯೇ ಅಂತೀರಾ ಖಂಡಿತಾ ಇಲ್ಲ.

ಎಸ್‌.ಎಸ್‌.ಎಲ್‌.ಸಿ (S.S.L.C exam )ಮುಖ್ಯ ಪರೀಕ್ಷೆಗಳು ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ ಜಿಲ್ಲೆಯ 73 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಹಾಗೂ ಮಾರ್ಚ್ 25 ರಂದು ಜಿಲ್ಲೆಯಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ಹೋಳಿ ಹಬ್ಬದ ಪ್ರಯುಕ್ತ ಬಣ್ಣ ಹಚ್ಚುವುದು, ಬಣ್ಣದ ನೀರೆರುಚುವುದು, ಮಾಡಲಾಗುತ್ತಿದ್ದು, ಈ ವರ್ಷ ಹೋಳಿ ಹಬ್ಬ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಒಂದೇ ದಿನ ಬಂದಿರುವುದರಿಂದ ಪರೀಕ್ಷೆಗೆ ಹಾಜರಾಗುತ್ತಿರುವ ಪರೀಕ್ಷಾರ್ಥಿ ಹಾಗೂ ಶಿಕ್ಷಕರು, ಮೇಲ್ವಿಚಾರಕರ ಮೇಲೆ ಬಣ್ಣ ಲೇಪಿಸುವುದರಿಂದ ಪರೀಕ್ಷೆ ಬರೆಯಲು ಮಕ್ಕಳಿಗೆ ತೊಂದರೆಯಾಗುವ ಸಂಭವ ಹೆಚ್ಚಿರುತ್ತದೆ.

ಹೀಗಾಗಿ ಶಾಲಾ (school) ಮಕ್ಕಳ ಸುರಕ್ಷತೆ ಹಿತದೃಷ್ಠಿಯಿಂದ ಮಾರ್ಚ್ 25 ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೆರಳುವ ಮಕ್ಕಳು, ಪಾಲಕರು/ಪೋಷಕರು, ಶಿಕ್ಷಕರು (teacher) ಮತ್ತು ಮೇಲ್ವಿಚಾರಕರ ಮೈ ಮೇಲೆ ರಾಸಾಯನಿಕ ದ್ರಾವಣದಿಂದ ಕೂಡಿದ ಬಣ್ಣ ಎರಚುವುದು/ ವಿವಿಧ ಬಣ್ಣ/ ಬಣ್ಣದ ನೀರು ಎರಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಒಂದು ವೇಳೆ ಇಂತಹ ಘಟನೆಗಳು ಜರುಗಿದ್ದಲ್ಲಿ ಅಂತವರ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!