Three notorious thieves arrested by sirsi police

sirsi|ಮೂರುಜನ ಕುಖ್ಯಾತ ಕಳ್ಳರ ಬಂಧಿಸಿದ ಶಿರಸಿ ಪೊಲೀಸರು!ಏನಿತ್ತು ಗೊತ್ತಾ ಅವರ ಬಳಿ!

176

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಠಾಣೆ ಪೊಲೀಸರು ವಿವಿಧ ಜಿಲ್ಲೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತಿದ್ದ ಭಟ್ಕಳದ (Bhatkal) ಮೂವರು ಆರೋಪಿಗಳನ್ನು ಕಳ್ಳತನಕ್ಕೆ ಬಳಸಿದ ವಸ್ತುಗಳ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ಭಟ್ಕಳ ಮೂಲದ ಮೊಹ್ಮದ್ ರೈಯಾಕ್ (24), ಮೊಹ್ಮದ್ ತಬ್ಲಿಷ್ (25),ಅಬ್ರಾರ್ ಶೇಖ್ (21) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಶಿರಸಿಯಲ್ಲಿ ಮೇ 3 ರಂದು ರಾತ್ರಿ ನಗರದ ಕುಮಟಾ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಕಛೇರಿಯ ಹಾಗೂ ಕರಿಗುಂಡಿ ರಸ್ತೆಯಲ್ಲಿರುವ ಕ್ವಾಲಿಟಿ ವೈನ್ಸ್ ನ ಬೀಗ ಮುರಿದು
ಕ್ಯಾಷ್ ಕೌಂಟರಗಳಲ್ಲಿ ಇಟ್ಟಿದ್ದ ಒಟ್ಟು 1,58,000/- ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಜಾಡು ಹಿಡಿದ ಪೊಲೀಸರು ಆರೋಪಿತರಿಂದ 2000/- ರೂ ನಗದು ಹಣ,ಕೃತ್ಯಕ್ಕೆ ಬಳಸಲಾದ ಸ್ವಿಪ್ಟ್ ಕಾರ್ ಅಂದಾಜು ಮೌಲ್ಯ- 5ಲಕ್ಷ ರೂ ಹಾಗೂ ಗ್ಯಾಸ್ ಕಟರ್,ಡ್ರಿಲ್ಲಿಂಗ್ ಮಶೀನ್,ರಾಡ್,ಸ್ಕೂ ಡ್ರೈವರ್ ,ಮಾಸ್ಕ,ಹ್ಯಾಂಡ್ ಗ್ಲೌಸ್,ಕ್ಯಾಪ್ ಇತ್ಯಾದಿಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ.

ಇದಲ್ಲದೇ ಶಿರಸಿ ಮಾರುಕಟ್ಟೆ ಠಾಣೆಯ ಒಂದು,ಮಣಿಪಾಲ್ ಠಾಣೆಯ ಒಂದು ಸೇರಿ ಒಟ್ಟು 3 ಕಳ್ಳತನ ಪ್ರಕರಣಗಳನ್ನು ಸಹ ಪತ್ತೆಮಾಡಲಾಗಿದೆ

ಆರೋಪಿತರು ಕುಖ್ಯಾತ ಕಳ್ಳರಾಗಿದ್ದು ಹಿರಿಯಡ್ಕ,ಉಡುಪಿ,ಮಣಿಪಾಲ್ ಬ್ರಹ್ಮಾವರ,ಭಟ್ಕಳ ಮುಂತಾದ ಕಡೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.

ಕಾರಲ್ಲೇ ಸ್ಕೆಚ್ !

ಕಳ್ಳತನಕ್ಕೆ ಕಾರನ್ನ ಬಳಸುತಿದ್ದ ಈ ಮೂವರು ಮಳಿಗೆಗಳ ಬೀಗ ಮುರಿಯಲು ಗ್ಯಾಸ್ ಕಟರ್ ಇಟ್ಟುಕೊಳ್ಳುತಿದ್ದರು. ಇನ್ನು ಕೈ ಗುರುತು ಹಾಗೂ ಮುಖ ಕಾಣದಂತೆ ಮಾಡಲು ಕೈ ಗ್ಲೋಸ್ ( glos) ಬಳಸುವ ಜೊತೆ ಮುಖಕ್ಕೆ ಮಾಸ್ಕ ಸಹ ಬಳಕೆ ಮಾಡುತಿದ್ದರು. ಸದಾ ಎಲ್ಲಿಗೆ ತೆರಳಿದರೂ ಅವರ ವಾಹನದಲ್ಲಿ ಇದನ್ನು ಇಟ್ಟುಕೊಳ್ಳುತಿದ್ದು ಇದೀಗ ಅವರು ಬಳಸುತಿದ್ದ ವಸ್ತುಗಳೇ ಅವರ ಬಂಧನಕ್ಕೆ ಕಾರಣವಾಗಿದೆ.

ಸದರಿ ಪ್ರಕರಣದಲ್ಲಿ ಶಿರಸಿ ನಗರ ಠಾಣೆ ಸಿಪಿಐ
ಶಶಿಕಾಂತ ವರ್ಮಾ ನೇತೃತ್ವದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ.ಬಿ ,ಪಿಎಸ್ಐ ಜ್ಞಾನಶೇಖರ್,ಮಾರುಕಟ್ಟೆ ಠಾಣೆ ಪಿಎಸ್ಐ ರತ್ನಾ ಕುರಿ ಹಾಗೂ ಸಿಬ್ಬಂದಿಗಳಾದ ಎಎಸ್ಐಗಳಾದ ನೆಲ್ಸನ್ ಮೆಂಥಾರೋ, ಅಶೋಕ ರಾಥೋಡ್, ಹೊನ್ನಪ್ಪ ಅಗೇರ, ಪ್ರಶಾಂತ ಪವಾಸ್ಕರ್, ಹನುಮಂತ ಕಬಾಡಿ, ಮಹಾಂತೇಶ ಬಾರಿಕೇರ,ಮಧುಕರ ಗಾಂವಕರ್,ಸದ್ದಾಂ ಹುಸೇನ್,ಮಂಜುನಾಥ ಕಾಶಿಕೋವಿ,ಹನುಮಂತ ಮಾಕಾಪುರ,ರಾಮಯ್ಯ ಪೂಜಾರಿ,ಹನುಮಂತ ಮಾಕಾಪುರ,ಪ್ರವಿಣ್,ಎನ್, ಮತ್ತು ತಾಂತ್ರಿಕ ತಜ್ಞ ಸಿಬ್ಬಂದಿಯ ವರನ್ನೊಳಗೊಂಡ ತಂಡ ಭಾಗವಹಿಸಿತ್ತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!