ಮುಂಡಗೋಡಿನಲ್ಲಿ ಸಿಗುವ ಜಂಗಲ್ ಜಿಲೇಬಿ ಹುಳಸೆ ಬಗ್ಗೆ ಗೊತ್ತಾ! ನೀವು ಒಮ್ಮೆ ಟ್ರಯ್ ಮಾಡಿ

Jangal jelebi fruit health benefit Jangal jelebi fruit health benefit
GILANI super market karwar KSRTC bus stand near Karwar
Gilani super market karwar

Healthy fruit tips:- ಉತ್ತರ ಕನ್ನಡ ಜಿಲ್ಲೆ ನಿತ್ಯ ಹರಿದ್ವರ್ಣ ಕಾಡುಗಳನ್ನ ಹೊಂದಿದ್ದು ಅನೇಕ ವಿಶಿಷ್ಟ ಔಷಧೀಯ ಸಸ್ಯಗಳ (medicinal plant )ಆಗರವಾಗಿದೆ. ಜೊತೆಗೆ ನೂರಾರು ಜಾತಿಯ ಕಾಡಿನಲ್ಲಿ ಸಿಗುವ ಹಣ್ಣುಗಳು ಸಹ ಇದ್ದು ಬಹುತೇಕರಿಗೆ ಅದರ ಬಗ್ಗೆ ತಿಳುವಳಿಕೆ ಕಡಿಮೆ. ಹೀಗಾಗಿ ಜಿಲ್ಲೆಯ ಬಯಲುಸೀಮೆ ಪ್ರದೇಶದಲ್ಲಿ ಸಿಗುವ ಪರಿಚಿತ ಹಣ್ಣುಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಮುಂಡಗೋಡಿನ ನಗರದಿಂದ ಟಿಬೇಟಿಯನ್ ಕಾಲೋನಿ ಭಾಗಕ್ಕೆ ಹೋಗುವ ಭಾಗದಲ್ಲಿ ಕಣ್ಣಾಡಿಸಿದರೇ ಬೇಲಿ ಗೂಟದಂತೆ ರಸ್ತೆಯ ಪಕ್ಕದಲ್ಲಿ ನಿಂತಿರುವ ಚಿಕ್ಕ ಪೊದೆಯಾಕಾರದ ಮರವೇ ಜಂಗಲ್ ಚಿಲೇಬಿ (jangal jelebi) ಹುಳಸೆ ಹಣ್ಣಿನ ಮರ. ಇದನ್ನು ವೈಜ್ಞಾನಿಕವಾಗಿ Pithecellobium dulce ಎಂದು ಕರೆಯುತ್ತಾರೆ. ಈ ಹಣ್ಣು ಜೀಲೇಬಿಯಾಕಾರವಾಗಿರುವುದರಿಂದ ಹಾಗೂ ಹುಳಸೆಯನ್ನು ಹೋಲುವುದರಿಂದ ಈ ಹೆಸರು ಬಂದಿದೆ. ಹೆಚ್ಚಾಗಿ ತಮಿಳುನಾಡಿನಲ್ಲಿ ಈ ಹಣ್ಣು ಹೇರಳವಾಗಿ ಸಿಗುತ್ತದೆ.ಭಾರತದ ಇತರೆ ಪ್ರದೇಶದಲ್ಲಿ ಸಹ ಈ ಹಣ್ಣು ಸಿಗುತ್ತದೆ.

Advertisement

ಇನ್ನು ಇವುಗಳಿಗೆ
ತಮಿಳಿನಲ್ಲಿ “ಕೊಡುಕ್ಕ ಪುಲಿ”, ಕನ್ನಡದಲ್ಲಿ “ಸೀಮಾ ಹುಣಸೆ” ಎಂದು ಉಲ್ಲೇಖಿಸಲಾಗುತ್ತದೆ, ಆದರೆ ಇತರ ಇಂಗ್ಲಿಷ್ ಹೆಸರುಗಳಲ್ಲಿ ಮನಿಲಾ ಹುಣಸೆಹಣ್ಣು, ಮದ್ರಾಸ್ ಮುಳ್ಳು, ಮಂಕಿ ಪಾಡ್ ಮತ್ತು ಕ್ಯಾಮಾಚಿಲೆ ಎಂದು ಸಹ ಕರೆಯುತ್ತಾರೆ.

ಹೇಗಿದೆ ಹಣ್ಣು? ಏನು ಉಪಯೋಗ?

ಜಂಗಲ್ ಜಿಲೇಬಿ ಬೀಜಗಳು ಗಮನಾರ್ಹ ಪ್ರಮಾಣದ ಕ್ಯಾಲೋರಿಗಳು, ಪ್ರೋಟೀನ್‌ಗಳು, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಆಹಾರದ ಫೈಬರ್‌ಗಳನ್ನು ಹೊಂದಿವೆ, ದೇಹಕ್ಕೆ ಉತ್ತಮ ಶಕ್ತಿ ಹಸಿವು ನಿಯಂತ್ರಣ ಮತ್ತು ದೇಹದಲ್ಲಿನ ಆಹಾರಗಳ ವರ್ಧಿತ ಜೀರ್ಣಕ್ರಿಯೆಗೆ ಬಹು ಉಪಯೋಗ.

ಈ ಹಣ್ಣು ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ಕಬ್ಬಿಣದ ಪ್ರಮುಖ ಖನಿಜಗಳಲ್ಲಿ ಸಮೃದ್ಧವಾಗಿವೆ, ಜೊತೆಗೆ ವಿಟಮಿನ್ ಸಿ ಮತ್ತು ಬಿ ಜೀವಸತ್ವಗಳ ಅಪಾರ ಪ್ರಮಾಣದಲ್ಲಿ ಹೊಂದಿರುತ್ತವೆ.

ದೇಹದ ಶಕ್ತಿ ವೃದ್ದಿಸುವ ಜೊತೆ ,ಹಸಿವು ನಿವಾರಣೆ, ರೋಗ ನಿರೋಧಕ ಶಕ್ತಿ, ಮೂಳೆಗಳ ಬಲಿಷ್ಟತೆಗೆ ,ವೀರ್ಯ ವೃದ್ಧಿಗೆ , ದೇಹದ ತೂಕ ಕಡಿಮೆ ಮಾಡಲು ,ಕೊಲೆಸ್ಟ್ರಾಲ್ ಕಡಿಮೆ ಮಾಡಲು , ಮುಟ್ಟಿನ ಸಮಸ್ಯೆಗಳ ನಿವಾರಣೆಗೆ ಬಹು ಉಪಯೋಗ. ಆದರೇ ಗರ್ಭಿಣಿ ಸ್ತ್ರೀಯರು , ಮಗುವಿಗೆ ಹಾಲುಣಿಸುವ ಸ್ತ್ರೀಯರಿಗೆ ಈ ಹಣ್ಣು ಉಪಯೋಗಿಸಬಾರದು.

ಇನ್ನು ಅತೀಯಾದ ಉಪಯೋಗ ಕೂಡ ಒಳ್ಳೆಯದಲ್ಲ ಆದರೂ ಈ ಹಣ್ಣು ಸಾಕಷ್ಟು ಪೋಷಕಾಂಶ ಹೊಂದಿದ್ದು ಹುಳಿ ಸಿಹಿಯ ಅಂಶ ಹೊಂದಿದ್ದು ಒಂದೊಮ್ಮೆ ಈ ಹಣ್ಣು ಸವಿಯಲು ಸಿಕ್ಕರೇ ತಪ್ಪದೇ ರುಚಿ ನೋಡಿ.

1000594993
1000594994
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement