Sirsi| ವಾರ ಕಳೆದರೂ ನಗರದಲ್ಲಿ ಕುಡಿಯಲು ನೀರಿಲ್ಲ! ಎಲ್ಲಾ ಕಾಲಿ ಕಾಲಿ!

Sirsi news water crisis Sirsi news water crisis
GILANI super market karwar KSRTC bus stand near Karwar
Gilani super market karwar

Sirsi news:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ( drinking water problem) ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಕಾರವಾರ ,ಅಂಕೋಲಾ ಭಾಗದಲ್ಲಿ ಕಳೆದ ಒಂದು ತಿಂಗಳಿಂದ ನೀರಿನ ಸಮಸ್ಯೆ ತಾರಕಕ್ಕೆ ಏರಿದರೇ ಮಲೆನಾಡು ಭಾಗದ ಶಿರಸಿ (sirsi) ನಗರ ಭಾಗದಲ್ಲಿ ವಾರಕ್ಕೆ ಒಂದು ದಿನವೂ ನೀರು ಸಿಗದ ಪರಿಸ್ಥಿತಿ ಉದ್ಭವವಾಗಿದೆ.

ಕಳೆದ ಒಂದು ವಾರದಿಂದ ನಗರಸಭೆಯಿಂದ ಪೂರೈಕೆಯಾಗುತಿದ್ದ ನೀರು ಸ್ಥಗಿತವಾಗಿದೆ. ನಗರದ ಗಣೇಶ ನಗರದಲ್ಲಿ ಒಂದು ವಾರದಿಂದ ನೀರು ಸಿಗದೇ ಜನ ಸಂಕಷ್ಟ ಅನುಭವಿಸುವ ಸ್ಥಿತಿ ನಿರಗಮಾಣವಾಗಿದೆ. ಇನ್ನು ಇತರೆ ಭಾಗದಲ್ಲೂ ಸಹ ಇದಕ್ಕಿಂತ ಬಿನ್ನವಾಗಿಲ್ಲ. ಹಲವು ವಾರ್ಡ ಗಳಲ್ಲಿ ಮೂರು ದಿನಕ್ಕೆ ಒಮ್ಮೆ ನಗರಸಭೆಯಿಂದ ಬರುತಿದ್ದ ನೀರು ಬಾರದೇ ,ಇತ್ತ ಟ್ಯಾಂಕರ್ ನೀರು ಸಹ ಸಿಗದ ಪರಿಸ್ಥಿತಿ ಉದ್ಭವಿಸಿದೆ.

Advertisement

1000594993
1000594994

ಇನ್ನು ,ನಗರದ ಕೊಳವೆ ಬಾವಿಗಳು ,ಬೋರ್ ವೆಲ್ ಸಹ ನೀರು ತಳ ಮುಟ್ಟಿದೆ. ನಗರಸಭೆಯ 13 ಕೊಳವೆಬಾವಿಗಳು ದುರಸ್ತಿ ಹಂತದಲ್ಲಿದೆ. ಶೀಘ್ರವಾಗಿ ಯಾವ ಭಾಗದಲ್ಲಿ ನೀರು ಸಮಸ್ಯೆ ಇದೆಯೋ ಆ ಭಾಗಗಳಿಗೆ ಇನ್ನೆರೆಡು ದಿನದಲ್ಲಿ ನೀರು ಪೂರೈಕೆ ಮಾಡುತ್ತೇವೆ ಎನ್ನುತ್ತಾರೆ ನಗರಸಭೆ ಆಯುಕ್ತ ಕಾಂತರಾಜ್. ಆದ್ರೆ ಇನ್ನೆರೆಡು ದಿನದಲ್ಲಿ ಮಳೆಯಾಗದಿದ್ದಲ್ಲಿ ಶಿರಸಿ ಭಾಗದಲ್ಲಿ ಕುಡಿಯುವ ನೀರಿನ ಹಾಹಾಕಾರ ಮತ್ತಷ್ಟು ಹೆಚ್ಚಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement