Goa liquor transfer karwar majali

Karwar|ತನಿಖಾ ಠಾಣೆ ಇದ್ದರೂ ಗೋವಾ ಮದ್ಯ ಸಾಗಾಟಕ್ಕಿಲ್ಲ ನಿರ್ಬಂಧ!

165

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ (Majali) ತನಿಖಾ ಠಾಣೆಯಲ್ಲಿ ಗೋವಾ(goa) ದಿಂದ ಕಾರವಾರದ ಕಡೆ ತೆರಳುವ ವಾಹನಗಳಲ್ಲಿ ಮದ್ಯ ಸಾಗಾಟ ಯಾವುದೇ ಭಯವುಲ್ಲದೇ ಸಾಗಾಟ ಮಾಡಲಾಗುತ್ತಿದ್ದು ಇದಕ್ಕೆ ತನಿಖಾ ಠಾಣೆಯಲ್ಲಿ ನಿಯೋಜನೆಗೊಂಡ ಚುನಾವಣಾಧಿಕಾರುಗಳು, ಅಬಕಾರಿ ಸಿಬ್ಬಂದಿಗಳೇ ಸಾತ್ ನೀಡುತಿದ್ದಾರೆ.

ಇದನ್ನೂ ಓದಿ:-ಭಟ್ಕಳದಲ್ಲಿ ಶಿಲಾಯುಗದ ಬಂಡೆಚಿತ್ರ ನೆಲಶೋಧ! ಏನಿದು ವಿವರ ನೋಡಿ.

ಗೋವಕ್ಕೆ ತೆರಳಿದ ಪ್ರವಾಸಿಗರು ಮರಳಿ ಬರುವ ಮಾರ್ಗದಲ್ಲಿ ಕಮ್ಮಿ ಬೆಲೆಗೆ ಸಿಗುವ ಗೋವಾ ಮದ್ಯವನ್ನು ತರುತಿದ್ದು, ತಪಾಸಣೆ ವೇಳೆ ಸಿಗುವ ಮದ್ಯಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವ ಬದಲು ಅವರ ಬಳಿ ದುಬಾರಿ ಮದ್ಯಗಳನ್ನು ತಮ್ಮ ಬಳಿ ಇಟ್ಟುಕೊಂಡು ಕಳುಹಿಸುತಿದ್ದಾರೆ.

ನಿನ್ನೆ ದಿನ ಪ್ರವಾಸಿಗರ ಬಳಿ ತನಿಖೆ ವೇಳೆ ಸಿಕ್ಕ ಮದ್ಯವನ್ನು ಡೀಲ್ ಕುದುರಿಸುವ ವೇಳೆ ಮಾಧ್ಯಮಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದು ಈ ವೇಳೆ ಮಾಧ್ಯಮಗಳು ಚಿತ್ರೀಕರಣ ಮಾಡುವ ವೇಳೆ ಚುನಾವಣೆಗೆ ನಿಯೋಜನೆ ಗೊಂಡಿದ್ದ ಕೃಷಿ ಇಲಾಖೆಯ ಅಧಿಕಾರಿ ಅಡ್ಡಪಡಿಸಿದ್ದಾರೆ. ಇದಲ್ಲದೇ ಅಡ್ಡಪಡಿಸಿದ ನಂತರ ಹಿಡಿದ ಮದ್ಯದ ಸಮೇತ ವಾಹನವನ್ನು ಪ್ರಕರಣ ದಾಖಲಿಸದೇ ಬಿಟ್ಟು ಕಳುಹಿಸಿದ್ದಾರೆ.

ಇನ್ನು ಪ್ರತಿ ದಿನ ಗೋವಾದಿಂದ ಕಾರವಾರದ ಕಡೆ ನೂರಾರು ಪ್ರವಾಸಿ ವಾಹನಗಳು ತೆರಳುತ್ತವೆ. ಹಲವು ವಾಹನಗಳಲ್ಲಿ ಗೋವಾದಲ್ಲಿ ಸಿಗುವ ದುಬಾರಿ ಮದ್ಯ ಗಳನ್ನು ಕರೀದಿಸಿ ಚಕ್ ಪೋಸ್ಟ್ ನಲ್ಲಿ ಕಮ್ಮಿ ಬೆಲೆಯ ಮದ್ಯಗಳಾದರೇ ಅಲ್ಪ ಹಣ ಪಡೆದು ಬಿಡುಲಾಗುತ್ತಿದೆ. ಇನ್ನು ದುಬಾರಿ ಮದ್ಯಗಳಿದ್ದರೇ ಅದಕ್ಕೆ ಬೇರೆಯ ದರ ವಿರುತ್ತದೆ. ಹೀಗೆ ಅಕ್ರಮವಾಗಿ ಗೋವಾ ಮದ್ಯಗಳು ಕರ್ನಾಟಕದತ್ತ ಬರುತಿದ್ದು ತನಿಖಾ ಠಾಣೆಯಲ್ಲಿ ಸಿ.ಸಿ ಕ್ಯಾಮರಾಗಳಿದ್ದರೂ ಕ್ಯಮಾರಾಕ್ಕೆ ಸಿಗದಂತೆ ದೂರದಲ್ಲೇ ಕತ್ತಲಲ್ಲಿ ವ್ಯವಹಾರ ಕುದುರಿಸುತಿದ್ದಾರೆ.

ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಮೌನ ವಹಿಸುತ್ತಿರುವುದು ಮಾತ್ರ ದುರಂತವಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!