ಭಟ್ಕಳದಲ್ಲಿ ಶಿಲಾಯುಗದ ಬಂಡೆಚಿತ್ರ ನೆಲಶೋಧ! ಏನಿದು ವಿವರ ನೋಡಿ.

190

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕರೂರು ಗ್ರಾಮದ ಸಮೀಪ ಇತಿಹಾಸ ಪೂರ್ವದ ಬಂಡೆ ಚಿತ್ರದ ನೆಲೆ ಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕರಾದ ಡಾ.ಜಗದೀಶ್ ಅಸೋದೆ,ಹಾಗೂ ಮಾಧುರಿ ಔಗುಲಿ ರವರು ಪತ್ತೆ ಮಾಡಿ ಸಂಶೋಧಿಸಿದ್ದಾರೆ.

ಏನಿದು ಬಂಡೆ ಚಿತ್ರ?

ಇತಿಹಾಸಕ್ಕೂ ಪಾರ್ವದಲ್ಲಿ ಅಂದರೇ ಶಿಲಾ ಯುಗದಲ್ಲಿ ಲಿಪಿಗಳು ಬರೆಯುವುದನ್ನು (ಅಕ್ಷರ ) ಕಲಿಯುವ ಮುಂಚಿನ ಯುಗದಲ್ಲಿ ಮಾನವ ತನ್ನ ಸಂವಹನಕ್ಕಾಗಿ ಹಾಗೂ ಸಂದೇಶ ಸಾರುವ ಉದ್ದೇಶಕ್ಕೆ ಬಳಸುವ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತುವುದು ಬಂಡೆ ಚಿತ್ರಣ. ಭಟ್ಕಳದಲ್ಲಿ ಬಂಡೆಗಳ ಬದಲು ನೆಲಹಾಸಿನ ಚೀರೆಕಲ್ಲಿನಲ್ಲಿ ಕೆತ್ತಲಾಗಿದ್ದು ಇತಿಹಾಸಕಾರರ ಪ್ರಕಾರ ಇದು ಅಪರೂಪ ಹಾಗೂ ಕೆಲವೇ ಪ್ರದೇಶದಲ್ಲಿ ಕಾಣಬಹುದಾಗಿದೆ.

ಭಟ್ಕಳ ತಾಲೂಕಿನ ಮುರುಡೇಶ್ವರ ದಿಂದ ಸುಮಾರು 6ಕಿ.ಮೀ ದೂರ ಇರುವ ಕರೂರು ಗ್ರಾಮದಿಂದ ಪೂರ್ವಕ್ಕೆ 1 ಕಿಲೋಮೀಟರ್ ಅಂತರದಲ್ಲಿ ಈ ಬಂಡೆಗಳಿವೆ. 20 ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ. ಜಂಬಿಟ್ಟಿಗೆ ನೆಲದಲ್ಲಿ 13 ಮೀಟರ್ ಉದ್ದ,20 ಮೀಟರ್ ಅಗಲವಿದೆ.

ಇಲ್ಲಿರುವ 20 ರೇಖಾ ಚಿತ್ರಗಳನ್ನು ನಾಲ್ಕು ಹಂತದಲ್ಲಿ ವಿಭಾಗಿಸಲಾಗಿದೆ. ಒಂದನೇ ಗುಂಪಿನಲ್ಲಿ ಜಿಂಕೆ, ಎತ್ತು,ಮತ್ತು ಮನುಷ್ಯನ ಚಿತ್ರಹಳಿವೆ,ಈ ಚಿತ್ರವು 1.65 ಮೀಟರ್ ನಷ್ಟು ಉದ್ದವಾಗಿದ್ದು ,1.25 ಸೆ.ಮೀ ಅಗಲವಿದೆ.

2ನೇ ಗುಂಪಿನ ಚಿತ್ರಗಳಲ್ಲಿ ಸುಮಾರು 5 ಸಣ್ಣ ಸಣ್ಣ ಜಿಂಕೆಗಳಿವೆ. ಆ ಜಿಂಕೆಯು 80 ಸೆ.ಮೀ. ಉದ್ದ, 60 ಸೆ.ಮೀ. ಅಗಲವಿದೆ. ಇದರ ಕೆಳಭಾಗದಲ್ಲಿ ವೃತ್ತಾಕಾರದ ಮೂರು ಕುಣಿಗಳ ಸಮೂಹವನ್ನು ಒಂದರ ಕೆಳಗೆ ಒಂದರಂತೆ ಅನುಕ್ರಮವಾಗಿ ತೋರಿಸಲಾಗಿದೆ. ಪ್ರತಿ ಸಮೂಹದಲ್ಲಿ ಎರಡು ಸಾಲುಗಳಲ್ಲಿ 12 ಕುಣಿಗಳಿವೆ.

4 ನೇ ಗುಂಪಿನ ಚಿತ್ರಗಳಲ್ಲಿ ದೊಡ್ಡ ಮನುಷ್ಯನ ಆಕೃತಿಯ ತಲೆಯ ಮೇಲೆ ಬಲಭಾಗದಲ್ಲಿ ಸ್ವಲ್ಪ ದೂರದಲ್ಲಿ ಒಂದು ಎತ್ತಿನ ರೇಖಾಚಿತ್ರವಿದೆ. ಅದರ ಉದ್ದ 80 ಸೆ.ಮೀ. ಅಗಲ 50 ಸೆ.ಮೀ. ಎತ್ತರವಾದ ಡುಬ್ಬವಿದೆ. ಮತ್ತು ಬಾಲವಿದೆ.

ಪ್ರಸ್ತುತ ನೆಲೆಯ ರೇಖಾಚಿತ್ರಗಳನ್ನು ಶೈಲಿಯ ದೃಷ್ಟಿಯಿಂದ ಮೂರು ಕಾಲಮಾನಗಳನ್ನಾಗಿ ವರ್ಗಿಕರಿಸಲಾಗಿದೆ.

  1. ಬಂಡೆರೇಖಾ ಚಿತ್ರಗಳಲ್ಲಿ ಎತ್ತು ಮತ್ತು ಜಿಂಕೆ ಚಿತ್ರಗಳು ನೂತನ ತಾಮ್ರಶಿಲಾ ಸಂಸ್ಕೃತಿ (ಕ್ರಿ.ಪೂ.1800-ಕ್ರಿ.ಪೂ.800) ಕಾಲಘಟ್ಟದಾಗಿವೆ.
    .2. ಇದರಲ್ಲಿ ಆಳವಾಗಿ ಕೆತ್ತಿರುವ ಕೆಲವು ಜಿಂಕೆಗಳ ರೇಖಾಚಿತ್ರಗಳು ಕಬ್ಬಿಣದ ಬೃಹತ್ ಶಿಲಾಯುಗ ಕಾಲಘಟ್ಟಕ್ಕೆ (ಕ್ರಿ.ಪೂ. 1000-ಕ್ರಿ.ಪೂ.2 ನೆಯ ಶತಮಾನ) ಸೇರುತ್ತವೆ.
  2. ಇದರಲ್ಲಿ ಬೃಹದಾಕಾರದ ಮನುಷ್ಯನ ಚಿತ್ರವು ಇತಿಹಾಸದ ಆರಂಭಿಕ (ಕ್ರಿ.ಪೂ. 1ನೆಯ ಶತಮಾನದಿಂದ- ಕ್ರಿ.ಶ. 2ನೆಯ ಶತಮಾನ) ಕಾಲಘಟ್ಟದ್ದಾಗಿದೆ.

ಸದ್ಯ ಕರಾವಳಿಭಾಗದಲ್ಲಿ ಈ ಬೃಹದಾಕಾರದ ಬಂಡೆ ಚಿತ್ರಗಳು ದೊರತಿರುವುದು ಇತಿಹಾಸ ಪೂರ್ವದಲ್ಲೂ ಈ ಭಾಗದಲ್ಲಿ ನಾಗರೀಕತೆ ಇತ್ತು,ಜನವಸತಿ ಇತ್ತು ಎಂಬಬಗ್ಗೆ ಬೆಳಕು ಚಲ್ಲುತ್ತದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!