ಗೋಕರ್ಣ,ಮುರುಡೇಶ್ವರ ಕ್ಷೇತ್ರವನ್ನು ಅಪವಿತ್ರ ಗೊಳಿಸುತ್ತಿರುವ ವೇಷ್ಯಾವಾಟಿಕೆ, ಗಾಂಜಾ ಅಮಲಿನ ದಂಧೆ! Inside story

356

ಕಾರವಾರ :- ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಕ್ಕೆ ( tourism )ಹೆಸರು ಮಾಡಿದ ಜಿಲ್ಲೆ ಅದ್ರಲ್ಲೂ ಅತೀ ಹೆಚ್ಚು ಪ್ರವಾಸಿಗರು ಬರುವ ಸ್ಥಳವೆಂದರೇ ಜಿಲ್ಲೆಯ ಗೋಕರ್ಣ, ಮುರುಡೇಶ್ವರ ಕ್ಷೇತ್ರಗಳು. ಪ್ರತಿ ವಾರ ವೀಕೆಂಡ್ ಬಂತು ಎಂದರೇ ಪ್ರವಾಸಿಗರು (tourist) ಅತೀ ಹೆಚ್ಚು ಈ ಭಾಗಕ್ಕೆ ಬರುತ್ತಾರೆ. ಇದರ ಲಾಭ ಪಡೆಯಲು ಅಕ್ರಮ ದಂಧೆ ಕೋರರು ಜಿಲ್ಲೆಯ ಪ್ರವಾಸಿ ಸ್ಥಳಗಳನ್ನ ತಮ್ಮ ಅಡ್ಡವನ್ನಾಗಿ ಮಾಡಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ.

ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರ ಜೊತೆ ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಬರುತ್ತಾರೆ. ವಿದೇಶಿ ಪ್ರಜೆಗಳಿಗಾಗಿ ಓಂ ಬೀಚ್ ಸೇರಿದಂತೆ ಹಲವು ಭಾಗದಲ್ಲಿ ಮಾದಕ ವಸ್ತುಗಳು ಪೊಲೀಸರ ಕಣ್ಣು ತಪ್ಪಿಸಿ ವಿದೇಶಿಗರ ಕೈ ಸೇರುತ್ತಿದೆ. ಬೆತ್ತಲೆ ಪಾರ್ಟಿಗಳು ಈ ಹಿಂದೆ ಕಡಿವಾಣ ಬಿದ್ದರೂ ಮತ್ತೆ ಇದೀಗ ಚಿಗುರುಕೊಳ್ಳುತ್ತಿದೆ. ಇನ್ನು ವೇಷ್ಯಾವಾಟಿಕೆ ಯಂತೂ ಶನಿವಾರ ,ಭಾನವಾರದ ರಜೆ ದಿನದಲ್ಲಿ ಇಲ್ಲಿನ ಹಲವು ರೆಸಾರ್ಟ ನಲ್ಲಿ ಸದ್ದುಮಾಡುತ್ತವೆ. ಅಕ್ರಮವಾಗಿ ನಡೆಯುವ ಹಲವು ರೆಸಾರ್ಟ ನಲ್ಲಿ ಮದ್ಯ,ಗಾಂಜಾ ,ಕೋಕೇನ್ ಅಮಲಿನ ಜೊತೆ ಬೆಂಗಳೂರು, ಮುಂಬೈ,ಚಿತ್ರದುರ್ಗ,ಗೋವಾ ಹುಡಿಗಿಯರ ಮೈಮಾಟದ ಸೊಬಗು ಹಣಕ್ಕೆ ತಕ್ಕಂತೆ ತೆವಲು ತೀರಿಸಿಕೊಳ್ಳುವವರಿಗೆ ಸಿಗುತ್ತಿದೆ. ಹೀಗಾಗಿ ಧಾರ್ಮಿಕ ಕ್ಷೇತ್ರವೀಗ ಅಪವಿತ್ರ ಕ್ಷೇತ್ರವಾಗುತ್ತಿದೆ.

ವಾಟ್ಸ್ ಅಪ್ ನಲ್ಲಿ ಹುಡಿಗಿಯರ ಫೋಟೋ ಕಳುಹಿಸಿ ರೆಸಾರ್ಟ್ ನಲ್ಲಿ ತಂಗಿದವರ ಜೇಬಿಗೆ ಕತ್ತರಿ ಹಾಕೋ ದಂಧೆ ಕೋರರು!

ಗೋಕರ್ಣ ,ಮುರುಡೇಶ್ವರ ಭಾಗದಲ್ಲಿ ವೇಶ್ಯಾ ವಾಟಿಕೆ ದಂಧೆ ಕೋರರು ಸಾಮಾಜಿಕ ಜಾಲತಾಣವನ್ನು ಚನ್ನಾಗಿ ಬಳಸಿಕೊಳ್ಳುತಿದ್ದಾರೆ. ರೆಸಾರ್ಟ್ ನೆಡಸುವವರೊಂದಿಗೆ , ಆಟೋ ಚಾಲಕರೊಂದಿಗೆ ಹಾಗೂ ರೂಮ್ ಕೊಡಿಸುವ ಮಧ್ಯವರ್ತಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಇವರು ರೂಮ್ ಬುಕ್ ಮಾಡಿ ಬರುವವರ ಗೆಳತನ ಬೆಳಸಿ ಅವರ ನಂಬರ್ ತೆಗೆದುಕೊಂಡು ಅಂದದ ಹುಡಿಗಿಯರ ಫೋಟೋ ಕಳುಹಿಸಿ ಅದರೊಂದಿಗೆ ದರ ಕೂಡ ಕಳುಹಿಸಿ ಗ್ರಾಹಕರನ್ನು ಸೆಳೆಯುತ್ತಾರೆ. ಇದಕ್ಕಾಗಿ ಗೋಕರ್ಣ ,ಮುರುಡೇಶ್ವರ ದಲ್ಲಿ ಬ್ರೋಕರ್ ಗಳು ಸಹ ಇದ್ದಾರೆ. ಹೀಗೆ ಗ್ರಾಹಕರು ಬುಕ್ ಮಾಡಿದರೆ ಅವರಿದ್ದ ಸ್ಥಳಕ್ಕೆ ಹುಡುಗಿಯರನ್ನ ಕಳುಹಿಸುತ್ತಾರೆ.

ಒಂದು ಹುಡುಗಿಯನ್ನು ಒಬ್ಬ ಗ್ರಾಹಕ ಬುಕ್ ಮಾಡಿದರೇ ಆಕೆಯೊಂದಿಗೆ ಒಂದು ಸುತ್ತಿನ ಮೋಜಿಗೆ 2000 ದಿಂದ 5000 ವರೆಗೆ ನಿಗದಿ ದರ ವಿದೆ. ಎಳೆ ಹುಡುಗಿಯರಿಗೆ 20 ಸಾವಿರದ ವರೆಗೂ ದರ ವಿಧಿಸುತ್ತಾರೆ. ಹೆಚ್ಚಿನ ವಯಸ್ಸಾದ ಮಹಿಳೆಗೆ 500 ರಿಂದ ಸಾವಿರ ದರ ಒಂದು ಮೋಜಿಗೆ ನಿಗದಿ ದರವಿದೆ. ವಿದೇಶಿಯರು ಮೋಜಿಗೆ ಬೇಕೆಂದರೇ ಅತೀ ಹೆಚ್ಚಿನ ದರ ವಿರುತ್ತದೆ. ಇಡೀ ದಿನ ಒಂದು ಹುಡುಗಿ ಬೇಕೆಂದರೇ ಇಂತಿಷ್ಟು ಎಂದು ದರ ನಿಗದಿಯಾಗುತ್ತದೆ.

ಇನ್ನು ಹುಡಿಗಿಯರ ಮೋಜಿನ ಜೊತೆ ಗಾಂಜಾ ,ಕೊಕೇನ್ ಗಳನ್ನು ಸಹ ಸಪ್ಲೆ ಮಾಡುವ ದಂಧೆ ಕೋರರು ಪೊಲೀಸ್ ಇಲಾಖೆಯನ್ನೇ ಹೇಮಾರಿಸಿ ದಂಧೆ ನಡೆಸುತಿದ್ದಾರೆ.
ಇದಕ್ಕೆ ಸ್ಥಳೀಯ ದಂದೆಕೋರರು ಸಹಕಾರ ನೀಡುತಿದ್ದು ರಜೆ ದಿನಗಳಲ್ಲಿ ಅವ್ಯಾಹತವಾಗಿ ದಂದೆ ನಡೆಯುತ್ತವೆ.

ರೆಸಾರ್ಟ್ ಮೇಲೆ ರೈಡ್ -ಮೂರುಜನ ಯುವತಿಯರ ರಕ್ಷಣೆ.

ಗೋಕರ್ಣದ (gokarna) ಫಾರ್ಮ್ ಹೌಸ್ ಮೇಲೆ ಇಂದು ಶನಿವಾರ ಗೋಕರ್ಣ ಪೊಲೀಸರು ( gokarna police ) ದಾಳಿ ನಡೆಸಿ ವೇಷ್ಯಾ ವಾಟಿಕೆ ನಡೆಸುತಿದ್ದ ಮೂರು ಜನ ಜನರನ್ನು ಬಂಧಿಸಿ ಮೂರು ಜನ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ಗೋಕರ್ಣದ ಕಾಮತ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ ಪೊಲೀಸರು ವೇಷ್ಯಾ ವಾಟಿಕೆ ನಡೆಸುತಿದ್ದ ಆರೋಪದಡಿ ಫಾರ್ಮ ಹೌಸ್ ನಡೆಸುತಿದ್ದ ಗೋಕರ್ಣದ ಸಚಿನ್ ಆಚಾರಿ ,ವೇಷ್ಯಾವಾಟಿಕೆ ನಡೆಸುತಿದ್ದ ರಫಿಕ್ , ಹರ್ಷಿದಾ ಬಾನು ಎಂಬುವವರನ್ನು ವಶಕ್ಕೆ ಪಡೆದು ಬೆಂಗಳೂರು ,ಚಿತ್ರದುರ್ಗದ ಮೂರು ಜನ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!