BREAKING NEWS
Search

ಸೂರು ಕಳೆದುಕೊಳ್ಳುವ ಆತಂಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಗನವಾಡಿಗಳು! ಏನುದು ಹೊಸ ಕಥೆ ವಿವರ ನೋಡಿ

83

ಕಾರವಾರ :-ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯ (state government guarantee scheme )ಅನುಷ್ಟಾನಕ್ಕೆ ತೋರಿದ ಮುತುವರ್ಜಿ ಬೇರೆ ಇಲಾಖೆಗಳಮೇಲೆ ತೋರುತ್ತಿಲ್ಲ ‌.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ತಾಪ್ತಿಗೆ ಬರುವ ಅಂಗನವಾಡಿಗಳ ವರ್ಷಗಳಷ್ಟು ಬಾಡಿಗೆಯನ್ನೇ ನೀಡದೇ ನಿರ್ಲಕ್ಷ ವಹಿಸಿದ್ದು ,ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಬಾಡಿಗೆ ಕಟ್ಟಲು ಹಣವಿಲ್ಲದೇ ಕಟ್ಟಡವನ್ನೇ ಕಾಲಿ ಮಾಡುವ ಸ್ಥಿತಿಗೆ ತಲುಪಿದೆ. ಈ ಸಮಸ್ಯೆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

ಹೌದು ಸರ್ಕಾರದ ಧೋರಣೆಯುಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ (uttrakannada) ಅಂಗನವಾಡಿ (anganavadi) ಕಾರ್ಯಕರ್ತೆಯರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ತಮಗೆ ಬರುವ ಅಲ್ಪ ಸಂಬಳವನ್ನು ಸಹ ಅಂಗನವಾಡಿಗೆ ವ್ಯಯಿಸುವ ದುರ್ಗತಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರದ್ದಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 2782 (uttrakannada)ಅಂಗನವಾಡಿಗಳಿವೆ. ಇವುಗಳಲ್ಲಿ 322 ,ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಅಂಗನವಾಡಿ ಕಟ್ಟಡಕ್ಕೆ 4 ರಿಂದ 5 ಸಾವಿರದ ವರೆಗೆ ಬಾಡಿಗೆ ನಿಗದಿಮಾಡಲಾಗಿದೆ.ಇವುಗಳ ಬಾಡಿಗೆಯನ್ನು ಕಳೆದ ಒಂದು ವರ್ಷದಿಂದ ಅನುದಾನದ ಬಿಡುಗಡೆಯಾಗದೇ ಕಟ್ಟಡದ ಮಾಲೀಕರಿಗೆ ಬಾಡಿಗೆ ಸಂದಾಯವಾಗಿಲ್ಲ.

ಇದನ್ನೂ ಓದಿ:- (photo ದ ಮೇಲೆ ಕ್ಲಿಕ್ ಮಾಡಿ)

ಇನ್ನು ವರ್ಷಗಳಿಂದ ಬಾಡಿಗೆ ನೀಡದಿರುವ ಕಾರಣ ಕಟ್ಟಡ ಕಾಲಿ ಮಾಡಲು ಮಾಲೀಕರು ಒತ್ತಡ ಹೇರುತಿದ್ದು ಕೆಲವು ಅಂಗನವಾಡಿ ಕಾರ್ಯಕರ್ತರು ತಮ್ಮ ಸಂಬಳದ ಹಣವನ್ನು ಕಟ್ಟಡದ ಮಾಲೀಕರಿಗೆ ನೀಡುತಿದ್ದಾರೆ.

ಇದಲ್ಲದೇ ಅಂಗನವಾಡಿ ಕೇಂದ್ರದ ಸ್ಪಚ್ಛತೆ ನಿರ್ವಹಣೆಗಾಗಿ ಬರುತಿದ್ದ ಹಣವೂ ಬಾರದೇ ಕಸದ ಬುಟ್ಟಿಯಿಂದ ಹಿಡಿದು ಪಿನಾಯಲ್ ಗಳನ್ನು ಸಹ ಅಂಗನವಾಡಿ ಕಾರ್ಯಕರ್ತರೇ ಭರಣ ಮಾಡುತಿದ್ದು ಸರ್ಕಾರದ ಹಣ ಬಾರದೇ ಸಂಕಷ್ಟದಲ್ಲೇ ಅಂಗನವಾಡಿ ಕಾರ್ಯಕರ್ತರು ಮಕ್ಕಳ ಪೋಷಣೆ ಮಾಡುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ಕಾರವಾರ ನಗರದ ಸೋನಾರವಾಡದ ಅಂಗನವಾಡಿ ಕಾರ್ಯಕರ್ತೆ
ಸೆಲೆಂಜ್ ಪರ್ನಾಂಡಿಸ್.

ಉತ್ತರ ಕನ್ನಡ ಜಿಲ್ಲೆಯಲ್ಲಿ 2782 ಅಂಗನವಾಡಿಯಲ್ಲಿ ಬಾಡಿಗೆ ಕಟ್ಟಲು ಸಾಧ್ಯವಾಗದೇ 7 ಅಂಗನವಾಡಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಕಾರವಾರದ ಹಬ್ಬುವಾಡ,ಸೋನಾರವಾಡ,ಹರಿದೇವ ನಗರ ,ಕೆ.ಹೆಚ್.ಬಿ ಕಾಲೋನಿ ಸೇರಿದಂತೆ ಹಲವು ಅಂಗನವಾಡಿಗಳಲ್ಲಿ ಒಂದು ವರ್ಷದಿಂದ ಬಾಡಿಗೆ ಹಣ ಸಂದಾಯವಾಗಿಲ್ಲ. ಇದು ಜಿಲ್ಲೆಯ ಬಹುತೇಕ ಬಾಡಿಗೆ ಕಟ್ಟಡದಲ್ಲಿ ಇರುವ ಅಂಗನವಾಡಿಗಳ ಸ್ಥಿತಿಯಾಗಿದೆ.

ಇನ್ನು ಕೆಲವು ಅಂಗನವಾಡಿಯಲ್ಲಿ ಕಾರ್ಯಕರ್ತರೇ ತಮ್ಮ ಸಂಬಳದ ಹಣದಲ್ಲಿ ಬಾಡಿಗೆ ಕಟ್ಟಿದ್ದಾರೆ.ಇನ್ನು ಸರ್ಕಾರದದಿಂದ ಅನುದಾನ ಬಿಡುಗಡೆ ಆಗದೇ ಇರುವುದರಿಂದ ಈ ಸಮಸ್ಯೆ ಎದುರಾಗಿದೆ ,ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ.ಶೀಘ್ರದಲ್ಲೇ ಈ ಸಮಸ್ಯೆ ನೀಗಲಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕುಮಾರ್ ಕಾಂದೂ.

ಸರ್ಕಾರದ ನಿರ್ಲಕ್ಷದಿಂದಾಗಿ ಅಂಗನವಾಡಿಯಲ್ಲಿ ಕುಳಿತು ಆಟವಾಡಬೇಕಾದ ಮಕ್ಕಳು ಸೂರಿಲ್ಲದೇ ಬೀದಿಗೆ ಬರುವಂತಾದರೇ, ತಮ್ಮ ಸಂಬಳದ ಹಣವನ್ನೂ ಸಹ ಅಂಗನವಾಡಿಗೆ ಕರ್ಚುಮಾಡಿದ ಅಂಗನವಾಡಿ ಕಾರ್ಯಕರ್ತರು ಕಣ್ಣೀರಿನ ಜೀವನ ನಡೆಸುವಂತಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಅಂಗನವಾಡಿಗಳಿಗೆ ನೀಡಬೇಕಾದ ಅನುದಾನವನ್ನು ಶೀಘ್ರ ಬಿಡುಗಡೆಮಾಡಿ ಅಂಗನವಾಡಿ ಕಾರ್ಯಕರ್ತರ ನೋವಿಗೆ ಸ್ಪಂದಿಸಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!