Toxic ingredient in Everest Chicken Masala

ಎವರೆಸ್ಟ್ ಮಸಾಲೆಯಲ್ಲಿ ವಿಷ ಪದಾರ್ಥಕ್ರಮಕ್ಕೆ ಮೀನಾವೇಶ ಎಣಿಸಿತ್ತಿದೆ ಆಹಾರ ಇಲಾಖೆ!

131
GILANI super market karwar KSRTC bus stand near Karwar

ಕಾರವಾರ :- ದೇಶದ ಪ್ರತಿಷ್ಟಿತ ಆಹಾರದ ಬ್ರಾಂಡ್ ಆದ ಎವರೆಸ್ಟ್ ಚಿಕನ್ ಮಸಾಲದಲ್ಲಿ (Everest chicken masala) ಹಾನಿಕಾರಕ ಕೀಟನಾಶಕ ಪತ್ತೆಯಾಗಿದೆ.ಉತ್ತರ ಕನ್ನಡ ಜಿಲ್ಲೆಯ ಆಹಾರ ಇಲಾಖೆ (food safety department )ಧಿಕಾರಿಗಳು ಮಸಾಲೆ ಪದಾರ್ಥಗಳ ತಪಾಸಣೆ ನಡೆಸಿದಾಗ ಎವರೆಸ್ಟ್‌ ಮಸಾಲದಲ್ಲಿ ಈಥಲಿನ್ ಆಕ್ಸೈಡ್ ಎಂಬ ರಾಸಾಯನಿಕವನ್ನು ಎವರೆಸ್ಟ್ ಮಸಾಲದ ಮೇಣಸಿನ ಪುಡಿಗೆ 3.93% ಬಳಕೆ ಮಾಡಿರುವುದು ಪತ್ತೆಯಾಗಿದೆ.

ಆಹಾರ ಕಾಯ್ದೆಯಡಿ 0.01% ಮಾತ್ರ ನಿಗದಿಯಂತೆ ಇರಬೇಕು ಆದರೇ ಈ ಮಸಾಲದಲ್ಲಿ ಹೆಚ್ಚಿದ್ದು ಇದನ್ನು ಉಪಯೋಗಿಸುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಜೊತೆ ಕ್ಯಾನ್ಸರ್ ಗೂ ಕಾರಣವಾಗಲಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಎವೆರಸ್ಟ್ ಚಿಕನ್ ಮಸಾಲಾ ಬಳಸದಂತೆ ಉತ್ತರ ಕನ್ನಡ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಯಾದ ರಾಜಶೇಖರ್ ಮನವಿ ಮಾಡಿದ್ದು , ಬ್ಯಾಚ್ ನಂಬರ್ – E180D504062 ನ ಮಸಾಲೆ ಕರೀದಿಸಿದ್ದರೇ ಗ್ರಾಹಕರು ಮರಳಿ ಅಂಗಡಿಗೆ ನೀಡುವಂತೆ ಸೂಚನೆ ನೀಡಿದ್ದಾರೆ.

ಇನ್ನು ಆಹಾರ ಗುಣಮಟ್ಟ ಹಾಗೂ ಭದ್ರತಾ ಕಾಯ್ದೆಯಡಿ ಮಹಾರಾಷ್ಟ್ರ ಮೂಲದ ಎವರೆಸ್ಟ್ ಮಸಾಲಾ ಕಂಪನಿಗೆ ನೋಟಿಸ್ ಸಹ ನೀಡಲಾಗಿದ್ದು ಮಾರುಕಟ್ಟೆಗೆ ಬಿಟ್ಟ ಎವರೆಸ್ಟ್ ಚಿಕನ್ ಮಸಾಲವನ್ನು ಹಿಂಪಡೆಯುವಂತೆ ಸೂಚಿಸಿದೆ.ಆದ್ರೆ ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಆರೋಗ್ಯ ಇಲಾಖೆಗೆ ಈವರೆಗೂ ಅನುಮತಿ ನೀಡಿಲ್ಲ. ಇನ್ನು ಎಂಟಿಆರ್ ಸೇರಿದಂತೆ ಹಲವು ಕಂಪನಿಗಳ ಮಸಾಲಾ ಪದಾರ್ಥವನ್ನು ಯುರೀಕಾ ಅನಾಲೆಟಿಕಲ್ ಸರ್ವೀಸ್ ಪ್ರವೇಟ್ ಲಿಮಿಟೆಡ್ ಕಂಪನಿಯ ಲ್ಯಾಬ್ ಗೆ ತಪಾಸಣೆಗೆ ಕಳುಹಿಸಲಾಗಿದ್ದು ವರದಿ ಬರಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!