Rain new uttrakannada boy Fies after being struck by lightning in Banavasi

ಉತ್ತರ ಕನ್ನಡ ದಲ್ಲಿ ಮಳೆ|ಶಿರಸಿ-ಸಿಡುಲು ಬಡಿದು ಯುವಕ ಸಾವು

128
GILANI super market karwar KSRTC bus stand near Karwar

ಕಾರವಾರ :- ಸಿಡಿಲು ಬಡಿದು ವಿದ್ಯಾರ್ಥಿ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಸಂಜೆ ನಡೆದಿದೆ.

ಸಿಡಿಲು ಹೊಡೆದು ಮೃತಪಟ್ಟ ವಿದ್ಯಾರ್ಥಿ ಸಾಜೀದ್ ಅಸ್ಫಾಖಲಿ ಶೇಖ್ (16)ಎಂಬುವವರಾಗಿದ್ದು ಬನವಾಸಿ ಕದಂಬ ಕ್ರೀಡಾಂಗಣದಲ್ಲಿ ಕ್ರೀಕೇಟ್ ಆಡುವ ಸಂದರ್ಭದಲ್ಲಿ ಸಿಡಿಲಿಗೆ ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ:-ಬೆಂಗಳೂರಿನಿಂದ ಕಾರವಾರಕ್ಕೆ ಬಂದ ಅರ್ಚಕರು ಕಾಳಿ ಸಂಗಮದಲ್ಲಿ ವಿಶೇಷ ಪೂಜೆ! ಕಾರಣ ಗೊತ್ತಾ?

ಸದ್ಯ ಉತ್ತರ ಕನ್ನಡ ಜಿಲ್ಲೆಯ ಕಾರವಾರ,ಶಿರಸಿ,ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದ್ದು ಕೆಲವು ತಾಲೂಕಿನಲ್ಲಿ ಅಲ್ಪ ಮಳೆಯಾಗಿದ್ದು ಇನ್ನೂ ಎರಡು ದಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದಲ್ಲದೇ ಮೇ 18 ರಿಂದ 22 ರ ವರೆಗೆ ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತ ಆಗುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಜಿಲ್ಲೆಯ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!