ಅಂಕೋಲ ,ಮಂಗಳೂರಿನಲ್ಲಿ NIA ತನಿಖೆ-ಹಣ ಎಲೆಕ್ಟ್ರಾನಿಕ್ ವಸ್ತುಗಳು ವಶಕ್ಕೆ

352

ಕಾರವಾರ :-2023ರಲ್ಲಿ ಬೆಂಗಳೂರು (Bangalore) ಪರಪ್ಪನ ಅಗ್ರಹಾರದಲ್ಲಿ ಶಸ್ತ್ತಾಸ್ತ್ರ ಪೂರೈಕೆ ಸಂಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾಕ್ಕೆ NIA ತಂಡದ ಆರು ಜನ ಅಧಿಕಾರಿಗಳ ಭೇಟಿ ನೀಡಿ ತಪಾಸಣೆ ನಡೆಸಿದರು‌ .

ಪ್ರಕರಣದಲ್ಲಿ ನಾಸಿರ್ ಖಾನ್ ಎಂಬಾತನ ಹುಡುಕಾಟದಲ್ಲಿ ಬಂದಿದ್ದ NIA ತಂಡ ಆರೋಪಿಗೆ ಪೂರಕ ದಾಖಲೆಗಳನ್ನು ಸಂಗ್ರಹಿಸಿದ್ದ ಎಲೆಕ್ಟ್ರಾನಿಕ್ (electronic equipment )ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ನಿನ್ನೆ ಮಂಗಳೂರಿನಲ್ಲಿ ಮೂಲತಃ ಕೇರಳ ಇಡುಕ್ಕಿ ನಿವಾಸಿ, ಸುಳ್ಯ ಕಲ್ಮಡ್ಕದಲ್ಲಿದ್ದ ಬಿಜು ಅಬ್ರಹಾಂ ಹಾಗೂ ಅತ್ತಾವರದಿಂದ ನಬೀದ್ ಎಂಬಾತನನ್ನು NIA ತಂಡ ವಶಕ್ಕೆ ಪಡೆದಿತ್ತು.

ಲಷ್ಕರ್ ಎ ತಯ್ಯಬಾದಿಂದ( lashkar a Taiba) ಬೆಂಗಳೂರು ಜೈಲಿನಲ್ಲಿ (jail) ರ‌್ಯಾಡಿಕಲೈಸೇಶನ್ ಪ್ರಕರಣ ಸಂಬಂಧಿಸಿ ಈ ಕಾರ್ಯಾಚರಣೆ ನಡೆದಿದ್ದು ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಉಗ್ರ ಚಟುವಟಿಕೆಗೆ ಸಂಬಂಧಿಸಿದವರನ್ನು NIA ತಂಡ ಬಂಧಿಸಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!