ಕಾರವಾರ,ಮಾರ್ಚ,5 :- ರಾಜ್ಯಸಭಾ ಚುನಾವಣೆಯಲ್ಲಿ(Rajyasabha election) ಮತದಾನಕ್ಕೆ ಗೈರಾದ ಹೆಬ್ಬಾರ್ ಕಾಂಗ್ರೆಸ್ ಗೆ ಸೇರೋದು ಗ್ಯಾರಂಟಿಯಾಗಿದೆ . ಇನ್ನು ಬನವಾಸಿ ಉತ್ಸವದಲ್ಲಿ ಪ್ಲೇಕಾರ್ಡ ಗಳು ,ಬ್ಯಾನರ್ ಗಳು ಹೆಬ್ಬಾರ್ ಚಿತ್ರದೊಂದಿಗೆ ಏನಿತ್ತು ಎಂಬುದನ್ನು ಸಾರಿ ಹೇಳುತ್ತಿದೆ. ಆದ್ರೆ ಹೆಬ್ಬಾರ್ ಕಾಂಗ್ರೆಸ್ ಗೆ ಸೇರೋದು ಗ್ಯಾರಂಟಿ ಆಗಿದ್ರೂ ಲೋಕಸಭೆಗೆ ಸ್ಪರ್ಧಿಸೋದು ಕಚಿತವಿಲ್ಲ.
ಇದನ್ನೂ ಓದಿ:- ಟಿಕೆಟ್ ಆಕಾಂಕ್ಷಿಗಳಿಗೆ ಚೇರ್ ಇಟ್ಟು ಸವಾಲು ಹಾಕಿದ ಅನಂತಕುಮಾರ್ ಹೆಗಡೆ.? ಏನಂದ್ರು
ಇದಕ್ಕೆ ಪುಷ್ಟಿ ನೀಡುವಂತೆ ಸಿ.ಎಂ ಸಿದ್ದರಾಮಯ್ಯನವರು ಬನವಾಸಿಗೆ ಆಗಮಿಸುತಿದ್ದಂತೆ ಸೊರಬಾ ರಸ್ತೆಯಲ್ಲಿರುವ PWD ಇಲಾಖೆಯ ಐ.ಬಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ , ಶಾಸಕ ಆರ್.ವಿ ದೇಶಪಾಂಡೆ,ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ,ಶಾಸಕ ಸತೀಶ್ ಸೈಲ್ ,ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ , ನಿವೇದಿತ್ ಆಳ್ವ ರವರು ಈ ಗುಪ್ತ ಸಮಾಲೋಚನೆ ನಡೆಸಿದರು.
ಮೂಲಗಳ ಮಾಹಿತಿ ಪ್ರಕಾರ ಲೋಕಸಭಾ ಚುನಾವಣೆಗೆ ( Loksabha election-2024) ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ರವರನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ನಿಲ್ಲಿಸುವ ಕುರಿತು ಅಭಿಪ್ರಾಯ ಸಂಗ್ರಹಣೆ ಹಾಗೂ ಹೆಬ್ಬಾರ್ ರವರು ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುವ ಕುರಿತು ಒಂದು ತಾಸುಗಳ ಕಾಲ ಚರ್ಚೆ ನಡೆಸಿ ಸಿಎಂ ಅಭಿಪ್ರಾಯ ಸಂಗ್ರಹಣೆ ನಡೆಸಿದರು. ಇದಲ್ಲದೇ ಶೀಘ್ರದಲ್ಲೇ ಹೆಬ್ಬಾರ್ ರವರಿಗೆ ಲೋಕಸಭಾ ಚುನಾವಣೆ ಪೂರ್ವ ಪಕ್ಷಕ್ಕೆ ಸೇರ್ಪಡೆಯಾಗಲು ಸೂಚಿಸಿದರು ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಗುಪ್ತ ಸಭೆಯಿಂದಾಗಿ ಒಂದು ತಾಸುಗಳ ಕಾಲ ಕದಂಬೋತ್ಸವ ಕಾರ್ಯಕ್ರಮ ತಡವಾಗಿ ಪ್ರಾರಂಭವಾಯಿತು.






