ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಎಷ್ಟು ಕೋಟಿ ವಡೆಯರು! ವಿವರ ನೋಡಿ.

102

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರ ದಿಂದ ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂಜಲಿ ನಿಂಬಾಳ್ಕರ್ ನಾಮಪತ್ರ ( Nomination) ಸಲ್ಲಿಕೆ ಮಾಡಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಐ.ಪಿ.ಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಪತ್ನಿಯಾಗಿದ್ದಾರೆ.

ಇವರ ಚರಾಸ್ತಿ: 3.10 ಕೋಟಿ ರೂ ಆಗಿದ್ದು
ಸ್ಥಿರಾಸ್ತಿ: 12.67 ಕೋಟಿ ರೂ ಆಗಿದ್ದು ಒಟ್ಟು 15.78 ಕೋಟಿ ರೂ ಆಗಿದೆ.

ಇಡೀ ಕುಟುಂಬದ ಒಟ್ಟೂ ಆಸ್ತಿ 15.78 ಕೋಟಿ ರೂ. ಪೈಕಿ, ಇವರ ಪತಿ ಎಡಿಜಿಪಿ ಹೇಮಂತ ನಿಂಬಾಳಕರ ಅವರ ಆಸ್ತಿ 2.10 ಕೋಟಿ ರೂ. ಮಾತ್ರ. ಅಂಜಲಿ ನಿಂಬಾಳಕರ 800 ಗ್ರಾಮ್ ಚಿನ್ನ(gold) 500. ಗ್ರಾಮ್ ಬೆಳ್ಳಿ ಹೊಂದಿದ್ದಾರೆ. 10.17 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 91 ಲಕ್ಷ ರೂ. ಸಾಲ ಇದೆ. ಮುಂಬಯ್ ನಲ್ಲಿ ಎರಡು ಮತ್ತು ಖಾನಾಪುರದಲ್ಲಿ ಒಂದು ಮನೆ ಇದೆ. ಖಾನಾಪುರ ಸುತ್ತಮುತ್ತ ಅನೇಕ ಕಡೆ ಜಮೀನು ಹೊಂದಿದ್ದಾರೆ.

ಇದನ್ನೂ ಓದಿ:-ಮರಾಠ ಜಾತಿಗೆ ನಿಂದನೆ: ಬಿಜೆಪಿ ಕಾರ್ಯಕರ್ತನ ವಿರುದ್ಧ ಕಾಂಗ್ರೆಸ್ ನಿಂದ ದೂರು ಏನಿದು ಪ್ರಕರಣ?

ಇನ್ನು ಇವರ ಮೇಲೆ ಪ್ರಕರಣಗಳು ಸಹ ಇದ್ದು
2022ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ನಡೆದ ಪ್ರತಿಭಟನೆ ವೇಳೆ ದಾಖಲಾದ ಪ್ರಕರಣ ಇವರಮೇಲಿದೆ .

ಇನ್ನು ಇವರ ಹಿನ್ನಲೆ ನೋಡುವುದಾದರೇ ಮೂಲತಃ ಮಹಾರಾಷ್ಟ್ರ ಮೂಲದವರಾಗಿರುವ ಇವರು ಶಿಕ್ಷಣ ಸಹ ಮಹಾರಾಷ್ಟ್ರದಲ್ಲೇ ಆಗಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ ಅವರ ದೂರದ ಸಂಬಂಧಿ ಕೂಡ ಹೌದು ಮದುವೆಯಾದ ನಂತರ ಒಂದು ದಶಕದಿಂದ ಖಾನಾಪುರದಲ್ಲಿ ನೆಲೆಸಿದ್ದಾರೆ. ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಒಂದುಬಾರಿ ಶಾಸಕಿಯಾಗಿದ್ದರು. ಇದೇ ಮೊದಲ ಬಾರಿ ಲೋಕಸಭೆ ಸ್ಪರ್ಧಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!