Mundgodu police constable fraud women

ಮುಂಡಗೋಡು| ಪ್ರೀತಿಸಿ 18ಲಕ್ಷ ಪೀಕಿ ಕೈಕೊಟ್ಟ ಪೊಲೀಸಪ್ಪ

138

Karwar News :- ಹಾಸನ ಮೂಲದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯಿಂದ 18 ಲಕ್ಷ ರುಪಾಯಿ ಹಣ ಪಡೆದು ಪೊಲೀಸ್ ಕಾಸ್ಸ್ಟೇಬಲ್ ( police constable) ಮೋಸ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ (mundgodu) ನಡೆದಿದೆ.

ಮುಂಡಗೋಡು ಠಾಣೆಯ ಕಾನ್ಸ್ಟೇಬಲ್ ಗಿರೀಶ್ .ಎಸ್.ಎಮ್ ಎಂಬುವವರೇ ವಂಚನೆ ಮಾಡಿದ ಆರೋಪಿಯಾಗಿದ್ದು ,ಹಾಸನ ಮೂಲದ ಚನ್ನರಾಯ ಪಟ್ಟಣ ಮೂಲದ ಸುಚಿತ್ರ ವಂಚನೆಗೊಳಗಾಗಿ ದೂರು ನೀಡಿದವರಾಗಿದ್ದಾರೆ.

ಈ ಹಿಂದೆ ಸುಚಿತ್ರಾ ರವರು ಮದುವೆಯಾಗುವುದಾಗಿ ನಂಬಿಸಿ ,18 ಲಕ್ಷ ವಂಚಿಸಿರುವ ಕುರಿತು ಎಸ್.ಪಿ ವಿಷ್ಣುವರ್ಧನ್ ರವರಿಗೆ ದೂರು ನೀಡಿದ್ದರು. ದೂರು ಹಿನ್ನಲೆಯಲ್ಲಿ ಆತನನ್ನು ಕರೆಯಿಸಿ ತನಿಖೆ ಕೈಗೊಂಡಾಗ ಹಣ ಪಡೆದಿದ್ದು ಹಣ ಮರಳಿಸುತ್ತೇನೆ ಎಂದು ಒಪ್ಪಿಕೊಂಡಿದ್ದ. ಆದರೇ ಮದುವೆಯಾಗಲು ನಿರಾಕರಿಸಿದ್ದ.

ಆದರೇ ಹಣ ಮರಳಿಸದೇ ಇರುವುದರಿಂದ ನಿನ್ನೆ ರಾತ್ರಿ ಮುಂಡಗೋಡು ಠಾಣೆಗೆ ತೆರಳಿ ವಂಚನೆ ದೂರು ನೀಡಿದ್ದು ಮುಂಡಗೋಡು ಪೊಲೀಸರು ಕಲಂ 420 ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!