BREAKING NEWS
Search

ಶಿರಸಿ:ದೇವಸ್ಥಾನ,ಮನೆಕಳ್ಳತನ ಮಾಡುತಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ

4471

ಕಾರವಾರ :- ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮನೆ ಹಾಗೂ ದೇವಸ್ಥಾನ ಕಳ್ಳತನ ಮಾಡಿ ತಲೆಮರಿಸಿಕೊಂಡಿದ್ದ ಆರೋಪಿತರನ್ನು ಶಿರಸಿ ಪೊಲೀಸರು ಬಂಧಿಸಿ , ಆರೋಪಿತರಿಂದ 5ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಆರೋಪಿತರು ಹಾನಗಲ್ ತಾಲೂಕಿನ ಬಾಳೆಹಳ್ಳಿ ಹಾಗೂ ಶೃಂಗೇರಿ ಗ್ರಾಮದ ನಿವಾಸಿಗಳಾದ ಶ್ರಿಧರ್ ಯಲ್ಲಪ್ಪ ಬಂಡಿವಡ್ಡರ್, ಅಬ್ದುಲ್ ಸತ್ತಾರ್ ಮೆಹಬೂಬ್ ಶೇಖ್, ಮಹಮ್ಮದ್ ಮಜಮಿಲ್ ಜನಗೇರಿ, ಹಾಗು ಹಾನಗಲ್ ನ ಬೆಗಳಪೇಟದ ಸಂಜೀವ್ ಕೊರಗರ್ ಬಂಧಿತ ಆರೊಪಿಗಳು.

ಈ ಹಿಂದೆ ಶಿರಸಿ ತಾಲೂಕಿನ ಬಿಸಲಕೊಪ್ಪ ,ಬನವಾಸಿ‌ ಭಾಗದ ಬದನಗೋಡ‌ ದೇವಸ್ಥಾನದ ಹುಂಡಿ ಮತ್ತು ದೇವರ ಚಿನ್ನಾಭರಣ ಹಾಗೂ ಮುಂಡಗೋಡು, ಹಾವೇರಿ,ಹಾನಗಲ್, ಆಡೂರ್, ಶಿವಮೊಗ್ಗ ಜಿಲ್ಲೆಯ ಆನವಟ್ಟಿ‌ ಮುಂತಾದ‌ಕಡೆಗಳಲ್ಲಿ‌ ಮನೆಕಳ್ಳತನ ಮಾಡಿದ್ದರು.

ಬಂಧಿತರಿಂದ ಎರಡು ಬಂಗಾರದ ಸರಗಳು, ಬೆಳ್ಳಿಯ ಮಸ್ತುಗಳು ಹಾಗೂ ಕೃತ್ಯ ಕ್ಕೆ ಬಳಸಲಾಗುತ್ತಿದ್ದ ಬೈಕ್ ಮತ್ತು ಕಾರ್ ಗಳನ್ನು‌ ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಶಿರಸಿ ಗ್ರಾಮೀಣ ಠಾಣೆ ಪಿ.ಎಸ್.ಐ.ನಂಜಾ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿಗಳಾದ‌ ಮಹಾದೇವ ನಾಯ್ಕ,ಪ್ರದೀಪ್ ರೇವಣಕರ್, ಬಸವರಾಜ ಮ್ಯಾಗೇರಿ, ರಮೇಶ್ ಮುಚ್ಚಂಡಿ,ಕುಬೇರಪ್ಪ ದೊಡ್ಡಮನಿ, ಸುರೇಶ್ ಕಟ್ಟಿ,ಗಣಪತಿ ನಾಯ್ಕ,ಕೊಟೇಶ್ ನಾಗರವಳ್ಳಿ‌,ಹಾಗೂ ಚಾಲಕ ಶ್ರೀಧರ ನಾಯ್ಕ ಭಾಗವಹಿಸಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!