ಗೋಕರ್ಣ:ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತಿದ್ದ ಸಾಗರ ಮೂಲದ ವ್ಯಕ್ತಿ ಬಂಧನ.

2775

ಕಾರವಾರ :- ಕರ್ನಾಟಕ ಹೌಸಿಂಗ್ ಬೋರ್ಡ ಅಧಿಕಾರಿ ಮತ್ತು ಇಂಟರ್ನಲ್ ಆಡಿಟಿಂಗ್ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತಿದ್ದ ವ್ಯಕ್ತಿಯನ್ನು ಗೋಕರ್ಣದ ಪಿ.ಎಸ್.ಐ ನವೀನ್ ನಾಯ್ಕ ನೇತ್ರತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಗೋಕರ್ಣದಲ್ಲಿ ಆರೋಪಿತ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಹೆಗ್ಗೋಡು ರಸ್ತೆಯ ವಿಜಯನಗರ ಎರಡನೇ ಕ್ರಾಸ್ ನಿವಾಸಿ ಪ್ರಶಾಂತ್ .ಟಿ.ಎಸ್ ಎಂಬಾತ ಗೋಕರ್ಣದಲ್ಲಿ ಸತೀಶ್ ಎಂಬುವವರನ್ನು ನಂಬಿಸಿ ಹೊಂಡಾ ಡಿಯೋ ಮೋಟರ್ ಬೈಕ್ (ಮೌಲ್ಯ- 75,000₹) ನನ್ನು ವಂಚಿಸಿ ತೆಗೆದುಕೊಂಡು ಪರಾರಿಯಾಗಿದ್ದ.

ಈ ಕುರಿತು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ತನಿಖೆ ಕೈಗೊಂಡ ಠಾಣೆಯ ಪಿ.ಎಸ್.ಐ ನವೀನ್ ನೇತ್ರತ್ವದ ತಂಡ ಹಲವು ವಂಚನೆಯಲ್ಲಿ ಭಾಗಿಯಾಗಿದ್ದ ಈತನನ್ನು ಬಂಧಿಸಿ ,ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ನವೀನ್ ನಾಯ್ಕ, ಎ.ಎಸ್.ಐ ನಾರಾಯಣ ಗುನಗಿ, ಎ.ಎಸ್.ಐ ಅರವಿಂದ್ ಶಟ್ಟಿ, ವಸಂತ್ ನಾಯ್ಕ, ನಾಗರಾಜ್ ಪಟಗಾರ್, ರಾಜೇಶ್ ನಾಯ್ಕ,ಸಚಿನ್ ನಾಯ್ಕ, ಮಂಜುನಾಥ್ , ಸಂತೋಷ್ ,ಶ್ರೀಪಾದನಾಯ್ಕ,ಹರೀಶ್ ನಾಯ್ಕ ಭಾಗಿಯಾಗಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!