Honnavara ದೇವಸ್ಥಾನದ ಗಂಟೆಯನ್ನೂ ಬಿಡದ ಕಳ್ಳ! ಜಿಲ್ಲೆಯಲ್ಲಿ ಅಭದ್ರವಾದ ದೇವರು!

Honnavara temple theft news Honnavara temple theft news

ಹೊನ್ನಾವರ:- ಹಾಡಹಗಲೇ ದೇವಸ್ಥಾನದ ಗಂಟೆಗಳನ್ನೂ( Bell) ಬಿಡದೇ ಕಳ್ಳತನ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಜೋಡಿಕಟ್ಟೆ ಮಾರುತಿ ದೇವಸ್ಥಾನದಲ್ಲಿ ನಡೆದಿದೆ.

ಹೊನ್ನಾವರ ಪಟ್ಟಣದ ಕೆಳಗಿನಪಾಳ್ಯದಲ್ಲಿರುವ ಜೋಡಿಕಟ್ಟೆ ಮಾರುತಿ ದೇವಸ್ಥಾನದಲ್ಲಿ ಬೆಳಿಗ್ಗೆ 9 ಗಂಟೆಗೆ ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿ

ಸುಮಾರು ಒಂದು ಗಂಟೆ ದೇವಸ್ಥಾನದಲ್ಲೇ ಕುಳಿತು ಜನರಿಲ್ಲದ್ದನ್ನ ಗಮನಿಸಿದ ಬಳಿಕ 2 ಗಂಟೆಗಳನ್ನ ಕದ್ದು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗಿದ್ದಾನೆ.

Advertisement

ಹಲವು ಸಮಯ ಕಳೆದ ಬಳಿಕ ಗಂಟೆಗಳ ನಾಪತ್ತೆ ಗಮನಿಸಿದ ಆಡಳಿತ ಮಂಡಳಿ ಬಳಿಕ ಸಿಸಿಕ್ಯಾಮೆರಾ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ.

ಇದನ್ನೂ ಓದಿ:-ಕಾರವಾರದಲ್ಲಿ ಪ್ರಸಿದ್ಧ ವೀರ ಗಣಪತಿ ದೇವಸ್ಥಾನ ಕ್ಕೆ ಕನ್ನ ಹಾಕಿದ ಕಳ್ಳರು

ದೇವಸ್ಥಾನ ಆಡಳಿತ ಮಂಡಳಿಯಿಂದ ದೂರು ದಾಖಲಿಸಿದ್ದು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಕಳೆದ ಮೂರು ದಿನದಲ್ಲಿ ಜಿಲ್ಲೆಯಲ್ಲಿ ಐದಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಕಳ್ಳತನ ವರದಿಯಾಗಿದೆ‌.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement