ಕರೋನಾ ಸೋಂಕು ಹೆಚ್ಚಳದಲ್ಲಿ ಶಿರಸಿ,ಸಿದ್ದಾಪುರ ಅಪಾಯಕಾರಿ ತಾಲೂಕು! ರಾಜ್ಯ ಆರೋಗ್ಯ ಇಲಾಖೆ ಹೊರಹಾಕಿತು ಮಾಹಿತಿ.

3161

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲೇ ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳು ಕರೋನಾ ಸೋಂಕಿನ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ಅತೀ ಅಪಾಯಕಾರಿ ತಾಲೂಕುಗಳ ಪಟ್ಟಿಯಲ್ಲಿ ಸೇರಿವೆ.
ಜಿಲ್ಲೆಯಲ್ಲಿ ಶಿರಸಿ- 54.39% ,ಸಿದ್ದಾಪುರ- 30.11% ಸೋಂಕು ಇದ್ದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿಯಂತೆ ಈ ಎರಡು ತಾಲೂಕು ಅಪಾಯಕಾರಿ ಎಂದು ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ ರೆಡ್ ಝೋನ್ ಇದ್ದ ತಾಲೂಕುಗಳಲ್ಲಿ ಶಿರಸಿ ಸಹ ಒಂದಾಗಿತ್ತು. ಆದರೆ ಸಿದ್ದಾಪುರ ತಾಲೂಕು ರೆಡ್ ಝೋನ್ ನಲ್ಲಿ ಇರಲಿಲ್ಲ. ಆದರೇ ಇದೀಗ ಜಿಲ್ಲೆಯಲ್ಲಿಯೇ ಅತೀ ಅಪಾಯಕಾರಿ ತಾಲೂಕು ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.

ಶಿರಸಿಯಲ್ಲಿ ಇಂದಿನ ಆರೋಗ್ಯ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲೇ ಅತೀ ಹೆಚ್ವು

782 ಜನ ಸೊಂಕಿತರು ಚಿಕಿತ್ಸೆ ಪಡೆಯುತಿದ್ದು 98 ಜನ ಈವರೆಗೆ ಸಾವು ಕಂಡಿದ್ದಾರೆ. ಒಟ್ಟು ಈವರೆಗೆ 6095 ಜನ ಕರೋನಾ ಸೋಂಕಿತರಾಗಿದ್ದಾರೆ.

ಸಿದ್ದಾಪುರದಲ್ಲಿ 506 ಜನ ಸದರಿ ಸೋಂಕಿತರು ಚಿಕಿತ್ಸೆ ಪಡೆಯುತಿದ್ದು ,24 ಜನ ಸಾವುಕಂಡಿದ್ದಾರೆ‌.ಅತೀ ಚಿಕ್ಕ ತಾಲೂಕಿನಲ್ಲಿ ಈವರೆಗೆ 3930 ಜನ ಕರೋನಾ ಸೋಂಕಿತರಾಗಿದ್ದಾರೆ.

ಏಕಾ ಏಕಿ ಹೆಚ್ಚಾಗಲು ಕಾರಣ ಏನು?

ಈ ಎರಡು ತಾಲೂಕಿನಲ್ಲಿ ಕರೋನಾ ಸೋಂಕು ಹೆಚ್ಚಾಗಲು ಬೆಂಗಳೂರಿನಿಂದ ತಮ್ಮೂರಿಗೆ ಮರಳಿ ಬಂದ ಉದ್ಯೋಗಿಗಳು ಕಾರಣವಾದರೆ,ಅತೀ ಹೆಚ್ಚು ಮದುವೆ ಕಾರ್ಯಕ್ರಮಗಳು ನಡೆದಿರುವುದು ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗಲು ಕಾರಣವಾಗಿದೆ. ಇದರ ಜೊತೆಗೆ ಸೋಂಕಿತರು ಚಿಕಿತ್ಸೆಗೆ ಆಸ್ಪತ್ರೆಗೆ ಬಾರದೇ ಮುಚ್ಚಿಟ್ಟಿರುವುದು ಸಹ ಈ ಪ್ರದೇಶದಲ್ಲಿ ಸೋಂಕು ತೀವ್ರಗೊಳ್ಳಲು ಕಾರಣವಾಗಿದೆ.

ಹೀಗಾಗಿ ಆರೋಗ್ಯ ಇಲಾಖೆ ಈ ಭಾಗದಲ್ಲಿ ತೀವ್ರ ನಿಗ ಇಟ್ಟಿದ್ದು ಪ್ರತಿ ಮನೆ-ಮನೆ ಭಾಗಕ್ಕೆ ಜ್ವರ ಪರೀಕ್ಷಾ ತಂಡ ಸಹ ಸಮೀಕ್ಷೆ ನಡೆಸುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಹೆಚ್.ಕೆ ಕೃಷ್ಣಮೂರ್ತಿ ರವರು ಮಾಹಿತಿ ನೀಡಿದ್ದಾರೆ.

ಶಿರಸಿ ಈಗಾಗಲೇ ರೆಡ್ ಝೋನ್ ನಲ್ಲಿ ಇದೆ. ಆದರೇ ಇದೀಗ ಸಿದ್ದಾಪುರ ಸಹ ರೆಡ್ ಝೋನ್ ಆಗುವ ಸಾಧ್ಯತೆಗಳಿವೆ.

ಸೋಂಕು ಹೆಚ್ಚಳ ಕೋವಿಡ್ ತಪಾಸಣಾ ಕೇಂದ್ರ ಶೀಘ್ರದಲ್ಲಿ ಶಿರಸಿಯಲ್ಲಿ!

ಕರೋನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಶಿರಸಿ ಭಾಗದಲ್ಲಿ ಅತ್ಯವಷ್ಯವಿರುವ ಕೋವಿಡ್ ಪರೀಕ್ಷಾ ಕೇಂದ್ರವನ್ನು ತೆರೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಅವರು ಶಿರಸಿ ತಾಲೂಕು ಆಸ್ಪತ್ರೆಯಲ್ಲಿ ಶೀಘ್ರದಲ್ಲಿ ತಪಾಸಣಾ ಕೇಂದ್ರ ತೆರೆಯಲಾಗುತ್ತದೆ. ಲಾಕ್ ಡೌನ್ ಸಡಿಲಿಕೆ ಸದ್ಯಕ್ಕೆ ಮಾಡುವ ಬಿಡುವ ಕುರಿತು ಇನ್ನೆರೆಡು ದಿನದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದು ಮುಂದಿನ ದಿನದಲ್ಲಿ ಈ ಪ್ರದೇಶಗಳು ಗ್ರೀನ್ ಝೋನ್ ಗೆ ಬರಬಹುದೇ ಎಂಬುದನ್ನು ಕಾದುನೋಡಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!