ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಮುರುಡೇಶ್ವರ ದೇವಸ್ಥಾನದ ಶಿವನ ಮೂರ್ತಿಯ ಚಿತ್ರವನ್ನು ವಿರೂಪಗೊಳಿಸಿ ಐಸಿಸ್ ನ ಪತ್ರಿಕೆ ದಿ ವಾಯ್ಸ್ ಆಪ್ ಹಿಂದ್ ನಲ್ಲಿ ಪ್ರಕಟವಾಗುತಿದ್ದಂತೆ ಇತ್ತ ಜಿಲ್ಲೆಯ ಮುರುಡೇಶ್ವರ ದೇವಸ್ಥಾನಕ್ಕೆ ಗೃಹಸಚಿವರ ಸೂಚನೆಯಂತೆ ಭದ್ರತೆ ವದಗಿಸಲಾಗಿದೆ.


ಇಂದಿನಿಂದ ಜಾರಿ ಬರುವಂತೆ ಜಿಲ್ಲಾ ಪೊಲೀಸ್ ಇಲಾಖೆ ಯಿಂದ ಒಂದು ಪೊಲೀಸ್ ತುಕಡಿಯನ್ನು ನಿಯೋಜನೆ ಮಾಡಿದ್ದು ,ದೇವಸ್ಥಾನದ ಒಳಭಾಗದಲ್ಲಿ ಎ.ಎಸ್.ಐ ಸೆರಿದಂತೆ ಹತ್ತು ಜನ ಪೊಲೀಸರನ್ನು ಭದ್ರತೆ ಹಾಗೂ ಬರುವ ಭಕ್ತರ ತಪಾಸಣೆಗೆ ನಿಯೋಜನೆ ಮಾಡಲಾಗಿದೆ.
ವಿವಿಧ ಸಂಘಟನೆಯಿಂದ ಖಂಡನೆ

ಇನ್ನು ಶಿವನ ವಿಗ್ರಹ ವಿರೂಪಗೊಳಿಸಿ ಪ್ರಕಟಿಸಿದ್ದಕ್ಕೆ ಮುರುಡೇಶ್ವರದಲ್ಲಿ ಐಸಿಸ್ ಪ್ರತಿಕೃತಿ ಧಹನ ಮಾಡಿ ಜಿಜೆಪಿ ಯುವಮೂರ್ಚಾದಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು. ತಪ್ಪಿತಸ್ತರ ವಿರುದ್ಧ ಶೀಘ್ರ ಕ್ರಮ ಜರುಗಿಸಯವಂತೆ ಆಗ್ರಹಿಸಿದ್ದಾರೆ.ಇದಲ್ಲದೇ ಭಟ್ಕಳ,ಕುಮಟಾ ಶಾಸಕರು ಸಹ ತಕ್ಷಣ ತನಿಖೆ ನಡೆಸಿ ತಪ್ಪಿತಸ್ತರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.