BREAKING NEWS
Search

9.6 ಅಡಿ ಉದ್ದದ ಅಪರೂಪದ ಬಿಳಿ ಹೆಬ್ಬಾವು ರಕ್ಷಣೆ|ಏನಿದರ ವಿಶೇಷ|video ನೋಡಿ

255

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದ ಗಾಂಧಿನಗರದ ದೇವಿ ಮುಕ್ರಿ ಎಂಬುವರ ಮನೆಯಲ್ಲಿ ಸೋಮವಾರ ರಾತ್ರಿ ಉರಗ ರಕ್ಷಕ ಪವನ ನಾಯ್ಕ ಅವರು 9.6 ಅಡಿ ಉದ್ದದ ಅಪರೂಪದ ಬಿಳಿ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.

ಬಿಳಿ ಹೆಬ್ಬಾವಿನ ವಿಡಿಯೋ ನೋಡಿ:-

ಕಳೆದ ವರ್ಷ ಕುಮಟಾ ತಾಲ್ಲೂಕಿನ ಮಿರ್ಜಾನಿನಲ್ಲಿ ಸಿಕ್ಕ ಸಣ್ಣ ಬಿಳಿ ಹೆಬ್ಬಾವು ರಕ್ಷಿಸಿ ಕಾಡಿಗೆ ಬಿಡಲಾಗಿತ್ತು. ರಾಜ್ಯದಲ್ಲಿ ಕಂಡ ಮೂರು ಬಿಳಿ ಹೆಬ್ಬಾವುಗಳ ಪೈಕಿ ಎರಡು ಕುಮಟಾದಲ್ಲಿ ಸಿಕ್ಕಿದ್ದು ಈಬಾರಿ ಸಿಕ್ಕ ಅಪರೂಪದ ಬಿಳಿ ಹೆಬ್ಬಾವಿನಲ್ಲಿ ಅತೀ ದೊಡ್ಡದು ಇದಾಗಿದೆ. ದೇಶದಲ್ಲೇ ಬಿಳಿ ಹೆಬ್ಬಾವುಗಳಲ್ಲಿ ಇದು ದೊಡ್ಡದಿರುವುದೇ ವಿಶೇಷ ಎಂದು ಉರುಗ ಪ್ರೇಮಿ ಪವನ ನಾಯ್ಕ ತಿಳಿಸಿದ್ದಾರೆ.

ಬಿಳಿ ಹೆಬ್ಬಾವು ವಿಶೇಷ ಏನು?

ಸಾಮಾನ್ಯವಾಗಿ ಸಿಗುವ ಹೆಬ್ಬಾವಿಗೆ ಹಾಗೂ ಬಿಳಿ ಹೆಬ್ಬಾವಿಗೆ ವ್ಯತ್ಯಾಸ ಇರುವುದಿಲ್ಲ. ಆದರೇ ದೇಹದಲ್ಲಿ ಮೆಲಿನಿನ್ ಕೊರತೆಯಿಂದ ಹೆಬ್ಬಾವು ಜೈವಿಕವಾಗಿ ಬಿಳಿ ಬಣ್ಣ ಪಡೆಯುತ್ತದೆಯೇ ಹೊರತು ವಿಶೇಷವಾಗಿ ಇದು ಪ್ರತ್ತೇಕ ಜಾತಿಯದ್ದು ಅಲ್ಲ .

ಇದು ದೇಶದಲ್ಲೇ ಅತಿ ದೊಡ್ಡ ಬಿಳಿ ಹೆಬ್ಬಾವು ಆಗಿರುವ ಸಾಧ್ಯತೆ ಇದೆ. ಹೆಬ್ಬಾವಿನ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಿ ಮೈಸೂರು ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಕುಮಟಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:-Uttrakannada|ಹೆದ್ದಾರಿಯಲ್ಲಿ ದರೋಡೆ-ಇಬ್ಬರು ದರೋಡೆಕೋರರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಉರುಗಗಳ ಸಂತತಿಯ ಆವಾಸ ಸ್ಥಾನ ಕೂಡ. ಇದೀಗ ಎರಡನೇ ಬಾರಿ ಬಿಳಿ ಹೆಬ್ಬಾವು ಇದೇ ಭಾಗದಲ್ಲಿ ದೊರೆತಿದ್ದು ವಿಶೇಷವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!