BREAKING NEWS
Search

ಹಳಿಗೆ ತಲೆಯಿಟ್ಟು ರೈಲ್ ರೋಕೋ ಪ್ರತಿಭಟನೆ|ಹತ್ತು ದಿನ ಕಾಲಾವಕಾಶ ಕೇಳಿದ ರೈಲ್ವೆ ಇಲಾಖೆ.

121

ಕಾರವಾರ :- ಮಂಗಳೂರಿನಿಂದ ಮಹಾರಾಷ್ಟ್ರಕ್ಕೆ ತೆರಳುವ ಮೆಮು ಟ್ರೈನ್ ನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಹಿಂದಿನಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಾರವಾಡ ಮಿರ್ಜಾನ್ ,ಚಿತ್ರಾಪುರ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ಹಾಗೂ ಸುಕ್ರಜ್ಜಿ ನೇತ್ರತ್ವದಲ್ಲಿ ಜನಶಕ್ತಿ ವೇದಿಕೆ ವತಿಯಿಂದ ಅಂಕೋಲದ ಹಾರವಾಡದಲ್ಲಿ ರೈಲನ್ನು ತಡೆದು ಪ್ರತಿಭಟನೆ ನಡೆಸಲಾಯಿತು.

ಈ ಹಿಂದೆ ಮೆಮು ಟ್ರೈನ್ ನನ್ನು ಜಿಲ್ಲೆಯ ಹಾರವಾಡ,ಮಿರ್ಜಾನ್ ,ಚಿತ್ರಾಪುರ ನಿಲ್ದಾಣದಲ್ಲಿ ನಿಲ್ಲಿಸಲಾಗುತಿತ್ತು.ಆದರೇ ಇದೀಗ ಈ ನಿಲ್ದಾಣದಲ್ಲಿ ನಿಲ್ಲಸದೇ ತೆರಳಲು ಕೊಂಕಣ ರೈಲ್ವೆ ಇಲಾಖೆ ಸೂಚನೆ ನೀಡಿದ್ದರಿಂದ ಹಲವು ಪ್ರಯಾಣಿಕರಿಗೆ ತೊಂದರೆಯಾಗುತಿದ್ದು ಈ ಕಾರಣದಿಂದ ಮಂಗಳೂರಿನಿಂದ ಮಹಾರಾಷ್ಟ್ರಕ್ಕೆ ತೆರಳುವ ರೈಲನ್ನು ಕೆಲವು ಸಮಯ ತಡೆಹಿಡಿದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವನಾಯ್ಕ ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.

ಇನ್ನು ಪ್ರತಿಭಟನೆಗೆ ರೈಲ್ವೆ ಇಲಾಖೆಯವರು ಸ್ಪಂದಿಸಿದ್ದು ಹತ್ತು ದಿನದ ಒಳಗೆ ಮೆಮೂ ರೈಲನ್ನು ಮೂರು ಸ್ಥಳಗಳಲ್ಲಿ ನಿಲ್ಲಿಸಲು ಬೇಕಾದ ವ್ಯವಸ್ಥೆ ಕೈಗೊಳ್ಳುವ ಭರವಸೆಯನ್ನು ರೈಲ್ವೆ ಇಲಾಖೆ ಅಧಿಕಾರಿಗಳು ನೀಡಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!