ಹೊನ್ನಾವರದಲ್ಲಿ ತಾಂತ್ರಿಕ ತೊಂದರೆ:ವಿಳಂಭವಾದ ಕರೋನಾ ಲಸಿಕಾ ವಿತರಣೆ!

769

ಕಾರವಾರ: ಕೊವಿಡ್ ಆ್ಯಪ್ ನಲ್ಲಿ ತಾಂತ್ರಿಕ ತೊಂದರೆಯಾದ ಕಾರಣ ಲಸಿಕಾ ವಿತರಣೆ ವಿಳಂಭವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ತಾಲ್ಲೂಕಾ ಆಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರದಲ್ಲಿ ನಡೆದಿದೆ.

ಲಸಿಕಾ ವಿತರಣೆ ಸಂಬಂಧ ಕೊವಿಡ್ ಆ್ಯಪ್ ಸಿದ್ದಪಡಿಸಲಾಗಿದ್ದು ಅಲ್ಲಿ ನೊಂದಣಿಯಾದವರಿಗೆ ಲಸಿಕೆ ನೀಡಲಾಗುತ್ತಿದೆ.

ಲಸಿಕೆ ನೀಡಿದ ಬಳಿಕ ಮತ್ತೆ ಆ ಆ್ಯಪ್ ನಲ್ಲಿ ಲಸಿಕೆ ತೆಗೆದುಕೊಂಡವರ ಬಗ್ಗೆ ಅಪಡೆಟ್ ಮಾಡಬೇಕಿದೆ. ಆದರೆ ಹೊನ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಷ್ಟೆ ಪ್ರಯತ್ನಿಸಿದರು ತಾಂತ್ರಿಕ ಸಮಸ್ಯೆಯಿಂದ ಆ್ಯಪ್ ಓಪನ್ ಆಗದ ಹಿನ್ನೆಲೆಯಲ್ಲಿ  ಈ ಬಗ್ಗೆ ದೆಹಲಿಯ ತಾಂತ್ರಿಕ ತಂಡದ ಗಮನಕ್ಕೆ ತರಲಾಗಿದೆ.

ಹೊನ್ನಾವರ

ಆದರೆ ಅವರಿಂದಲೂ ಸರಿಪಡಿಸಲು ಸಾಧ್ಯವಾಗದ ಕಾರಣ ಕೊನೆಗೆ ಸದ್ಯ ಮ್ಯಾನುವಲ್ ನೋಂದಣಿ ಮಾಡಿಕೊಂಡು ನೋಂದಾಯಿತ ಆರೋಗ್ಯ  ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ.

ಕಾರವಾರದಲ್ಲಿ ಬಾಲಚಂದ್ರ ಶಿರೋಡ್ಕರ್ ಗೆ ಮೊದಲ ಲಸಿಕೆ.

ಕಾರವಾರ ವೈದ್ಯಕೀಯ ಮಹಾವಿದ್ಯಾಲಯದ ಗ್ರೂಪ್ ಡಿ ನೌಕರ ಬಾಲಚಂದ್ರ ಶಿರೋಡ್ಕರ್ 43 ವರ್ಷ ಇವರು ಕೋವಿಡ್-19 ಪ್ರಥಮ ಲಸಿಕೆಯನ್ನು ಕಾರವಾರ ಮೆಡಿಕಲ್ ಕಾಲೇಜಿನ ಲಸಿಕಾ ಕೇಂದ್ರದಲ್ಲಿ ಪಡೆದಿದ್ದಾರೆ.

ಪ್ರಧಾನ ಮಂತ್ರಿ ಭಾಷಣ ವೀಕ್ಷಣೆ ಮಾಡಿದ ಶಾಸಕಿ ರೂಪಾಲಿ ನಾಯ್ಕ.

ದಿವ್ಯಾ ಕೃಷ್ಣ ಗುನಗಿ 2ನೇಯವರಾಗಿ ಡೋಸ್ ಪಡೆದರೆ ಛಾಯಾ ದುರ್ಗೇಕರ್ ಅವರು 3ನೇಯವರಾಗಿ ಲಸಿಕೆ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಲಸಿಕೆ ಪಡೆದುಕೊಂಡವರ ವಿವರ ಈ ಕೆಳಗಿನಂತಿದೆ.

ನಿಮ್ಮೂರಿನ ಸುದ್ದಿಗಳನ್ನು ಈ ಕೆಳಗಿನ ನಂಬರ್ ಗೆ ವಾಟ್ಸ್ ಅಪ್ ಮಾಡಿ:- 9741058799
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!