ಗಣೇಶ ಚತುರ್ಥಿಗೆ ಕರೋನಾ ಆತಂಕ-ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಷ್ಟಾಪನೆಯಾದ ಗಣಪತಿಗಳೆಷ್ಟು? ವಿವರ ನೋಡಿ.

740

ಕಾರವಾರ :-ಗಣೇಶ ಚತುರ್ಥಿ ಗೆ ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಹೆಚ್ಚಾಗುವ ಆತಂಕ ಶುರುವಾಗಿದೆ. ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆಯಿಂದ ಹಿಡಿದು ರಜೆಯ ಮಜಾ ಅನುಭವಿಸಲು ಬರುವ ಪ್ರವಾಸಿಗರದ್ದೇ ದೊಡ್ಡ ಸವಾಲು.


ಉತ್ತರ ಕನ್ನಡ ಜಿಲ್ಲೆ ಪ್ರವಾಸೋಧ್ಯಮಕ್ಕೆ ಹೆಚ್ಚು ಹೆಸರು ಮಾಡಿದ ಜಿಲ್ಲೆ.ಹಬ್ಬ ಹರಿದಿನಗಳ ಜೊತೆ ರಜೆ ಬಂತು ಎಂದರೆ ಗಡಿ ಭಾಗದ ಗೋವಾ, ಮಹಾರಾಷ್ಟ್ರ ಹಾಗೂ ಕೇರಳ,ಆಂದ್ರ ಭಾಗದ ಜನರು ಈ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ಹಿನ್ನಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ಕರೋನಾ ಸೋಂಕು ಹೆಚ್ಚಾಗದಂತೆ ಜಿಲ್ಲೆಗೆ ಸೀಮಿತವಾಗಿ ಹಲವು ನಿಯಮಗಳನ್ನು ಕಠಿಣವಾಗಿ ಜಾರಿಗೆ ತಂದಿದೆ. ಇದರಂತೆ ಜಿಲ್ಲೆಯ ಕಾರವಾರ ದಲ್ಲಿ ನಡೆಯುವ ಸಂತೆಯನ್ನು ಬಂದ್ ಮಾಡಿದ್ದು ,ಹೊರ ಜಿಲ್ಲೆಯಿಂದ ಬರುವ ವ್ಯಾಪಾರಸ್ತರಿಗೆ ನಿರ್ಬಂಧ ವಿಧಿಸಲಾಗಿದೆ.ಇನ್ನು ಕಾರವಾರ-ಗೋವಾ ಹಾಗೂ ಉಡುಪಿ ಗಡಿಯಲ್ಲಿ ಕರೋನಾ ನಿಯಮದಂತೆ ಕಠಿಣ ತಪಾಸಣೆ ನಡೆಸಲಾಗುತ್ತಿದೆ. ಪ್ರವಾಸೋಧ್ಯಮ ಸ್ಥಳಗಳಾದ ಗೋಕರ್ಣ,ಮುರಡೇಶ್ವರ,ಕಾರವಾರ,ದಾಂಡೇಲಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಚಕ್ ಪೋಸ್ಟ್ ನಿರ್ಮಿಸಿ ಬರುವ ಪ್ರವಾಸಿಗರನ್ನು ತಪಾಸಣೆ ಮಾಡಲಾಗುತ್ತಿದ್ದು ಕೋವಿಡ್ ನೆಗಟಿವ್ ರಿಪೋರ್ಟ ಇಲ್ಲದೇ ವಾಸ್ತವ್ಯಕ್ಕೆ ಬರುತ್ತಿರುವ ಜನರಿಗೆ ಕಡ್ಡಾಯ ಕ್ವಾರಂಟೈನ್ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಸಾರ್ವಜನಿಕ ಗಣಪತಿಗಳ ದರ್ಬಾರ್!

ಜಿಲ್ಲೆಯಲ್ಲಿ 2412 ಸಾರ್ವಜನಿಕ ಗಣಪತಿ ಇಡಲು ಅವಕಾಶ ಮಾಡಿಕೊಡಲಾಗಿದೆ. ಜಿಲ್ಲೆಯಲ್ಲೇ ಅತೀ ಹೆಚ್ಚು 1265 ಕಾರವಾರ ವಿಭಾಗದಲ್ಲಿ ಸಾರ್ವಜನಿಕವಾಗಿ ಗಣಪತಿ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗಿದೆ.ಇನ್ನು ರಾಜ್ಯದಲ್ಲೇ ಪ್ರಸಿದ್ಧ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ರಥೋತ್ಸವ ಕ್ಕೆ ಹಾಗೂ ಪೂಜೆಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು ಹೆಚ್ಚಿನ ಭಕ್ತರು ಬರದಂತೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಸಂಪ್ರದಾಯದಂತೆ ಎಲ್ಲಾ ವಿಧಿ ವಿಧಾನಗಳು ನಡೆದರೂ ಈ ಭಾರಿ ಹೆಚ್ಚಿನ ಭಕ್ತರಿಗೆ ಗಣಪತಿ ದರ್ಶನಕ್ಕೆ ಅವಕಾಶ ವಂಚಿತವಾಗಲಿದೆ.

ಯಾವ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ಗಣಪತಿ ಸ್ಥಾಪನೆ?(ಪೊಲೀಸ್ ಇಲಾಖೆ ಮಾಹಿತಿಯಂತೆ ಇಲಾಖೆವಾರು ವಿಭಾಗಗಳು)

ಕಾರವಾರ ವಿಭಾಗ- 1265
ಶಿರಸಿ-ಮುಂಡಗೋಡು ವಿಭಾಗ- 527
ದಾಂಡೇಲಿ ವಿಭಾಗ(ಹಳಿಯಾಳ,ಜೋಯಿಡಾ ಸೇರಿ)- 251
ಭಟ್ಕಳ ವಿಭಾಗ(ಕುಮಟಾ ತಾಲೂಕು ಸೇರಿ)- 369

ಸಂಘಟನೆಗಳ ಒತ್ತಾಯದ ಮೇಲೆ ಜಿಲ್ಲೆಯಲ್ಲಿ ಸಾರ್ವಜನಿಕ ಗಣಪತಿಗಳ ಸ್ಥಾಪನೆಗೆ ಹೆಚ್ಚು ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ ಪ್ರವಾಸಿಗರು ಸಹ ರಾಜ್ಯ ಮತ್ತು ಹೊರ ರಾಜ್ಯದಿಂದ ಹೆಚ್ಚು ಹೆಚ್ಚು ಬರತೊಡಗಿದ್ದಾರೆ. ಹೀಗಾಗಿ ಮತ್ತೆ ಕರೋನಾ ಹೆಚ್ಚಾಗುವ ಆತಂಕ ಸಹ ಕಾಡುತಿದ್ದು,ಸೋಂಕು ಹೆಚ್ಚಾಗದಂತೆ ತಡೆಯಲು ಕಠಿಣ ನಿಯಮಗಳ ಮೂಲಕ ತಡೆಗೆ ಜಿಲ್ಲಾಡಳಿ ಮುಂದಾಗಿದ್ದು ಮುಂದೆ ಹಬ್ಬದ ಪ್ರತಿಫಲ ಏನು ಎಂಬುದನ್ನು ಕಾದು ನೋಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!